ಬೆಂಗಳೂರು –
ಎಸ್ ಎಸ್ ಎಲ್ ಸಿ ಮೌಲ್ಯಮಾಪನಕ್ಕೆ ಹೋಗದ ಶಿಕ್ಷಕರ ಮೇಲೆ ಕೂಡಲೇ ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.ಬೆಂಗಳೂರಿನಲ್ಲಿ ಮಾತನಾಡಿದ ಅವರು ಎಸ್‌ಎಸ್‌ಎಲ್ ಸಿ ಮೌಲ್ಯಮಾ ಪನಕ್ಕೆ ನೋಂದಣಿ ಮಾಡಿ ಗೈರು ಹಾಜರಾಗಿರುವ ಶಿಕ್ಷಕರ ವಿರುದ್ಧ ಕ್ರಮ ಜರುಗಿಸುವಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಉಪ ನಿರ್ದೇಶಕರಿಗೆ ಈಗಾಗಲೇ ನಾನು ಸೂಚನೆಯನ್ನು ನೀಡಿದ್ದು ಯಾವುದೇ ಮುಲಾಜಿಲ್ಲದೇ ಈ ಒಂದು ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದರು.ಇನ್ನೂ ಏಪ್ರಿಲ್ 30 ರಂದು ಎಲ್ಲಾ ಡಿಡಿಪಿಐಗಳಿಗೆ ಸುತ್ತೋಲೆ ನೀಡಿದ್ದು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಶೈಕ್ಷಣಿಕ ಚುಟವಟಿಕೆ ಒಂದು ಭಾಗ. ಮೌಲ್ಯಮಾಪನಕ್ಕೆ ನೋಂದಣಿ ಮಾಡಿಕೊಂಡಿರುವ ಶಿಕ್ಷಕರು ಮೌಲ್ಯಮಾಪನದಲ್ಲಿ ಪಾಲ್ಗೊಂಡಿಲ್ಲ ಎಂದರು
ಡಿಲ್ಲ.ಈ ಕುರಿತು ಪೂರ್ವಾನುಮತಿಯನ್ನು ಪಡೆದಿಲ್ಲ ಇದರಿಂದಾಗಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಮೌಲ್ಯಮಾ ಪನ ಕಾರ್ಯ ವಿಳಂಬವಾಗಿದ್ದು ಫಲಿತಾಂಶ ವಿಳಂಬಕ್ಕೆ ಕಾರಣವಾಗಿರುತ್ತಾರೆ.ಇಂತಹ ಶಿಕ್ಷಕರ ಪಟ್ಟಿಯನ್ನು ತಯಾ ರಿಸಿ ಮೌಲ್ಯಮಾಪನಕ್ಕೆ ನೋಂದಣಿ ಮಾಡಿ ಗೈರು ಹಾಜ ರಾಗಿರುವ ಶಿಕ್ಷಕರ ಪಟ್ಟಿಯನ್ನು ತಯಾರಿಸಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷೆ ಮಂಡಳಿ ನಿರ್ದೆಶಕ ( ಪರೀಕ್ಷೆಗಳು) ಗೋಪಾಲಕೃಷ್ಣ ಅವರು ಸೂಚನೆ ನೀಡಿದ್ದಾರೆ.ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳದ ಶಿಕ್ಷಕರ ವಿರುದ್ಧ ಇದೀಗ ಶಿಸ್ತು ಕ್ರಮದ ಭೀತಿ ಎದುರಿಸುತ್ತಿದ್ದಾರೆ.ನಿರೀಕ್ಷಿತ ಪ್ರಮಾಣದಲ್ಲಿ ಶಿಕ್ಷಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನ ದಲ್ಲಿ ಪಾಲ್ಗೊಳ್ಳದ ಕಾರಣ ಫಲಿತಾಂಶ ಪ್ರಕಟ ದಿನಾಂಕ ವನ್ನು ಅನಿವಾರ್ಯವಾಗಿ ಮುಂದೂಡಲಾಗಿದೆ.ಮೇ. 15 ರೊಳಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿತ್ತು.ಇದೀಗ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರೇ ಮೇ ಮೂರನೇ ವಾರದಲ್ಲಿ ಎಸ್‌ಎಸ್‌ಎಲ್ ಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ.