ಧಾರವಾಡ –
ಮೃತ ಯೋಗೀಶ್ ಗೌಡ ಕೊಲೆ ಕೇಸ್ ವಿಚಾರ ಕುರಿತು ಮೃತ ಯೋಗಿಶ್ ಗೌಡ ಸಹೋದರ ಗುರುನಾಥ್ ಗೌಡ ಮಾತನಾಡಿದ್ದಾರೆ.ಧಾರವಾಡ ದಲ್ಲಿ ಮಾತನಾಡಿದ ಅವರು ಈಗಾಗಲೆ ಜನ ಪ್ರತಿನಿಧಿ ಕೋರ್ಟ ನಮ್ಮ ಪರ ಆದೇಶ ಮಾಡಿದೆ.
ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ 195 ಎ ಕೇಸನ್ನು ಬಿ ಪಾಲ್ಸ್ ಎಂದು ಮಾಡಿದ್ದರು.ಅವರದ್ದೆ ಸರಕಾರ ಅವರದ್ದೆ ಸಚಿವರು ಇದ್ದರು ಅದಕ್ಕೆ ಕೇಸ್ ದಾರಿ ತಪ್ಪಿಸಿದ್ದರು.ನಾನು ಹೈಕೋರ್ಟ ಮೋರೆ ಹೋಗಿದ್ದೆ.ಹೈಕೋರ್ಟ ನ ಪ್ರಕಾರ ನಾವು ಮತ್ತೆ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಮೊರೆ ಹೋಗಿದ್ದು.
ನಮ್ಮ ವಕೀಲರು ವಾದ ಮಾಡಿ ನ್ಯಾಯ ಕೊಡಸಿದ್ದಾರೆ.ಎಲ್ಲಾ ಸಾಕ್ಷಿ ದಾಖಲೆಗಳು ಇದ್ರು ಪ್ರಕರಣದ ದಾರಿ ತಪ್ಪಿಸಿದ್ದರು ಆಗಿನ ಪೋಲಿಸ್ ಅಧಿಕಾರಿಗಳು.ಸದ್ಯ ಸೆಪ್ಡಂಬರ್ 27 ಕ್ಕೆ ಜನ ಪ್ರತಿನಿಧಿಗಳ ಕೋರ್ಟ ಆದೇಶ ಮಾಡಿದೆ.
ಮರು ತನಿಖೆ ಮಾಡಿ ವರದಿ ಸಲ್ಲಿಸುವಂತೆ ಆದೇಶ ಮಾಡಿದೆ ಕೋರ್ಟ್.ಮತ್ತೆ ಮರು ತನಿಖೆ ಮಾಡಬೇಕು ಎಂದು ಕೋರ್ಟ್ ಆದೇಶ ಮಾಡಿದೆ ಇವತ್ತು ಕಾಂಗ್ರೆಸ್ ಸರಕಾರ ಇದೆ.ಸರಿಯಾಗಿ ತನಿಖೆ ಮಾಡಿ ಸಿಬಿಐಗೆ ಈ ಪ್ರಕರಣವನ್ನ. ವಹಿಸಬೇಕು.ನಮಗೆ ನ್ಯಾಯ ಸಿಗುತ್ತೆ ಎಂಬ ನಂಬಿಕೆ ಇದೆ.ಕಾಂಗ್ರೆಸ್ ಸರಕಾರದ ಮೆಲೆ ಭರವಸೆ ಇದೆ.
ಡಿ ವೈ ಎಸ್ ಪಿ ತುಳಜಪ್ಪ ಸುಲ್ಪಿ, ಡಿವೈ ಎಸ್ ಪಿ ಚಂದ್ರ ಶೇಖರ್ ,ವಿನಯ ಕುಲಕರ್ಣಿ ಮೆಲೆ ಕೇಸ್ ದಾಖಲಿಸಿದ್ದೇವು.ನನಗೆ ಬಹಳ ಒತ್ತಾಯ ಮಾಡಿ ಸಾಕ್ಷಿ ಹೇಳಬೇಡಿ ಎಂದು ಒತ್ತಡ ಹಾಕಿದ್ರು.ನನಗೆ ರಾಜಿ ಯಾಗು ಎಂದು ಒತ್ತಾಯ ಮಾಡಿದ್ರು. ನಾವು ಇಬ್ಬರು ಡಿವೈಎಸ್ ಪಿ ಇದ್ವಿವೆ ನಿನಗೆ ಮುಂದೆ ಎನ್ ಕೌಂಟರ್ ಮಾಡಬೇಕಾಗುತ್ತೆ ಎಂದಿದ್ದ ಡಿ ವೈ ಎಸ್ ಪಿ ತುಳಜಪ್ಪ ಸುಲ್ಪಿ,
ನಮ್ಮ ಮನೆಯಲ್ಲಿ ಬಂದು ಎನ್ ಕೌಂಟರ್ ಮಾಡೋದಾಗಿ ಬೆದರಿಕೆ ಹಾಕಿದ್ರು.ಧಾರವಾಡದ ಗೋವನನಕೊಪ್ಪ ಗ್ರಾಮದ ಮನೆಯಲ್ಲಿ ಗುರುನಾಥ್ ಗೌಡ ಹೇಳಿಕೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..