ಉಕ್ರೇನ್ –
ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ 17 ಮಂದಿ ಸಾವು ಹೌದು ಪೂರ್ವ ಉಕ್ರೇನ್‌ನ ಕೋಸ್ಟಿ ಯಾಂಟಿನಿವ್ಕಾ ನಗರದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆದಿದೆ, ಘಟನೆಯಲ್ಲಿ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.ಉಕ್ರೇನ್ ಅಧ್ಯಕ್ಷ ವೊಲೊ ಡಿಮಿರ್ ಝೆಲೆನ್ಸ್ಕಿ ಅವರ ಸಲಹೆಗಾರಮೈಖೈಲೊ ಪೊಡೊಲ್ಯಾಕ್ ಈ ಮಾಹಿತಿಯನ್ನು ನೀಡಿದ್ದಾರೆ.
ದಾಳಿಯನ್ನು ಹೇಗೆ ನಡೆಸಲಾಯಿತು ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ ಆದರೆ ಕೊಸ್ಟಿ ಯಾಂಟಿನಿವ್ಕಾ ನಗರದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಉಕ್ರೇನ್‌ನ ಕೋಸ್ಟಿಯಾಂಟಿನಿವ್ಕಾ ನಗರವು ಯುದ್ಧಭೂಮಿಗೆ ಬಹಳ ಹತ್ತಿರದಲ್ಲಿದೆ.ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದಾಳಿಯನ್ನು ಖಂಡಿ ಸಿದ್ದಾರೆ.ಈ ದಾಳಿಯಲ್ಲಿ 17 ಜನರು ಸಾವನ್ನಪ್ಪಿ ದ್ದಾರೆ.ಪ್ರಾಣ ಕಳೆದುಕೊಂಡವರಲ್ಲಿ ಮಕ್ಕಳೂ ಸೇರಿದ್ದಾರೆ ರಷ್ಯಾದ ದಾಳಿಯಿಂದಾಗಿ ನಗರದಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ.
ರಷ್ಯಾದ ದಾಳಿಯಲ್ಲಿ ನಗರದ ಮಾರುಕಟ್ಟೆ, ಅಂಗಡಿಗಳು ಮತ್ತು ಔಷಧಿ ಅಂಗಡಿಗೆ ಹಾನಿ ಯಾಗಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ತಿಳಿಸಿ ದ್ದಾರೆ.ಅಮೆರಿಕದ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕೆನ್ ಕೀವ್‌ಗೆ ತಲುಪಿರುವ ಸಮಯದಲ್ಲಿ ರಷ್ಯಾ ಈ ದಾಳಿ ಮಾಡಿದೆ.
ಹಲವು ತಿಂಗಳುಗಳಲ್ಲಿ ನಡೆಸಲಾದ ಅತ್ಯಂತ ಅಪಾಯಕಾರಿ ದಾಳಿ ಇದಾಗಿದೆ ಎಂದು ಉಕ್ರೇನ್ ಪ್ರಧಾನಿ ಡೆನಿಸ್ ಸ್ಮಿಹಾಲ್ ಹೇಳಿದ್ದಾರೆ.
ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ ರಷ್ಯಾದ ಸೈನಿಕರನ್ನು ಭಯೋತ್ಪಾದಕರಿಗೆ ಹೋಲಿಸಿ ತಕ್ಕ ಉತ್ತರ ನೀಡಲಾಗುವುದು ಎಂದು ಹೇಳಿದರು.
ಎಸ್-300 ಕ್ಷಿಪಣಿ ಮೂಲಕ ರಷ್ಯಾ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ ನಗರದ ಹೃದಯ ಭಾಗದಲ್ಲಿ ಈ ದಾಳಿ ನಡೆದಿದೆ ದಾಳಿ ನಡೆದ ಮಾರುಕಟ್ಟೆಯು ಶಾಪಿಂಗ್ ಸೆಂಟರ್‌ಗೆ ಸಮೀಪದಲ್ಲಿದ್ದು, ಕೋಸ್ಟಿಯಾಂಟಿನಿವ್ಕಾ ಪಟ್ಟಣದ ಹತ್ತಿರದಲ್ಲಿದೆ.
ಸುದ್ದಿ ಸಂತೆ ನ್ಯೂಸ್ ಉಕ್ರೇನ್…..