ಹನುಮಂತನಗರ ನಿವಾಸಿಗಳ ಭರವಸೆಯನ್ನು ಸ್ಥಳದಲ್ಲೇ ಈಡೇರಿಸಿದ ಯುವ ನಾಯಕ ರಜತ್ ಉಳ್ಳಾಗಡ್ಡಿಮಠ – ಮನೆ ಮನೆಗೆ ರಜತ್ ಅಭಿಯಾನದಲ್ಲಿ ನಿವಾಸಿಗಳು ಕೇಳಿದ ಭರವಸೆಯನ್ನು ಸ್ಧಳದಲ್ಲೇ ಈಡೇರಿಸಿ ನೆರವಾದ ಯುವ ಜನನಾಯಕ

Suddi Sante Desk
ಹನುಮಂತನಗರ ನಿವಾಸಿಗಳ ಭರವಸೆಯನ್ನು ಸ್ಥಳದಲ್ಲೇ ಈಡೇರಿಸಿದ ಯುವ ನಾಯಕ ರಜತ್ ಉಳ್ಳಾಗಡ್ಡಿಮಠ – ಮನೆ ಮನೆಗೆ ರಜತ್ ಅಭಿಯಾನದಲ್ಲಿ ನಿವಾಸಿಗಳು ಕೇಳಿದ ಭರವಸೆಯನ್ನು ಸ್ಧಳದಲ್ಲೇ ಈಡೇರಿಸಿ ನೆರವಾದ ಯುವ ಜನನಾಯಕ

ಹುಬ್ಬಳ್ಳಿ

ಹೊಸದೊಂದು ಬದಲಾವಣೆ ಮಾಡುವ ಉದ್ದೇಶದಿಂದ ಹುಬ್ಬಳ್ಳಿಯ ಕೇಂದ್ರ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಯುವ ನಾಯಕ ರಜತ್ ಉಳ್ಳಾಗಡ್ಡಿಮಠ ಆರಂಭ ಮಾಡಿರುವ ಮನೆ ಮನೆಗೆ ರಜತ್ ಅಭಿಯಾನ ಯಶಶ್ವಿಯಾಗಿ ನಡೆಯುತ್ತಿದ್ದು ಇನ್ನೂ ಏನಾದರೂ ಬದಲಾವಣೆ ಮಾಡಬೇಕು ಹೊಸತನವನ್ನು ತರಬೇಕು ಎಂದುಕೊಂಡು ಆರಂಭ ಮಾಡಿರುವ ಈ ಒಂದು ಅರ್ಥಪೂರ್ಣ ಕಾರ್ಯಕ್ರಮಕ್ಕೆ ಹೋದಲ್ಲೇಲ್ಲ ಉತ್ತಮವಾದ ಸ್ಪಂದನೆ ಬೆಂಬಲ ಕಂಡು ಬರುತ್ತಿದ್ದು

ಇದರ ನಡುವೆ ಪ್ರತಿ ಮನೆ ಮನೆಗೂ ತೆರಳಿ ಅವರೊಂದಿಗೆ ಕೆಲ ಸಮಯ ಮಾತನಾಡಿ ಸಮಸ್ಯೆಗಳನ್ನು ಆಲಿಸುತ್ತಿರುವ ರಜತ್ ಉಳ್ಳಾಗಡ್ಡಿಮಠ ಅವರಿಗೆ ಕ್ಷೇತ್ರದಲ್ಲಿ ಜನರು ತೋರಿಸುತ್ತಿರುವ ಪ್ರೀತಿ ಕಾಳಜಿ ಬೆಂಬಲ ಅಭೂತಪೂರ್ವವಾಗಿ ಕಂಡು ಬರುತ್ತಿದೆ.ಇನ್ನೂ ಈ ಒಂದು ಅಭಿಯಾನದಲ್ಲಿ ನಗರದ ಹನುಮಂತ ನಗರದಲ್ಲಿನ ನಿವಾಸಿಗಳು ಚಿಕ್ಕದಾದ ಬೇಡಿಕೆ ಯೊಂದನ್ನು ಯುವ ನಾಯಕನ ಮುಂದೆ ಇಟ್ಟರು

ಎರಡು ದಿನಗಳ ಹಿಂದೆ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ  ಅವರು ‘ಮನೆ ಮನೆಗೆ ರಜತ್’ ಎಂಬ ಕಾರ್ಯಕ್ರಮದ ವಾರ್ಡ್ ನಂಬರ್ 49ರ ಹನುಮಂತನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯರು ಬನ್ನಿ ಮಹಾಕಾಳಿ ದೇವಸ್ಥಾನ ಕಟ್ಟಿಸಲು ನೆರವಾಗಬೇಕು ಎಂದು ಕೇಳಿಕೊಂಡರು. ಈ ಒಂದು ಬೇಡಿಕೆಯನ್ನು ಕೇಳುತ್ತಿದ್ದಂತೆ ಇತ್ತ ರಜತ್ ಉಳ್ಳಾಗಡ್ಡಿಮಠ ಸಾರ್ವಜನಿಕರು ನಿವಾಸಿಗಳು ಕೇಳಿದ ಆ ಒಂದು ಬೇಡಿಕೆಯನ್ನು ಕೂಡಲೇ ಸ್ಥಳದಲ್ಲೇ ಈಡೇರಿಸಿ ದ್ದಾರೆ

ದೇವಸ್ಥಾನದ ಕಟ್ಟಡಕ್ಕೆ ಬೇಕಾದ ಸಾಮಗ್ರಿಗಳನ್ನು ಕೊಡಿಸುವುದಾಗಿ ಭರವಸೆ ಕೊಟ್ಟಿದ್ದರು.ಆ ಒಂದು ಭರವಸೆಯಂತೆ ರಜತ್ ಅವರು ಐವತ್ತು ಸಾವಿರಕ್ಕೂ ಅಧಿಕ ಮೌಲ್ಯದ ಕಟ್ಟಡ ಸಾಮಗ್ರಿ ಗಳಾದ ಸ್ಟೀಲ್, ಇಟ್ಟಿಗೆ, ಮರಳು ವಸ್ತುಗಳನ್ನು ಕೊಡಿಸಿ ಕೊಟ್ಟ ಮಾತನ್ನು ಉಳಿಸಿಕೊಂಡು ಹನಮಂತ ನಗರದ ನಿವಾಸಿಗಳ ಪ್ರೀತಿಗೆ ಪಾತ್ರರಾದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.