ನವಲಗುಂದ –
ಉಚಿತ ಸ್ಪರ್ಧಾತ್ಮಕ ತರಬೇತಿ ಶಿಬಿರದ ನೋಂದಣಿ 18ರ ವರೆಗೆ ವಿಸ್ತರಣೆ ಹೌದು ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯುವಕ, ಯುವತಿಯರು ಉಚಿತ ತರಬೇತಿ ಶಿಬಿರದ ನೋಂದಣಿ ಅವಧಿ ಜ.18ರವರೆಗೆ ವಿಸ್ತರಿಸಲಾಗಿದೆ. ಈ ಶಿಬಿರವನ್ನು ಶಾಂಭವಿ ವಿನೋದ ಆಸೂಟಿ ಟ್ರಸ್ಟ್ ಹಾಗೂ ಧಾರವಾಡದ ಕ್ಯಾಕ್ ಇಟ್ ಅಕಾಡೆಮಿ ಸಹಯೋಗ ದಲ್ಲಿ ಆಯೋಜಿಸಲಾಗಿದೆ.
ತರಬೇತಿಯಲ್ಲಿ ಬ್ಯಾಂಕಿಂಗ್, ಎಸ್.ಎಸ್. ಎಲ್ ಸಿ, ರೈಲ್ವೆ ಹಾಗೂ ಅಗ್ನಿವೀರ ಸೇರಿದಂತೆ ವಿವಿಧ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ತರಬೇತಿ ನೀಡಲಾಗುವುದು. ಯುವಕರು ಇದನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ಗಟ್ಟಿಗೊಳಿಸಬಹುದು ಎಂದು ಸೂಚಿಸಲಾಗಿದೆ.

ಹೆಸರು ನೋಂದಾಯಿಸಲು ಆಸಕ್ತರಾದವರು ವಿನೋದ ಆಸೂಟಿ ಜನಸಂಪರ್ಕ ಕಾರ್ಯಾಲಯ, ಶಂಕರ ಕಾಲೇಜ್ ಕೂಟ್ ಹತ್ತಿರ, ನವಲಗುಂದಕ್ಕೆ ಭೇಟಿ ನೀಡಿ ನೋಂದಾಯಿಸಬಹುದು ಎಂದು ತಿಳಿಸಲಾಗಿದೆ.
ಸುದ್ದಿ ಸಂತೆ ನ್ಯೂಸ್ ನವಲಗುಂದ…..



