ಬಿಸಿಯೂಟದ ಬೆಳೆಯಲ್ಲಿ ನುಸಿಗಳು,ಹುಳುಗಳು ಶಾಲೆಗೆ ಮುತ್ತಿಗೆ ಹಾಕಿದ ಪೋಷಕರು ಆಕ್ರೋಶ ಕಳಪೆ ಆಹಾರ ಪದಾರ್ಥ ಗಳ ವಿರುದ್ದ ಅಸಮಾಧಾನ…..

Suddi Sante Desk

ಕೋಲಾರ –

ಸರ್ಕಾರಿ ಶಾಲೆಯ ಬಿಸಿಯೂಟದ ಆಹಾರ ಪದಾರ್ಥ ಗಳಲ್ಲಿ ಹುಳುಗಳು ಮತ್ತು ನುಸಿಗಳು ಕಂಡು ಬಂದ ಘಟನೆ ಕೋಲಾರದಲ್ಲಿ ನಡೆದಿದೆ.ಕೋಲಾರದ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನಲ್ಲಿ ಕಂಡು ಬಂದಿದೆ.ಕಳೆದ ಹಲವಾರು ದಿನಗಳಿಂದ ಹೀಗೆ ಕಂಡು ಬರುತ್ತಿದ್ದವಂತೆ ಈ ಕುರಿತಂತೆ ಸಂಬಂಧಿಸಿದವರಿಗೆ ಹೇಳಿ ಹೇಳಿ ಬೇಸತ್ತು ಕೊನೆಗೆ ಅಸಮಾಧಾನಗೊಂಡು ಇಂದು ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆಯನ್ನು ಮಾಡಿ ಆಕ್ರೋಶವನ್ನು ವ್ಯಕ್ತಪಡಿಸಿದ್ದು ಕಂಡು ಬಂದಿತು.

ಇನ್ನೂ ಇದೇ ವೇಳೆ ಪೋಷಕರು ಶಾಲಾ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿಯನ್ನು ನಡೆಸಿ ನಂತರ ತರಾಟೆಗೆ ತಗೆದು ಕೊಂಡರು.ಇದೇ ವೇಳೆ ಕಳಪೆ ಆಹಾರ ಪದಾರ್ಥಗಳನ್ನು ವಿತರಿಸಿರುವ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡು ಆಕ್ರೋಶವನ್ನು ವ್ಯಕ್ತಪಡಿಸಿದರು ಪೋಷಕರು.

ಕೋಲಾರ ನಗರದ ಸರ್ಕಾರಿ ಪದವಿಪೂರ್ವ ಬಾಲಕರ ಕಾಲೇಜಲ್ಲಿ ಇಂತಹ ಆಹಾರ ಪದಾರ್ಥಗಳನ್ನು ವಿತರಣೆ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು ಮಕ್ಕಳಿಗೆ ನೀಡುವ ಬಿಸಿ ಊಟ ಆಹಾರದಲ್ಲಿ ಕಳಪೆ ಪದಾರ್ಥಗಳನ್ನು ತಿನ್ನಲು ಯೋಗ್ಯವಲ್ಲದ ಆಹಾರದ ವಸ್ತುಗಳನ್ನು ಹುಳುಗಳಿಂದ ತುಂಬಿ ತುಳುಕುತ್ತಿರುವ ಕಳಪೆ ತೊಗರಿಬೇಳೆ ಕೂಡಿದೆ ಯಂತೆ ಈ ಒಂದು ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ

ಇನ್ನೂ ಈ ಕುರಿತಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿ ಗಳಿಗೆ ದೂರವಾಣಿ ಮೂಲಕ ತರಾಟೆ ತೆಗೆದುಕೊಂಡರು ಪೋಷಕರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.