100 ಅಂಕ ಗಳಿಗೆ 89 ಮಾರ್ಕ್ಸ್ ಪಡೆದ 104 ವಯಸ್ಸಿನ ಅಜ್ಜಿ ಅಜ್ಜಿ ಅಕ್ಷರ ಸಾಧನೆಗೆ ಮೆಚ್ಚುಗೆಯ ಮಹಾಪೂರ…..

Suddi Sante Desk

ಕೊಟ್ಟಾಯಂ (ಕೇರಳ) –

ಕಲಿಕೆಗೆ ಯಾವುದೇ ವಯಸ್ಸಿನ ಹಂಗಿಲ್ಲ ಯಾವ ವಯಸ್ಸಿ ನಲ್ಲಿ ಏನು ಬೇಕಾದರೂ ಕಲಿಯಬಹುದು ಸಾಧಿಸಬಹುದು ಎನ್ನುವ ಮಾತನ್ನು ಇಲ್ಲೊಬ್ಬ ಅಜ್ಜಿ ಸಾಬೀತು ಮಾಡಿದ್ದಾರೆ ಹೌದು ಈಗಾಗಲೇ ಕೇರಳದಲ್ಲಿ ಹಲವಾರು ವೃದ್ಧರು ಸಾಬೀತು ಮಾಡಿದ್ದು ಸಾಕ್ಷರತೆ ವಿಚಾರದಲ್ಲಿ ನಂಬರ್‌ 1 ಸ್ಥಾನದಲ್ಲಿರುವ ಇಲ್ಲಿ ಸಾಕ್ಷತರಾ ಪರೀಕ್ಷೆ ಪ್ರತಿವರ್ಷವೂ ನಡೆಯುತ್ತದೆ ಇದರಲ್ಲಿ ವೃದ್ಧರು ಮಾಡಿರುವ ಸಾಧನೆ ಮೆಚ್ಚುವಂತಹದ್ದು

104 ವರ್ಷದ ವೃದ್ಧೆಯೊಬ್ಬರು ಈ ಪರೀಕ್ಷೆಯಲ್ಲಿ 100ಕ್ಕೆ 89 ಅಂಕ ಪಡೆದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಕೊಟ್ಟಾಯಂ ಜಿಲ್ಲೆಯ ಆಯರಕುನ್ನಂ ಪಂಚಾಯಿತಿಯು ಈ ಪರೀಕ್ಷೆ ನಡೆಸಿತ್ತು. ಕೇರಳ ರಾಜ್ಯ ಸಾಕ್ಷರತಾ ಮಿಷನ್ ಅಡಿಯಲ್ಲಿ ಈ ಪರೀಕ್ಷೆ ನಡೆಸಲಾಗುತ್ತದೆ ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರವು ಕೇರಳ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸ್ವಾಯುತ್ತ ಸಂಸ್ಥೆಯಾ ಗಿದ್ದು ಸಾಕ್ಷರತಾ ಪ್ರಮಾಣ ಹೆಚ್ಚಳಕ್ಕೆ ಹಲವಾರು ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ

ಈ ಪರೀಕ್ಷೆಯಲ್ಲಿ ಕುಟ್ಟಿಯಮ್ಮ ಎನ್ನುವ ವೃದ್ಧೆಯೊಬ್ಬರು ಬರೆದಿದ್ದು ಇದರಲ್ಲಿ ಇಂಥದ್ದೊಂದು ಸಾಧನೆ ಮಾಡಿದ್ದಾರೆ. ಮನೆಯಿಂದಲೇ ಸಾಕ್ಷರತಾ ಪರೀಕ್ಷೆಯಲ್ಲಿ ಅವರು ಭಾಗವ ಹಿಸಿದ್ದರು.ಈ ಪರೀಕ್ಷೆಯು ಸಾಮಾನ್ಯವಾಗಿ ನಾಲ್ಕನೇ ತರಗತಿಯ ಗುಣಮಟ್ಟವನ್ನು ಹೊಂದಿರುತ್ತದೆ ಅದರಂತೆ ಪರೀಕ್ಷೆ ಬರೆದಿದ್ದಾರೆ ಕುಟ್ಟಿಯಮ್ಮ.ಶಿಕ್ಷಕಿಯಾಗಿರುವ ರೆಹ್ನಾ ನನಗೆ ಮಲಯಾಳಂನಲ್ಲಿ ಅಕ್ಷರಗಳನ್ನು ಬರೆಯಲಿ ಹೇಳಿಕೊಟ್ಟರು ಕೆಲ ವರ್ಷಗಳ ಹಿಂದೆ ಪತಿ ತೀರಿಕೊಂಡ ಮೇಲೆ ಒಂಟಿಯಾಗಿದ್ದ ನನಗೆ ಅಕ್ಷರ ಕಲಿಯುವ ಹಂಬಲ ವಾಗಿ ನಾನು ಓದುವುದನ್ನು ಬರೆಯುವುದನ್ನು ಕಲಿತಿದ್ದೇನೆ ಎಂದು ಸಂತೋಷದಿಂದ ಹೇಳುತ್ತಾರೆ ಕುಟ್ಟಿಯಮ್ಮ

ಸುದ್ದಿ ಸಂತೆ ಡೆಸ್ಕ್ ಬೆಂಗಳೂರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.