ಬೆಂಗಳೂರು –
ಈಗಾಗಲೇ 6ನೇ ವೇತನ ಆಯೋಗದ ಅವಧಿ ಮುಗಿದಿದ್ದು ಹೀಗಾಗಿ ಸಧ್ಯ 7ನೇ ವೇತನ ಆಯೋಗದ ವಿಚಾರ ಕುರಿತಂತೆ ಸಧ್ಯ ಈ ಒಂದು ಸಮಿತಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು ಇನ್ನೇನು ಕೆಲ ತಿಂಗಳುಗಳಲ್ಲಿ ವರದಿಯನ್ನು ಸುಧಾಕರ್ ರಾವ್ ಅವರು ಸರ್ಕಾರಕ್ಕೆ ನೀಡ ಲಿದ್ದು ಇದರ ನಡುವೆ ಈ ಒಂದು ಮಹತ್ವದ ಬೆಳವಣಿಗೆಯ ನಡುವೆ ಬರುವ ವರ್ಷ ರಾಜ್ಯ ದಲ್ಲಿ ಸಾಮೂಹಿಕ ಚುನಾವಣೆ ಬರಲಿದ್ದು ಹೀಗಾಗಿ ಈ ಒಂದುು ಸಮಯದಲ್ಲಿ ಈ ವಿಚಾರ ವನ್ನು ಸರ್ಕಾರ ನಿರ್ಲಕ್ಷ್ಯಿಸಿದರೆ ಎದುರಾಗಲಿದೆ ದೊಡ್ಡ ದೊಂದು ಸಮಸ್ಯೆ
ಇದರಿಂದಾಗಿ ಹೇಗಾದರು ಮಾಡಿ ವೇತನವನ್ನು ಪರಿಷ್ಕರಣೆ ಮಾಡಿ ಹೆಚ್ಚಿ,ಸಬೇಕಾದ ಅನಿವಾ ರ್ಯತೆ ರಾಜ್ಯ ಸರ್ಕಾರದ ಮುಂದೆ ಇದೆ. ವಿಶೇಷ ವಾಗಿ ಚುನಾವಣಾ ವರ್ಷದಲ್ಲಿ ನೌಕರರ ಬೇಡಿಕೆ ಯನ್ನು ನಿರ್ಲಕ್ಷಿಸದೇ ಕೂಡಲೇ ಇದನ್ನು ಸರ್ಕಾರವು ಈ ಬೃಹತ್ ಮೊತ್ತವನ್ನು ತೂಗಿಸು ವುದು ದೊಡ್ಡ ಸವಾಲಿನ ಬೇಡಿಕೆಗೆ ಅನುಗುಣ ವಾಗಿ ವೇತನವನ್ನು ಪರಿಷ್ಕರಿಸಿ ನೌಕರರಿಗೆ ಕೇಡರ್‌ಗೆ ಅನುಗುಣವಾಗಿ 10,000 ರಿಂದ 50,000 ರೂ. ವರೆಗೆ ವೇತನ ಹೆಚ್ಚಿ,ಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.
2017ರಲ್ಲಿ, ಆಗಿನ ರಾಜ್ಯ ಸರ್ಕಾರವು ಮಾಜಿ ಐಎಎಸ್ ಅಧಿಕಾರಿ ಎಂಆರ್ ಶ್ರೀನಿವಾಸ ಮೂರ್ತಿ ಅವರನ್ನು ಆರನೇ ವೇತನ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಮೊದಲ ವೇತನ ಆಯೋಗವನ್ನು 1966 ರಲ್ಲಿ ರಚಿಸಲಾಗಿತ್ತು. ಇನ್ನೂ ಇದೇ ವೇಳೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಕ್ಷರಿ ಅವರು ಸುದ್ದಿ ಸಂತೆ ಯೊಂದಿಗೆ ಮಾತನಾಡಿ ‘2017 ರಲ್ಲಿ, ಆರನೇ ವೇತನ ಆಯೋಗವು ಮೂಲ ವೇತನ ದಲ್ಲಿ ಶೇ.29 ರಷ್ಟು ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿತ್ತು.
ವೇತನ ಪರಿಷ್ಕರಣೆ ಐದು ವರ್ಷಕ್ಕೊಮ್ಮೆ ಮಾಡ ಬೇಕು ಎಂದರು. ಕೇಂದ್ರ ಸರ್ಕಾರ ಮತ್ತು ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ಇತರ ರಾಜ್ಯ ಸರ್ಕಾರಿ ನೌಕರರಿಗೆ ಹೋಲಿಸಿದರೆ ರಾಜ್ಯ ಸರ್ಕಾರಿ ನೌಕರರ ವೇತನ ಪ್ರಮಾಣವು ತುಂಬಾ ಕಡಿಮೆಯಾಗಿದೆ ಎಂದು ಅವರು ಹೇಳಿದ್ದು ಹೀಗಾಗಿ ಏನೇನಾಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.
ರಕ್ಷಿತ ಸುದ್ದಿ ಸಂತೆ ನ್ಯೂಸ್