ಜ್ಯೋತಿಷ್ಯ ಜಾಹೀರಾತು ನಂಬಿ ಲಕ್ಷ ಲಕ್ಷ ಕಳೆದುಕೊಂಡ ಮಹಿಳೆ – ಜಾಹೀರಾತುಗಳನ್ನು ನಂಬಿಕೊಂಡು ಮರಳಾಗುವ ಮುನ್ನ ಹುಷಾರಾಗಿರಿ…..

Suddi Sante Desk
ಜ್ಯೋತಿಷ್ಯ ಜಾಹೀರಾತು ನಂಬಿ ಲಕ್ಷ ಲಕ್ಷ ಕಳೆದುಕೊಂಡ ಮಹಿಳೆ – ಜಾಹೀರಾತುಗಳನ್ನು ನಂಬಿಕೊಂಡು ಮರಳಾಗುವ ಮುನ್ನ ಹುಷಾರಾಗಿರಿ…..

ಶಿವಮೊಗ್ಗ

ಜ್ಯೋತಿಷ್ಯ ಜಾಹೀರಾತು ನಂಬಿ ಲಕ್ಷ ಲಕ್ಷ ಕಳೆದುಕೊಂಡ ಮಹಿಳೆ – ಜಾಹೀರಾತುಗಳನ್ನು ನಂಬಿಕೊಂಡು ಮರಳಾಗುವ ಮುನ್ನ ಹುಷಾರಾಗಿರಿ ಹೌದು

ಹೌದು ಕೆಲವೊಮ್ಮೆ ಜನರು ಹೇಗೆ ಮೋಸ ಹೋಗುತ್ತಾರೆ ಹೇಗೆ ವಂಚನೆಗೊಳಗಾಗುತ್ತಾರೆ ಎಂಬೊದಕ್ಕೆ ಈ ಮಹಿಳೆ ಸಾಕ್ಷಿ. ಯೂ ಟ್ಯೂಬ್‌  ನಲ್ಲಿ ನ ಜ್ಯೋತಿಷ್ಯ ರೊಬ್ಬರು ಹೇಳುವವರ ಜಾಹಿರಾತನ್ನು ನಂಬಿ ಮಹಿಳೆಯೊಬ್ಬರು 9 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.ಜಾಹೀರಾತು ನೋಡಿ ಕರೆ ಮಾಡಿದ ನಗರದ ಮಹಿಳೆಯೊಬ್ಬರು ಮಾತಿಗೆ ಮರುಳಾಗಿ ₹9 ಲಕ್ಷ ಹಣ ಕಳೆದುಕೊಂಡಿ ದ್ದಾರೆ

ಮಹಿಳೆಯೊಬ್ಬರು ತಮ್ಮ ಕುಟುಂಬದಲ್ಲಿ ಆ ಸಮಸ್ಯೆಯ ಬಗ್ಗೆ ಪರಿಹಾರಕ್ಕಾಗಿ ಹುಡುಕಾಟ ನಡೆಸಿದ್ದರು.ಅದೇ ಸಂದರ್ಭದಲ್ಲಿ ಯೂಟ್ಯೂ ಬ್‌ನಲ್ಲಿ ಪ್ರಸಾರವಾಗಿದ್ದ ಜ್ಯೋತಿಷ್ಯದ ಜಾಹೀರಾತು ನೋಡಿ ಅದರಲ್ಲಿದ್ದ ನಂಬರ್‌ಗೆ ಕರೆ ಮಾಡಿದ್ದಾರೆ.ಮಹಿಳೆಯ ಕಷ್ಟ ಆಲಿಸಿದ ಜ್ಯೋತಿಷಿ ಹೆಸರಿನ ಆ ವ್ಯಕ್ತಿ ನಿಮಗೆ ಬಹುದೊಡ್ಡ ಕಂಟಕವಿದೆ.ಅದಕ್ಕೆ ಅಗತ್ಯ ಪರಿಹಾರಗಳನ್ನು ಕಲ್ಪಿಸಬೇಕು ಎಂದು ಹೇಳಿದ್ದಾರೆ.

