ಹುಬ್ಬಳ್ಳಿ ಧಾರವಾಡ –
ಅಮಾಯಕ ನಿರುದ್ಯೋಗಿ ಯುವಕ ಮತ್ತು ಯುವತಿಯವರಿಗೆ ಉದ್ಯೋಗದ ಆಸೆ ತೋರಿಸಿ ಮೋಸ ಮಾಡುತ್ತಿದ್ದ ದೊಡ್ಡ ಜಾಲವನ್ನು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ.ಸಾಮಾಜಿಕ ಜಾಲ ತಾಣಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ನಿರುದ್ಯೋಗಿಗಳಿಗೆ ಸುವರ್ಣಾವಕಾಶ ಎಂದು ಹೇಳುತ್ತಾ ಮನೆಯಿಂದ ಆಫೀಸ್ ಕೆಲಸ ಮಾಡಿ
ತಿಂಗಳಿಗೆ 14,000/- ರೂ. (ಅನಲಿಮಿಟೆಡ್ ಸ್ಯಾಲರಿ), ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿದೆ” ಎಂದು ಜಾಹಿರಾತು ನೀಡಿ, ಅದನ್ನು ನೋಡಿ ಕರೆ ಮಾಡುವ ಅಮಾಯಕ ನಿರುದ್ಯೋಗಿ ಯುವಕ ಯುವತಿಯರಿಗೆ ಹುಬ್ಬಳ್ಳಿಗೆ ಕರೆಯಿಸಿ ಕೊಂಡು ಮೊದಲು 3 ರಿಂದ 5 ದಿನ ಟ್ರೇನಿಂಗ್ ಇರುತ್ತದೆ ಅಂತಾ ಊಟ ವಸತಿ ವ್ಯವಸ್ಥೆಯ ಸಲುವಾಗಿ 2650/- ರೂ.ಗಳನ್ನು ಪಡೆದುಕೊಂಡು
ಹುಬ್ಬಳ್ಳಿಯ ವಿದ್ಯಾನಗರದ ಬೇರೆ ಬೇರೆ ಏರಿಯಾಗಳಲ್ಲಿ ಟ್ರೇನಿಂಗ್ ನೀಡಿ, ಅವರಿಂದ 38080/- ರೂ ಕಟ್ಟಿಸಿಕೊಂಡು ನಂತರ ನಿಮ್ಮ ಕೈಕೆಳಗೆ ಮೂರು ಜನರನ್ನು ಮೆಂಬರ್/ಲಿಂಕ್ ಮಾಡಿ ಪ್ರತಿಯೊಬ್ಬರಿಂದ 38080/- ರೂ.ಗಳಂತೆ ಪಡೆದುಕೊಂಡು ಅವರನ್ನು ಇದೇ ಕೆಲಸಕ್ಕೆ ಸೇರಿಸಿದರೆ, ನಿಮಗೆ ವೇತನ ಸಿಗುತ್ತದೆ ಎಂದು ಹೇಳಿ ಅಮಾಯಕ ನಿರುದ್ಯೋಗಿ ಯುವಕ ಯುವತಿಯ ರಿಗೆ ಮೊಸ ಮಾಡುತ್ತಿದ್ದ ಬಗ್ಗೆ ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿ ತನಿಖೆಯಲ್ಲಿ ಇದ್ದವು.
ಈ ಎರಡೂ ಪ್ರಕರಣಗಳ ತ್ವರಿತ ತನಿಖೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನ ದಲ್ಲಿ ಮತ್ತು ಎಸಿಪಿ ವಿನೋದ ಮುಕ್ತೆದಾರ, ಸಹಾಯಕ ಪೊಲೀಸ್ ಆಯುಕ್ತರು ಹುಬ್ಬಳ್ಳಿ ಉತ್ತರ ಉಪ ವಿಭಾಗ ಇವರ ಮಾರ್ಗದರ್ಶನದಲ್ಲಿ ಹಿಂದಿನ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಾದ ಆನಂದ ಎಮ್. ಒನಕುದ್ರೆ, ಹಾಗೂ ಶಿವಾನಂದ ಎನ್. ಬನ್ನಿಕೊಪ್ಪ, ಪಿ.ಎಸ್.ಐ ಇವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧನ ಮಾಡಲಾಗಿದೆ.
ಪೂಜಾ ತಂದೆ ಬಸವರಾಜ ಕರಿಯಪ್ಪಗೋಳ, ವಯಸ್ಸು: 23 ವರ್ಷ, ಸಾ:ಜಂಬಗಿಕೇಡಿ ಜಿ: ಬಾಗಲಕೋಟ, ಹಾಲಿ : ಹುಬ್ಬಳ್ಳಿ
ಇಜಾಜ್‍ಅಹ್ಮದ ತಂದೆ ಮಲ್ಲಿಕಜಾನ್ ನದಾಫ್, ವಯಸ್ಸು: 22 ವರ್ಷ, ಸಾ:ಹಳೆಎರಗುದ್ರಿ ಗ್ರಾಮ, ಜಿ:ಬೆಳಗಾವಿ, ಹಾಲಿ: ಹುಬ್ಬಳ್ಳಿ ನವೀದ್‍ಭಾಷಾ ತಂದೆ ಸೈದುಸಾಬ ಕುರಹಟ್ಟಿ, ವಯಸ್ಸು: 33 ವರ್ಷ, ಸಾ:ಕೌಜಗೇರಿ, ತಾ: ರೋಣ, ಜಿ: ಗದಗ, ಹಾಲಿ: ಹುಬ್ಬಳ್ಳಿ, ಇವರನ್ನು ದಸ್ತಗೀರ ಮಾಡಿ ಇವರಿಂದ 35 ಸಾವಿರ ರೂ ಹಣ ಜಪ್ತ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು. ಸದರಿ ಆರೋಪಿತರು ನ್ಯಾಯಾಂಗ ಬಂದನದಲ್ಲಿ ಇರುತ್ತಾರೆ.
