ಬೆಂಗಳೂರು –
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಹಾಮಾರಿ ಯಿಂದ ಕೊನೆಗೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿ ದ್ದು ಶಾಲಾ ಕಾಲೇಜುಗಳಲ್ಲಿ ವ್ಯಾಕ್ಸಿನೇ ಷನ್ ಮಾಡಿ ಸಲು ಮುಂದಾಗಿದ್ದಾರೆ. ಹೌದು ಇನ್ಮುಂದೆ ಕೋವ್ಯಾ ಕ್ಸಿನ್ 2ನೇ ಡೋಸ್ ಮಾತ್ರ ನೀಡಲು ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ಮೊದಲ ಡೋಸ್ ನೀಡಲು ನಿರ್ಧರಿಸಲಾಗಿದೆ ಎಂದು ಡಿಸಿ ಎಂ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಕೋವಿಡ್ ಟಾಸ್ಕ್ ಫೋರ್ಸ್ ಸಭೆ ಬಳಿಕ ಮಾತನಾ ಡಿದ ಅವರು ಕೋವಿಶೀಲ್ಡ್ ಲಸಿಕೆ ಖರೀದಿಗೆ ಜಾಗತಿ ಕ ಟೆಂಡರ್ ಕರೆಯಲಾಗುತ್ತಿದ್ದು 2 ಕೋಟಿ ಲಸಿಕೆ ತರಿ ಸಲು ಚರ್ಚಿಸಲಾಗಿದೆ.ಆಸ್ಪತ್ರೆ ಹೊರತಾಗಿ ಶಾಲಾ ಕಾಲೇಜುಗಳಲ್ಲೂ ಲಸಿಕೆ ನೀಡಲು ತೀರ್ಮಾನಿಸ ಲಾಗಿದೆ ಎಂದರು.
ಸ್ಥಳಿಯ ಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಲ್ಲಿ ಸಿಸಿಸಿ ಸ್ಥಾಪಿಸಲಾಗುತ್ತಿದ್ದು ಇನ್ಮುಂದೆ ಕೊರೊನಾ ಪಾಸಿಟಿವ್ ಬಂದವರು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಮಾತ್ರ ಚಿಕಿತ್ಸೆ ಪಡೆಯಬೇ ಕು.ಅಲ್ಲದೇ ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆಯಾಗು ತ್ತಿರುವುದರಿಂದ ಬ್ಲ್ಯಾಕ್ ಫಂಗಸ್ ಗೂ ಇಂಜಕ್ಷನ್ ನೀಡಲು ತೀರ್ಮಾನಿಸಲಾಗಿದ್ದು 20,000 ವಯಲ್ಸ್ ಗೆ ಕೇಂದ್ರಕ್ಕೆ ಬೇಡಿಕೆ ಇಡಲಾಗುವುದು ಎಂದು ವಿವ ರಿಸಿದರು.