ಅಲ್ಲದೇ ಆಗಾಗ ಗೂಗಲ್ ಪೇ ಮೂಲಕ ಮಹಿಳೆಯಿಂದ ₹ 6,37,850 ಪಡೆದಿದ್ದಾನೆ. ನಂತರ ಮಹಿಳೆಯೊಂದಿಗೆ ಏಕಾಏಕಿ ಸಂಪರ್ಕ ಕಳೆದುಕೊಂಡಿದ್ದಾರೆ.ಈ ವೇಳೆ ಅವರಿಗೆ ಅನು  ಮಾನ ಬಂದಿದೆ. ಕೆಲ ದಿನಗಳ ನಂತರ ಪುನಃ ಮಹಿಳೆಗೆ ಕರೆ ಮಾಡಿದ್ದ ಆ ವ್ಯಕ್ತಿ ‘ತಾನು ಅಪ. ಘಾತಕ್ಕೀಡಾಗಿ ತಲೆಗೆ ‍ಪೆಟ್ಟು ಬಿದ್ದು ಇಷ್ಟು ದಿನ ಕೋಮಾದಲ್ಲಿದ್ದೆನು.

ಈಗ ಚೇತರಿಸಿಕೊಂಡಿದ್ದೇನೆ.ನಾನು ನಿಮ್ಮ ಹಣ ಹೊಂದಿಸಲು ಆಗುತ್ತಿಲ್ಲ. ನಾನು ಆರಾಧಿಸುವ ದೇವರ ದೇವಸ್ಥಾನದ ಮುಖ್ಯಸ್ಥನ ನಂಬರ್ ಕೊಡುತ್ತೇನೆ ಅವರಿಗೆ ಪೋನ್ ಮಾಡಿ ನಿಮ್ಮ ಹಣ ಅವರು ವಾಪಸ್‌ ಕೊಡುತ್ತಾರೆ’ ಎಂದು ಹೇಳಿದ್ದಾನೆ.ಅದನ್ನು ನಂಬಿದೆ ಮಹಿಳೆ ಆ ನಂಬರ್‌ಗೂ ಕಾಲ್ ಮಾಡಿದ್ದಾರೆ.

ಆತ ಕೂಡ ನಿಮಗೆ ಹಣ ಬರಬೇಕಾದರೆ ಸ್ವಲ್ಪ ಖರ್ಚಾಗುತ್ತದೆ. ನನ್ನ ಮೊಬೈಲ್ ನಂಬರ್‌ನ ಗೂಗಲ್‌ಪೇ ಮೂಲಕ ಹಣ ಹಾಕಿ ಎಂದು ಹೇಳಿದ್ದಾನೆ. ಆ ಮಾತು ನಂಬಿ ಆತನ ಅಕೌಂ ಟ್‌ಗೂ ಮಹಿಳೆ ಹಣವನ್ನು ಹಾಕಿದ್ದಾರೆ.

ಇಬ್ಬರಿಗೂ ಒಟ್ಟು ₹9,44,850 ವರ್ಗಾವಣೆ ಮಾಡಿದ್ದು, ನಂತರ ಆರೋಪಿಗಳು ಮೊಬೈಲ್‌ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ. ಅ ನಂತರವೇ ಮಹಿಳೆಗೆ ತಾನು ಮೋಸ ಹೋಗಿರು ವುದು ಗೊತ್ತಾಗಿದೆ.ಸಧ್ಯ ಈ ಒಂದು ಕುರಿತಂತೆ ಮಹಿಳೆ ಅಪರಾಧ ವಿಭಾಗದ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು ದೂರು ದಾಖಲಿಸಿಕೊಂಡ ಸಿ.ಇ.ಎನ್ ಠಾಣೆ ಪೊಲೀಸರು ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಶಿವಮೊಗ್ಗ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.