ಹುಬ್ಬಳ್ಳಿ –
ದುಷ್ಟಶಕ್ತಿಗಳನ್ನು ಸಂಹಾರ ಮಾಡಿ ಸಮಸ್ತ ಲೋಕದ ರಕ್ಷಣೆಗಾಗಿ ಹುಬ್ಬಳ್ಳಿಯಲ್ಲಿ ಸಂತೋಷ ಚವ್ಹಾಣ ದಂಪತಿಗಳಿಂದ 108 ಕಮಲ ಪುಷ್ಪ ಸಹಿತ ದುರ್ಗಾ ಚಂಡಿಕಾ ಯಾಗ – ಯಾಗದಲ್ಲಿ ಪಾಲ್ಗೊಂಡ ವಿಜಯನಗರ ಹೌಸಿಂಗ್ ಸೊಸೈಟಿಯ ಸರ್ವ ಸದಸ್ಯರು…..
ದುಷ್ಟಶಕ್ತಿಗಳನ್ನು ಸಂಹಾರ ಮಾಡಿ ಸಮಸ್ತ ಲೋಕವನ್ನು ರಕ್ಷಣೆ ಮಾಡಿದ ಜಗನ್ಮಾತೆ ಶ್ರೀದುರ್ಗಾ ಪರಮೇಶ್ವರಿಯ ಪ್ರೀತಿ ಮತ್ತು ಪರಮಾನುಗ್ರಹವನ್ನು ಪಡೆಯುವದಕ್ಕಾಗಿ ದುರ್ಗಾಷ್ಟಮಿ ದಿನ ಅತಿಶ್ರೇಷ್ಠ ಶ್ರೇಣಿಯಲ್ಲಿ ಆಗಮೋಕ್ತ ಲಕ್ಷ್ಮೀಹೃದಯ ಮಂತ್ರ ಪೂರ್ವಕ
108 ಕಮಲಪುಷ್ಪ ಮಧು ಸಹಿತ ದುರ್ಗಾ-ಚಂಡಿ ಕಾಯಾಗವನ್ನು ಹುಬ್ಬಳ್ಳಿಯ ವಿಜಯನಗರದ ವಿಜಯಾಂಜನೇಯ ವೇದ ಸಂಸ್ಕೃತ ವಿದ್ಯಾ ಲಯ ಮತ್ತು ವಿಜಯನಗರ ಹೌಸಿಂಗ್ ಸೊಸೈಟಿ ವತಿಯಿಂದ ನಡೆಯಿತು.
ಪ್ರತಿಷ್ಠಿತಳಾದ ದುರ್ಗಾದೇವಿಯ ಸನ್ನಿಧಾನದಲ್ಲಿ ಈ ಒಂದು ಹೋಮ ಯಾಗವನ್ನು ನಡೆಸಲಾ ಯಿತು.ಯಾಗದ ಅಧ್ಯಕ್ಷತೆಯನ್ನು ವೇದಪೀಠದ ಅಧ್ಯಕ್ಷರಾದ ಡಾ.ಕಂಠಪಲ್ಲೀ ಗುರುಗಳು ಕಮಲ ಪುಷ್ಪ ಮಧು ಸಹಿತ ದುರ್ಗಾ ಯಾಗದ ಉದ್ದೇಶ ಸನಾತನ ಭಾರತೀಯ ಧರ್ಮ ರಕ್ಷಣೆ ಮತ್ತು ಭಾರತ ದೇಶದ ಪ್ರಧಾನಮಂತ್ರಿ ಮೋದಿಜಿ ಅವರ ಅಭ್ಯುದಯ ಮತ್ತು ಯೋಧರು ಹಾಗೂ ರೈತರ ಕಲ್ಯಾಣ ಮತ್ತು ದೇಶವಾಸಿಗಳ ಸುಖ-ಶಾಂತಿಗಾ ಗಿಯೇ ಆಯೋಜಿತವಾಗಿದೆ ಎಂದು ಸಂದೇಶ ವನ್ನು ಕೊಟ್ಟರು.
ವೈಭವದಿಂದ ನಡೆದ ದುರ್ಗಾ-ಚಂಡಿಕಾ ಯಾಗದ ಯಾಜಮಾನ್ಯವನ್ನು ವಹಿಸಿದ ಸಂತೋಷ ಚವ್ಹಾಣ ಬಿಜೆಪಿ ಪ್ರಮುಖರಾದ – ಮಹಾನಗರ ಪಾಲಿಕೆ ಸದಸ್ಯರು – ಶ್ರೀಮತಿ ದೀಪಾ ಚವ್ಹಾಣ ದಂಪತಿಗಳು ಪೂಜೆಯನ್ನು ಸಲ್ಲಿಸಿದರು.ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಜಯನಗರ ಹೌಸಿಂಗ್ ಸೊಸೈಟಿ ಚೇರ್ಮನ್ .ವಿ ಸಿ ದಿನೇಶ, ಪದಾಧಿಕಾರಿಗಳಾದ
ಆನಂದ ಪಾಟೀಲ್,ಡಾ. ಹಿರೇಗೌಡರ್ ವಿನೋದ ದೇಶಪಾಂಡೆ,ಸಂಧ್ಯಾ ದೀಕ್ಷಿತ್ ಮಧುಕರ್, ಸುಬ್ಬ ಣ್ಣಾಚಾರ್,ಉಮೇಶ್ ಭಟ್ ಮೊದಲಾದ ಭಕ್ತರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..