ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಧಾರವಾಡದ ಮಾರುಕಟ್ಟೆ ನಿರೀಕ್ಷಕ ಮಾರುತಿ ಧ ಭೋಸಲೆ ಅವರ ತಾಯಿ ನಿಧನರಾಗಿದ್ದಾರೆ.82 ವಯಸ್ಸಿನ ಶ್ರೀಮತಿ ಅಕ್ಕವ್ವಾ ಧಶರಥ ಭೋಸಲೆ ಧಾರವಾಡದ ಮನಕೀಲ್ಲಾ ನಿವಾಸಿಯಾಗಿದ್ದು ಡೋರ ಸಮಾಜದ ಹಿರಿಯ ಜೀವಿ ಹಾಗೇ ಸಮಾಜಕ್ಕಾಗಿ ಸಾಕಷ್ಟು ಕಾಳಜಿ ಹೊಂದಿದ್ದ ಇವರ ನಿಧನಕ್ಕೆ ಡೋರ ಸಮಾಜ ಸೇರಿದಂತೆ ಹಲವರು ತೀವ್ರ ಸಂತಾಪವನ್ನು ಸೂಚಿಸಿದ್ದಾರೆ.
ಇನ್ನೂ ಮೃತ ಅಕ್ಕವ್ವಾ ಅವರು ಒರ್ವ ಪುತ್ರ ಧಾರವಾಡದ ಮಹಾನಗರ ಪಾಲಿಕೆಯಲ್ಲಿ ಮಾರುಕಟ್ಟೆ ವಿಭಾಗದ ನಿರೀಕ್ಷಕರಾಗಿರುವ ಮಾರುತಿ ಪುತ್ರರಾಗಿದ್ದು 2 ಹೆಣ್ಣು ಮೊಮ್ಮಕ್ಕಳು 2 ಗಂಡು ಮೊಮ್ಮಕ್ಕಳನ್ನು ಹೊಂದಿದ್ದು ಇಂದು ಸಂಜೆ 4 ಗಂಟೆಗೆ ಧಾರವಾಡದ ಹೊಸ ಯಲ್ಲಾ ಪೂರದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಇನ್ನೂ ಮೃತ ಹಿರಿಯ ಜೀವಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸರ್ವ ಸಿಬ್ಬಂದಿಗಳು ಸೇರಿದಂತೆ ಹಲವರು ಸಂತಾಪ ವನ್ನು ಸೂಚಿಸಿ ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ.