ತುಮಕೂರು –
ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ದೊಡ್ಡಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನೊಬ್ಬ ಶಾಲಾ ಮಕ್ಕಳ ಮಹಿಳಾ ಪೋಷಕರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಮೇಲೆ ಡಿಡಿಪಿಐ ಅವರು ಅಮಾನತು ಮಾಡಿದ್ದಾರೆ.ವಿವಿಧ ಕೆಲಸಗಳಿಗಾಗಿ ಶಾಲೆಗೆ ಬರುವ ವಿದ್ಯಾರ್ಥಿಗಳ ಪೋಷಕರೊಂದಿಗೆ ಸಲುಗೆ ಯಿಂದ ವರ್ತಿಸುತ್ತಿದ್ದ ಶಿಕ್ಷಕ ಅವರ ಮೊಬೈಲ್ ಸಂಖ್ಯೆ ಪಡೆದುಕೊಂಡು ನಂತರ ಅಶ್ಲೀಲ ವಿಡಿಯೋ ಸಂದೇಶ ಕಳುಹಿಸುತ್ತಿದ್ದರಂತೆ.ಶಾಲೆಯ ವಿದ್ಯಾರ್ಥಿಗಳನ್ನು ಮಾತ ನಾಡಿಸುವ ನೆಪದಲ್ಲಿ ಅವರ ತಾಯಂದಿರ ಬಳಿ ಅಶ್ಲೀಲ ವಾಗಿ ಮಾತನಾಡುತ್ತಿದ್ದ ಆರೋಪ ಕೇಳಿ ಬಂದಿದೆ.
ಇದಲ್ಲದೇ ಗ್ರಾಮದ ಯುವಕರೊಂದಿಗೆ ಸಂಜೆ ವೇಳೆ ಮದ್ಯಪಾನ ಮಾಡುತ್ತಿದ್ದ. ಶಾಲಾ ಅನುದಾನ ದುರ್ಬಳಕೆ, ಅನಧಿಕೃತ ಗೈರು, ತಡವಾಗಿ ಬರುವುದು, ಬೇಗನೆ ಹೋಗುವುದು, ಊರಿನ ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶಿಕ್ಷಕನ ವಿರುದ್ಧ ಕಳೆದ ತಿಂಗಳು ದೂರು ನೀಡಿದ್ದರು. ತನಿಖೆ ನಡೆಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಡಿಡಿಪಿಐಗೆ ವರದಿ ನೀಡಿದ್ದು, ಇದನ್ನು ಆಧರಿಸಿ ಅಮಾನತು ಶಿಕ್ಷಕನನ್ನು ಸಸ್ಪೆಂಡ್ ಮಾಡಲಾಗಿದೆ.






















