ಧಾರವಾಡ –
ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ ಹೊರವಲಯದ ಕೆಲಗೇರಿ ಯ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಈ ಒಂದು ಅಪಘಾತ ನಡೆದಿದೆ

ಹೆದ್ದಾರಿ ಯ ಕೆಲಗೇರಿ ಯ ಸೇತುವೆಯ ಮೇಲೆ ಈ ಒಂದು ಅಪಘಾತ ನಡೆದಿದೆ.ಎರಡು ಲಾರಿಗಳು ಪರಸ್ಪರ ಮುಖಾಮುಖಿ ಡಿಕ್ಕಿಯಾಗಿವೆ.

ಇನ್ನೂ ಮುಖಾಮುಖಿ ಡಿಕ್ಕಿಯಾಗುತ್ತಿದ್ದಂತೆ ಒಂದು ಲಾರಿಯಲ್ಲಿನ ಚಾಲಕನ ಕಾಲು ಕೈ ಮುರಿದಿದೆ. ಇನ್ನೂ ಸ್ಥಳಕ್ಕೆ ಆಗಮಿಸಿದ 108 ಸಿಬ್ಬಂದಿ ಗಳಾದ ದೇವೆಂದ್ರ ಎಸ್ ಗಂಗಾಧರ್, ಮತ್ತು ಶಾಂತೇಶ್ ಕೆ ಅರ್ ಇವರು ಸಾರ್ವಜನಿಕರ ಸಹಾಯದಿಂದ ಲಾರಿಯಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ಹೊರಗೆ ತಗೆದು ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ಗಾಗಿ ದಾಖಲು ಮಾಡಿದರು ಇನ್ನೂ ಈ ಕುರಿತು ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
