ಬೆಂಗಳೂರು –
ಏಕಾಎಕಿಯಾಗಿ ನ್ಯಾಯಾಲಯದ ಮೆಟ್ಟಿಲೇರಿದ ಕುರಿತು ಆರೋಗ್ಯ ಸಚಿವ ಸುಧಾಕರ ಮಾತನಾಡಿ ದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಸುಧಾಕರ್ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಯಾವುದೇ ಅವ ಹೇಳನಾಕಾರಿ ವರದಿಗಳನ್ನು ಪ್ರಸಾರ ಮಾಡದಂತೆ ಕೋರಿ ಆರು ಸಚಿವರು ನ್ಯಾಯಾಲಯದ ಮೆಟ್ಟಿ ಲೇರಿದ್ದಾರೆ.ಈ ಕುರಿತು ಸ್ವತಃ ಸಚಿವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಸಚಿವರು ಹೀಗೆ ತಮ್ಮ ಖಾತೆಯಲ್ಲಿ ಹಾಕಿರುವ ಪೊಸ್ಟ್ ನೋಡಿದರೆ ಯಾಕೋ ಸಂಶಯ ಮಾಡುತ್ತಿದೆ.

ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೇ ಅವರ ಮಿತ್ರಕೂಟದ ಆರು ಸಚಿವರು ಕೋರ್ಟ್ ಮೊರೆ ಹೋಗಿರುವುದು ಚರ್ಚೆಗೆ ಕಾರಣವಾಗಿದೆ.ಅಲ್ಲದೇ ಇನ್ನೂ ಕೆಲವರ ಸಿಡಿ ಗಳು ನಮ್ಮ ಬಳಿ ಇವೆ ಎಂದಿದ್ದ ದಿನೇಶ್ ಕಲ್ಲಹಳ್ಳಿ ಅವರ ಮಾತು ಸತ್ಯವೇನು ಅಂತಾ ಅನಿಸತಾ ಇದೆ.

ಹೀಗೆ ಪೊಸ್ಟ್ ಮಾಡಿದ್ದಾರೆ.ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಆರು ಸಚಿವರು ಅರ್ಜಿ ಸಲ್ಲಿಸಿದ್ದು, ತಮ್ಮ ಕುರಿತಾಗಿ ಯಾವುದೇ ಅವಹೇಳನಾಕಾರಿ ವಿಚಾರ, ಸಿ.ಡಿ ಅಥವಾ ದಾಖಲೆಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಆದೇಶ ನೀಡುವಂತೆ ಕೋರಿದ್ದಾರೆ. ಈ ಆರೂ ಸಚಿವರು ಕಾಂಗ್ರೆಸ್ ತೊರೆಯುವ ಮೂಲಕ ಜೆಡಿಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನುವುದು ಗಮನಿಸಬೇಕಾದ ಸಂಗತಿಯಾಗಿದ್ದು ನ್ಯಾಯಾಲಯ ಯಾವ ತೀರ್ಪು ಕೊಡಲಿದೆ ಎಂಬುದನ್ನು ಕಾದು ನೋಡಬೇಕು.