ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದಿಂದ 100 ಚಿಗರಿ ಬಸ್ ಆರಂಭ – ಸುದ್ದಿ ಸಂತೆ ನಿರಂತರ ಪ್ರಯತ್ನ ದಿಂದಾಗಿ ಆದೇಶ ಸಂತಸಗೊಂಡ ಚಾಲಕರು…..
ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಿರ್ಮಾಣ. ಗೊಂಡು ಇತ್ತೀಚಿಗಷ್ಟೇ ಉದ್ಘಾಟನೆಯಾಗಿದ್ದ ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣ ಉದ್ಘಾಟನೆಯ ಬೆನ್ನಲ್ಲೇ ಹಂತ ಹಂತವಾಗಿ ಬಸ್ ಗಳ ಕಾರ್ಯಾಚರಣೆ ಆರಂಭ ಮಾಡುತ್ತಿದೆ.ಹೌದು ಈಗಾಗಲೇ ಚಿಗರಿ ಬಸ್ ಸೇರಿದಂತೆ ಬೇರೆ ಬೇರೆ ಉಪನಗರ ಬಸ್ ಗಳು ಇಲ್ಲಿಗೆ ಬರುತ್ತಿದ್ದು ಸಾರ್ವಜನಿಕರು ಕೂಡಾ ಪ್ರಯಾಣ ಬೆಳೆಸುತ್ತಿದ್ದು ಸಧ್ಯ ಇದರೊಂದಿಗೆ ಫೆಬ್ರುವರಿ 5 ರಿಂದ ಇಲ್ಲಿಂದಲೇ 100 ಚಿಗರಿ ಬಸ್ ಗಳು ಸಂಚಾರ ಮಾಡುವಂತೆ ಆದೇಶವನ್ನು ಮಾಡಲಾಗಿದೆ.ಹೌದು ಹಳೆ ಬಸ್ ನಿಲ್ದಾಣ ಆರಂಭಗೊಂಡ ನಂತರ ಧಾರವಾಡ ದಿಂದ ಹುಬ್ಬಳ್ಳಿಯ ರೇಲ್ವೆ ನಿಲ್ದಾಣದವರೆಗೆ ಸಂಚಾರ ವನ್ನು ಮಾಡುತ್ತಿದ್ದು ಬಸ್ ಗಳನ್ನು ಕೊನೆಗೂ ಮೊದಲಿನ ಹಾಗೆ ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದಿಂದ ಕಾರ್ಯಾ ಚರಣೆ ಮಾಡುವಂತೆ ಆದೇಶವನ್ನು ಮಾಡಲಾಗಿದೆ.
ಈ ಒಂದು ವಿಚಾರ ಕುರಿತಂತೆ ಅದರಲ್ಲೂ ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣ ಹೊಸದಾಗಿ ನಿರ್ಮಾಣಗೊಂಡ ನಂತರ ಇಲ್ಲಿಂದಲೇ 100 ಚಿಗರಿ ಬಸ್ ಗಳು ಕಾರ್ಯಾ ಚರಣೆ ಮಾಡುವಂತೆ ಸಾರ್ವಜನಿಕರಿಂದ ಬಸ್ ಚಾಲಕರಿಂದ ಒತ್ತಾಯ ಕೇಳಿ ಬರುತ್ತಿತ್ತು ಈ ಒಂದು ವಿಚಾರ ಕುರಿತಂತೆ ಸುದ್ದಿ ಸಂತೆ ಕೂಡಾ ನಿರಂತರವಾಗಿ ಅಧಿಕಾರಿಗಳೊಂದಿಗೆ ಫಾಲೋ ಮಾಡಿ ಕೊನೆಗೂ ಅಧಿಕಾರಿಗಳು ಈ ಒಂದು ವಿಚಾರ ಕುರಿತಂತೆ ಆದೇಶ ವನ್ನು ಮಾಡಿದ್ದಾರೆ
ಸಧ್ಯ ಫೆಬ್ರುವರಿ 5 ರಿಂದ ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದಿಂದ 100 ಚಿಗರಿ ಬಸ್ ಗಳು ಕಾರ್ಯಾಚರಣೆ ಮಾಡಲಿವೆ ಎಂಬ ಆದೇಶವನ್ನು ಮಾಡಿದ್ದಾರೆ ಈ ಒಂದು ಆದೇಶದಿಂದಾಗಿ ಬಸ್ ಚಾಲಕರು ಸಾರ್ವ ಜನಿಕರು ಸಂತಸಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ…..