ಅಲ್ಲದೇ ಇಂತಹದೇ ಇನ್ನೊಂದು ಪ್ರಕರಣದಲ್ಲಿ ಮಹಾಂತೇಶ ಹೊಳಿ, ಪಿ.ಐ ವಿದ್ಯಾನಗರ ಪೊಲೀಸ್ ಠಾಣೆ ಹುಬ್ಬಳ್ಳಿ ಮತ್ತು ಶಿವಾನಂದ ಬನ್ನಿಕೊಪ್ಪ, ಪಿ.ಎಸ್.ಐ ರವರ ನೇತೃತ್ವದ ಮತ್ತೊಂದು ತಂಡವನ್ನು ಬಂಧನ ಮಾಡಲಾಗಿದೆ.
ಶಂಕರಲಿಂಗ ತಂದೆ ಭೀಮಶೀ ಹಂಚಿನಾಳ. ವಯಾ: 23 ವರ್ಷ, ಸಾ: ಗುಡ್ಡಳ್ಳಿ ತಾ: ಸಿಂದಗಿ, ಜಿ: ವಿಜಯಪುರ.
ಪ್ರಶಾಂತ ತಂದೆ ಚಂದ್ರಪ್ಪ ಚೌವ್ಹಾನ್. ವಯಾ: 26 ವರ್ಷ, ಸಾ: ಗುಳೇದಗುಡ್ಡ, ಜಿ: ಬಾಗಲಕೋಟ,
ದುರ್ಗಾಪ್ರಸಾದ ತಂದೆ ಕೃಷ್ಣಾ ಧೂಳಾ. ವಯಾ: 27ವರ್ಷ, ಸಾ: ಗಂಗಾವತಿ, ಜಿ: ಕೊಪ್ಪಳ
ಅಭಿಲಾಷ ತಂದೆ ರಾಮಕೃಷ್ಣ ವಯಾ: 25 ವರ್ಷ ಸಾ: ನೆಲ್ಲೂರ ತಾ: ದೇವನಹಳ್ಳಿ, ಜಿ: ಬೆಂಗಳೂರ ಗ್ರಾಮಾಂತರ
ಮರಿಸ್ವಾಮಿ ತಂದೆ ಯಮನೂರಪ್ಪ ಈಡಿಗ. ವಯಾ: 20 ವರ್ಷ, ಸಾ: ದಾಸನಾಳ, ತಾ: ಗಂಗಾವತಿ, ಜಿ: ಕೊಪ್ಪಳ
ವಿನಾಯಕ ತಂದೆ ನಾರಾಯಣಪ್ಪ ಪರಮಾರಿ. ವಯಾ: 27 ವರ್ಷ, ಸಾ: ಗಂಗಾವತಿ ಜಿ: ಕೊಪ್ಪಳ ಬಸವರಾಜ ತಂದೆ ಗುರುಲಿಂಗಪ್ಪ ಸಿಂಗಾಡೆ. ವಯಾ: 26 ವರ್ಷ, ಸಾ:ನಾಗೂರ, ತಾ; ಹುನಗುಂದ, ಜಿ: ಬಾಗಲಕೋಟ ಇವರನ್ನು ಬಂಧನ ಮಾಡಲಾಗಿದೆ.
ಇವರನ್ನು ದಸ್ತಗಿರಿ ಮಾಡಿ ಇವರಿಂದ 15 ಸಾವಿರ ರೂ ಹಣ ಜಪ್ತ ಮಾಡಿದ್ದು ಇರುತ್ತದೆ. ಈ ಪ್ರಕಾರ ಒಟ್ಟು 10 ಜನ ಆರೋಪಿತರಿಗೆ ದಸ್ತಗಿರಿ ಮಾಡಿ ಅವರಿಂದ ಒಟ್ಟು 50 ಸಾವಿರ ರೂ ಜಪ್ತ ಮಾಡಿದ್ದು ಇರುತ್ತದೆ. ಸದರಿ ಆರೋಪಿತರು ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಆರೋಪಿತನ್ನು ಪತ್ತೆ ಹಚ್ಚಿದ ವಿದ್ಯಾನಗರ ಪೊಲೀಸ ಠಾಣೆಯ 2 ತಂಡಕ್ಕೆ ಪೊಲೀಸ ಆಯುಕ್ತರು, ಹು-ಧಾ, ರವರು ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.
ಆದ್ದರಿಂದ ನಿರುದ್ಯೋಗಿ ಯುವಕ ಯುವತಿಯವರು ಸಾಮಾಜಿಕ ಜಾಲತಾಣದಲ್ಲಿ ಉದ್ಯೋಗದ ನೌಕರಿಯ ಬಗ್ಗೆ ಬರುವ ಜಾಹೀರಾತುಗಳನ್ನು ನೋಡಿ, ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸದೇ ಯಾವುದೇ ವ್ಯಕ್ತಿಗೆ ಹಣವನ್ನು ಕೊಡಬಾರದು. ಈ ಬಗ್ಗೆ ಜಾಗೃತರಾಗಿರಬೇಕು ಎಂದು ಪೊಲೀಸ್ ಆಯುಕ್ತರು ಹು-ಧಾ ರವರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.