ಕಾಂಗ್ರೇಸ್ ಮುಕ್ತ ಕುಂದಗೋಳ ಕ್ಕೆ ಯತ್ನಾಳ ಕರೆ – MR ಪಾಟೀಲ ಪರ ಕ್ಷೇತ್ರದಲ್ಲಿ ಘರ್ಜನೆ ಮತಯಾಚನೆ…..

Suddi Sante Desk
ಕಾಂಗ್ರೇಸ್ ಮುಕ್ತ ಕುಂದಗೋಳ ಕ್ಕೆ ಯತ್ನಾಳ ಕರೆ – MR ಪಾಟೀಲ ಪರ ಕ್ಷೇತ್ರದಲ್ಲಿ ಘರ್ಜನೆ ಮತಯಾಚನೆ…..

ಕುಂದಗೋಳ

ಕುಂದಗೋಳ ದಲ್ಲಿ ಘರ್ಜಿಸಿದ ಫೈರ ಬ್ರ್ಯಾಂಡ್ ಬಸನಗೌಡ್ರ ಪಾಟೀಲ ಯತ್ನಾಳ ಕುಂದಗೋಳ ಮತ ಕ್ಷೇತ್ರದ ಹಿರೇಹರಕುಣಿ ಗ್ರಾಮದಲ್ಲಿ ಭಾಜಪ ಅಭ್ಯರ್ಥಿ ಎಂ ಆರ್ ಪಾಟೀಲ ಅವರ ಪರವಾಗಿ ರೊಡ್ ಶೋ ಮೂಲಕ ಮತಯಾಚನೆ ಮಾಡಿದರು

ಇದೇ ವೇಳೆ ಮಾತನಾಡಿದ ಅವರು ಈ ಬಾರಿ ಕಾಂಗ್ರೆಸ್ ಮುಕ್ತ ‌ಕುಂದಗೊಳ ಮಾಡುವಂತೆ ಕರೆಕೊಟ್ಟ ಅವರು ಪಕ್ಷದ್ರೋಹಿಗಳನ್ನು ಮನೆಗೆ ಅಟ್ಟುವಂತೆ ಹೇಳುತ್ತಾ ಪಕ್ಷದಿಂದ ವ್ಯಕ್ತಿ ಹೊರತು ವ್ಯಕ್ತಿಗಳಿಂದ ಪಕ್ಷವಲ್ಲ ಎಂದರು

ಈ ಬಾರಿ ‌ರಾಜ್ಯದಲ್ಲಿ ಭಾಜಪ ಸರ್ಕಾರ ಬರುತ್ತದೆ. ನಿಮ್ಮ ಕ್ಷೇತ್ರದ ಅಭಿವೃದ್ಧಿ ಪಡಿಸಲು ಕುಂದಗೋಳ ಕ್ಷೇತ್ರದಿಂದ ಭಾಜಪ ಅಭ್ಯರ್ಥಿಗಳಾದ ಎಂ ಆರ್ ಪಾಟೀಲ ಅವರನ್ನು ವಿಧಾನ ಸಭೆಗೆ ಕಳಿಸಿಕೊಡಿ‌ ಎಂದರು

ಈ ಸಂದರ್ಭದಲ್ಲಿ ಮಾತನಾಡಿದ ‌ ಎಂ ಆರ್ ಪಾಟೀಲ ಅವರು ಯಾವುದೇ ಅಧಿಕಾರ ಇಲ್ಲದೆ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ನಮ್ಮ ‌ಡಬಲ‌್ ಇಂಜಿನ್ ಸರ್ಕಾರಗಳಿಂದ ಮಾಡಲಾಗಿದೆ ಈ ಭಾರಿ ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಕುಂದಗೋಳ ಮತ ಕ್ಷೇತ್ರವನ್ನು ಮಾದರಿ ಮತ ಕ್ಷೇತ್ರವನಾಗಿಸಿ ಮಾಡಿ ತೊರಿಸುತ್ತೆನೆ ಎಂದರು ಸಹಸ್ರ ಸಹಸ್ರ ಸಂಖ್ಯೆ ಯಲ್ಲಿ ಸೇರಿದ್ದ ಅಭಿಮಾನಿಗಳು ಘೋಷಣೆಯ ಗಂಟೆ ಮೊಳಗಿಸಿದರು.

ಸುದ್ದಿ ಸಂತೆ ನ್ಯೂಸ್ ಕುಂದಗೋಳ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.