ಬೀದರ್ –
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ಬೀದರ್ ಜಿಲ್ಲಾ ಘಟಕದ ವತಿಯಿಂದ ಇಂದು KCSR ಸೇವಾ ನಿಯಮಗಳು ವಿಷಯ ಕುರಿತು ವೆಬಿನಾರ್ ನಡೆಯಿತು.

ಈ ವೆಬಿನಾರ್ ಕಾರ್ಯಕ್ರಮವು ಮೈಕ್ರೊಸಾಫ್ಟ್ ಟೀಮ್ಸ್ ಆಪ್ ಮೂಲಕ ಆಯೋಜನೆ ಮಾಡಲಾಗಿ ತ್ತು ಈ ಕಾರ್ಯಕ್ರಮ ದ ಸಂಪನ್ಮೂಲ ವ್ಯಕ್ತಿಯಾಗಿ, ತುಮಕೂರು ಉತ್ತರ,ಮಧುಗಿರಿ ಶೈ.ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕನಹಳ್ಳಿ, ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯ ಕನ್ನಡ ಉಪನ್ಯಾಸಕಿಯಾದ ಶ್ರೀಮತಿ ಕವಿತ.ಹೆಚ್.ಪಿ.ರವರು ಸತತ ಮೂರು ಗಂಟೆಗಳ ಕಾಲ ಸರ್ಕಾರಿ ನೌಕರರ ವಿವಿಧ ವೃಂದಗಳು, ನೌಕರ ರ ಸೇವಾವಹಿ ನಿರ್ವಹಣೆ,ನೌಕರರ ರಜಾ ಸೌಲಭ್ಯ ಗಳು,ಇತರೆ ವಿಷಯಗಳ ಬಗ್ಗೆ ವಿಸ್ತೃತವಾಗಿ ಮಾಹಿತಿ ಯನ್ನು ನೀಡಿದರು.

ಈ ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಸಂಘ ದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್. ಮುಳ್ಳೂರ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಹೆಚ್.ರವರುಗಳು ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದು ಕೊಟ್ಟರು

ಈ ವೆಬಿನಾರ್ ನ ವಿಷಯವು ಎಲ್ಲಾ ಶಿಕ್ಷಕಿಯರಿಗೂ ಅವಶ್ಯಕವಾಗಿತ್ತು.ಬಹುತೇಕ ಶಿಕ್ಷಕಿಯರು ಆಸಕ್ತಿ ವಹಿಸಿ ಭಾಗವಹಿಸಿದ್ದರು.
ಸತತ ಮೂರು ಗಂಟೆಗಳ ಕಾಲ ನಿರಂತರ ಪ್ರಶ್ನೋ ತ್ತರ ಸಂವಾದದೊಂದಿಗೆ ಸುಮಾರು 145 ಕ್ಕೂ ಹೆಚ್ಚು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕಿಯರು ಬಾಗವಹಿಸಿ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಈ ವೆಬಿನಾರ್ ಕಾರ್ಯಕ್ರಮವು
ಯಶಸ್ವಿಯಾಗಲು ಕಾರಣವಾಯಿತು.

ಈ ಕಾರ್ಯಕ್ರಮವನ್ನು ಆಯೋಜಿಸಿ ಎಲ್ಲರಿಗೂ ಭಾಗವಹಿಸಲು ಅವಕಾಶ ಕಲ್ಪಿಸಿದಂತಹ ಬೀದರ್ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಸಾರಿಕ ಗಂಗಾ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಭುವನೇಶ್ವರಿ ಮತ್ತು ಜಿಲ್ಲಾ ಕೋಶಾಧ್ಯಕ್ಷರು ಇತರೆ ಎಲ್ಲಾ ಪದಾಧಿಕಾರಿಗಳಿಗೂ ರಾಜ್ಯ ಘಟಕ ದಿಂದ ಧನ್ಯವಾದಗಳನ್ನು ಸಲ್ಲಿಸಲಾಯಿತು