ಏಕದಿನ ಕ್ರಿಕೆಟ್ ಸರಣಿ ಸೋತ್ರು – ಟಿ 20 ಸರಣಿ ಗೆದ್ರು

Suddi Sante Desk

ಸಿಡ್ನಿ –

ಏಕದಿನ ಕ್ರಿಕೆಟ್ ಸರಣಿಯಲ್ಲಿ ಹೀನಾಯವಾಗಿ ಸೋತಿದ್ದ ಭಾರತ ಕ್ರಿಕೇಟ್ ತಂಡ ಟಿ 20 ಕ್ರಿಕೇಟ್ ಸರಣಿಯನ್ನು ಇನ್ನೂ ಒಂದು ಪಂದ್ಯ ಇರುವಾಗಲೇ ಗೆಲುವು ಸಾಧಿಸಿದೆ.ಹೌದು ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಈಗಾಗಲೇ ಏಕದಿನ ಕ್ರಿಕೇಟ್ ಪಂದ್ಯದಲ್ಲಿ ಸೋತ ತಂಡ ಈಗ ಟಿ 20 ಸರಣಿಯನ್ನು ಗೆದ್ದು ಸೇಡನ್ನು ತಿರಿಸಿಕೊಂಡಿದೆ.

ಅದು ಇನ್ನೂ ಒಂದು ಪಂದ್ಯ ಬಾಕಿ ಇರವಾಗಲೇ ಸರಣಿಯನ್ನು ಗೆದ್ದಿದೆ. ಇಂದು ನಡೆದ ಎರಡನೇಯ ಟಿ 20 ಪಂದ್ಯದಲ್ಲಿ ಭಾರತ ತಂಡ ಆಸೀಸ್‌ ತಂಡವನ್ನು ಎರಡನೇ ಟಿ 20 ಪಂದ್ಯದಲ್ಲಿ ಮಣಿಸಿದೆ.

ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ಗೆದ್ದುಕೊಂಡಿದೆ.ಇನ್ನೂ ಇಂದು ನಡೆದ ಎರಡನೇಯ ಪಂಧ್ಯದಲ್ಲಿ ಆರಂಭಿಕ ಶಿಖರ್‌ ಧವನ್ ಅವರ ಏಕೈಕ ಅರ್ಧಶತಕ, ಹಾಗೂ ಅಗ್ರ ಕ್ರಮಾಂಕದ ಆಟಗಾರರ ಅತ್ಯಮೂಲ್ಯ ಕೊಡುಗೆಯಿಂದ ಭಾರತ ಎರಡನೇ ಚುಟುಕು ಪಂದ್ಯವನ್ನು ನಾಲ್ಕು ವಿಕೆಟ್ ಗಳಿಂದ ಗೆದ್ದು ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿದೆ.ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ವಿರಾಟ್ ಕೊಹ್ಲಿ ಪಡೆಯ ಬೌಲರ್ ಗಳನ್ನು ಬೆನ್ನಟ್ಟಿದ ಆಸೀಸ್ ಆಟಗಾರರು ಆರಂಭ ದಿಂದಲೇ ಬಿರುಸಿನಿಂದ ಬ್ಯಾಟ್ ಬೀಸಿದರು. ನಾಯಕನ ಸ್ಥಾನ ತುಂಬಿದ ಮ್ಯಾಥ್ಯೂ 58 ರನ್ ಗಳಿಸಿ, ತಂಡದ ಸ್ಕೋರ್ ಹೆಚ್ಚಾಗಲು ಪ್ರಮುಖ ಕಾರಣರಾದರು.ಇನ್ನೂ ಸ್ಟೀವನ್ ಸ್ಮಿತ್ 46 ರನ್ ಗಳ ಕೊಡುಗೆ ನೀಡಿದರು. ಅಂತಿಮ ಕ್ಷಣದವರೆಗೂ ಆಸೀಸ್ ಆಟಗಾರರ ಅಬ್ಬರದ ಬ್ಯಾಟಿಂಗ್ ನಿಂದ 20 ಓವರ್ ನಲ್ಲಿ 5 ವಿಕಟ್ ನಷ್ಟಕ್ಕೆ 194 ರನ್ ಪೇರಿಸಿ 195 ರ ಬೃಹತ್ ಗುರಿಯನ್ನು ಭಾರತಕ್ಕೆ ನೀಡಿತು.

ಈ ಸವಾಲನ್ನು ಬೆನ್ನತ್ತಿದ ಭಾರತ ತಂಡಕ್ಕೆ ಧವನ್ ಹಾಗೂ ಕೆ.ಎಲ್ ರಾಹುಲ್ ಜೋಡಿ ಆಶದಾಯಕ ಆರಂಭವನ್ನು ನೀಡಿದರು. ರಾಹುಲ್ 30 ರನ್ ಗಳಿಸಿ ಔಟ್ ಆದರು. ಧವನ್ ಅಮೋಘವಾದ ಬ್ಯಾಟಿಂಗ್ ನಿಂದ 52 ರನ್ ಗಳ ಕೊಡುಗೆ ನೀಡಿ ಜಂಪಾ ಎಸೆತದಲ್ಲಿ ಔಟ್ ಆದರು.

ಇನ್ನೂ ನಂತರ ಬಳಿಕ ಬಂದ ನಾಯಕ ಕೊಹ್ಲಿ ಬಿರುಸಿನ ಆಟದಿಂದ ಒತ್ತಡದಿಂದ ತಂಡವನ್ನು ಪಾರು ಮಾಡುವ ಪ್ರಯತ್ನ ಮಾಡಿದರು. 42 ರನ್ ಗಳಿಸಿ ವಿರಾಟ್ ಕೊಹ್ಲಿ ಔಟ್ ಸ್ಯಾಮ್ಸ್ ಎಸೆತಕ್ಕೆ ಕೀಪರ್ ಕ್ಯಾಚ್ ಕೊಟ್ಟು ನಿರ್ಗಮಿಸಿದರು.ನಂತರ ಬಂದ ಉಳಿದ ಆಟಗಾರರು ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದ್ರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.