ಹುಬ್ಬಳ್ಳಿ –
ಹೊಸ ಕನಸುಗಳೊಂದಿಗೆ ಹೊಸ ಅಭಿವೃದ್ದಿ ಯೋಜನೆಗಳೊಂದಿಗೆ ಲೋಕಸಭಾ ಅಖಾಡಕ್ಕೆ ರಾಜು ನಾಯಕವಾಡಿ – ಪಕ್ಷಾತೀತವಾಗಿ ರಾಜು ನಾಯಕವಾಡಿಯವರಿಗೆ ಹರಿದು ಬರುತ್ತಿದೆ ಅಭೂತಪೂರ್ವ ಬೆಂಬಲ ಹೌದು
ರಾಜು ಅನಂತಸಾ ನಾಯಕವಾಡಿ ಹುಬ್ಬಳ್ಳಿಯ ಯುವ ಮುಖಂಡ.ರಾಜ್ಯದ ಅದರಲ್ಲೂ ಉತ್ತರ ಕರ್ನಾಟಕದ ಯಾವುದೇ ಸಮಸ್ಯೆಗಳಿರಲಿ ಯಾವುದೇ ವಿಚಾರವಿರಲಿ ಸದಾ ಧ್ವನಿ ಎತ್ತುತ್ತಾ ಹೋರಾಟದ ಮುಂಚೂಣಿಯಲ್ಲಿರುವ ಯುವ ಮುಖಂಡ.ಅಧಿಕಾರ ಇರಲಿ ಇಲ್ಲದಿರಲಿ ಸದಾ ಉತ್ಸಾಹದಿಂದ ಹೋರಾಟದೊಂದಿಗೆ ಸಾರ್ವಜ ನಿಕರ ಧ್ವನಿಯಾಗಿ ಕೆಲಸವನ್ನು ಮಾಡ್ತಾ ಇದ್ದಾರೆ ರಾಜು ಅನಂತಸಾ ನಾಯಕವಾಡಿ.
ರಾಜಕೀಯವಾಗಿ ಸಾಕಷ್ಟು ಪಕ್ಷ ಸಂಘಟನೆ ಮಾಡಿಕೊಂಡು ಬಂದಿರುವ ಇವರಿಗೆ ರಾಜಕೀಯ ಪಕ್ಷಗಳು ಇವರನ್ನು ಬಳಕೆ ಮಾಡಿಕೊಂಡಿವೆ ಹೊರತು ಯಾವುದೇ ರೀತಿಯಲ್ಲೂ ಬೆಳೆಸಿಲ್ಲ ಆದರೂ ಕೂಡಾ ಯಾವುದಕ್ಕೂ ತಲೆ ಕೆಡಿಸಿಕೊ ಳ್ಳದೇ ಕಳೆದ ಬಾರಿ ವಿಧಾನಸಭಾ ಚುನಾವಣೆ ಯಲ್ಲಿ ಎಲ್ಲವೂ ಸಿದ್ದವಾಗಿದೆ ಎನ್ನುವಷ್ಟರಲ್ಲಿಯೇ ಜೆಡಿಎಸ್ ಪಕ್ಷದವರು ಕೈ ಕೊಟ್ಟರು.ಸದಾ ಓಡಾಡಿ ಕೊಂಡು ಮತದಾರರ ಸಂಪರ್ಕದಲ್ಲಿರುವ ಇವರು ಸಧ್ಯ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಕೆಸರೆಚಾಟದ ನಡುವೆ ಸ್ಪರ್ಧೆಯನ್ನು ಮಾಡಿದ್ದಾರೆ
.ಒಂದು ಕಡೆಗೆ ಅವರಿಬ್ಬರ ಜಗಳದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಮತದಾರರು ಕೂಡಾ ಹೊಸ ಬದಲಾವಣೆಯನ್ನು ಬಯಸಿದ್ದು ಇದೇ ಭರವಸೆಯ ನಡುವೆ ರಾಜು ಅನಂತ ನಾಯಕವಾಡಿಯವರು ಹೊಸ ಹೊಸ ಕನಸು ಹೊಸ ಅಭಿವೃದ್ದಿ ಯೋಜನೆಗಳ ನಡುವೆ ಧಾರವಾಡ ಜಿಲ್ಲೆಯನ್ನು ಮಾದರಿಯನ್ನಾಗಿ ಮಾಡುವ ಉದ್ದೇಶದಿಂದ ಯುವ ಪಡೆಯನ್ನು ಬೆನ್ನಿಗೆ ಕಟ್ಟಿಕೊಂಡು ಕ್ಷೇತ್ರದಲ್ಲಿ ತಿರುಗಾಡುತ್ತಿದ್ದು ಹೊದಲ್ಲೇಲ್ಲ ಅಭೂತಪೂರ್ಣ ಬೆಂಬಲ ಕಂಡು ಬರುತ್ತಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..