ಚಿತ್ರದುರ್ಗ –
SSLC ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಆರೋಪ ಮೇಲೆ ಹತ್ತು ಜನ ಶಿಕ್ಷಕರನ್ನು ಅಮಾನತು ಮಾಡಿದ ಘಟನೆ ಚಿತ್ರದುರ್ಗ ದಲ್ಲಿ ನಡೆದಿದೆ ನಗರದ ವಾಸವಿ ವಿದ್ಯಾ ಸಂಸ್ಥೆಯಲ್ಲಿದ್ದ ಪರೀಕ್ಷಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದ 10 ಜನ ಕೊಠಡಿ ಮೇಲ್ವಿಚಾರಕರು, ಸ್ಥಾನಿಕ ಜಾಗೃತ ದಳದ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.
ಮಾರ್ಚ್ 24ರಂದು ನಡೆದ ಗಣಿತ ವಿಷಯದ ಪರೀಕ್ಷೆ ವೇಳೆ ಅಪರಿಚಿತ ಮಹಿಳೆಯೊಬ್ಬರು ಪರೀಕ್ಷಾ ಕೇಂದ್ರದ ಎಲ್ಲ ಕೊಠಡಿಗಳಿಗೆ ತೆರಳಿ ವಿದ್ಯಾರ್ಥಿಗಳಿಂದ ಸಾಮೂಹಿಕ ನಕಲು ಮಾಡಿಸಿರುವ ಆರೋಪ ವ್ಯಕ್ತವಾಗಿತ್ತು.ನ್ಯಾಯವಾದಿ ಸಿ.ಎಲ್. ಅವಿನಾಶ್ ಈ ಬಗ್ಗೆ ದೂರು ನೀಡಿದ್ದರು. ಜಿಲ್ಲಾ ಧಿಕಾರಿ, ಜಿಪಂ ಸಿಇಒ ಸಿಸಿ ಟಿವಿ ದೃಶ್ಯಾವಳಿ ಗಮನಿಸಿದಾಗ ಪರೀಕ್ಷಾ ಕೇಂದ್ರ ದೊಳಗೆ ಅಪರಿಚಿತ ಮಹಿಳೆ ಓಡಾಡಿರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಜಿಪಂ ಸಿಇಒ ಎಸ್.ಜೆ. ಸೋಮ ಶೇಖರ್, ಪರೀಕ್ಷಾ ಕೇಂದ್ರದಲ್ಲಿ ಸ್ಥಾನಿಕ ಜಾಗೃತ ದಳದ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಕೊಳಾಳು ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಚ್.ಆರ್.ತಿಮ್ಮಪ್ಪ ಹಾಗೂ ಕೇಂದ್ರದ ಉಪ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸಿದ್ದ ಕೋಟೆ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಸಿ.ಟಿ. ಸೌಮ್ಯಕುಮಾರಿ ಅವರನ್ನು ಅಮಾನತು ಮಾಡಿ ಎ. 5ರಂದು ಆದೇಶ ಹೊರಡಿಸಿದ್ದಾರೆ. ಇನ್ನಿತರರನ್ನು ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಅಮಾನತು ಮಾಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಚಿತ್ರದುರ್ಗ…..