ಬೆಂಗಳೂರು –
ಎರಡು ವರ್ಷಗಳ ಹಿಂದೆ ನಡೆದ SSLC ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಲೋಪ ಎಸಗಿದ 1,200 ಶಿಕ್ಷಕರನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಪ್ಪುಪಟ್ಟಿಗೆ ಸೇರಿಸಿ ಈ ಶಿಕ್ಷಕರಿಗೆ ದಂಡವನ್ನೂ ಕೂಡಾ ವಿಧಿಸಿದೆ.2021-22ನೇ ಸಾಲಿನ SSLC ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ 234 ಕೇಂದ್ರಗಳಲ್ಲಿ ಇದೇ 23 ರಿಂದ ಆರಂಭವಾಗಲಿದೆ.ಆದರೆ ಕಪ್ಪು ಪಟ್ಟಿ ಯಲ್ಲಿ ಹೆಸರಿರುವ ಶಿಕ್ಷಕರನ್ನು ಮೌಲ್ಯಮಾಪನ ಕಾರ್ಯ ದಿಂದ ಹೊರಗಿಡಲಾಗಿದೆ.ಈ ವರ್ಷ 65 ಸಾವಿರಕ್ಕೂ ಹೆಚ್ಚು ಶಿಕ್ಷಕರು ಮೌಲ್ಯಮಾಪನದಲ್ಲಿ ಭಾಗವಹಿಸಲಿದ್ದಾರೆ.
ಮೌಲ್ಯಮಾಪನಗೊಂಡ ಉತ್ತರಪತ್ರಿಕೆಗಳ ಮರು ಮೌಲ್ಯ ಮಾಪನದ ಸಂದರ್ಭದಲ್ಲಿ ಆರು ಅಥವಾ ಅದಕ್ಕಿಂತ ಹೆಚ್ಚು ಅಂಕಗಳ ವ್ಯತ್ಯಾಸ ಕಂಡುಬಂದ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿದ ಶಿಕ್ಷಕರಿಗೆ ದಂಡ ವಿಧಿಸಿ, ಕಪ್ಪು ಪಟ್ಟಿಗೆ ಸೇರಿಸಲಾಗಿದೆ.
ಇನ್ನೂ ಪ್ರಮುಖವಾಗಿ ಉತ್ತರ ಪತ್ರಿಕೆಗಳ ಮರು ಮೌಲ್ಯ ಮಾಪನದ ಸಂದರ್ಭದಲ್ಲಿ ಪತ್ತೆಯಾದ ಅಂಕಗಳ ವ್ಯತ್ಯಾಸ ವನ್ನು ಆಧರಿಸಿ ₹ 800ರಿಂದ ₹ 2000 ದವರೆಗೆ ದಂಡ ವಿಧಿಸಲಾಗಿದೆ.ದಂಡ ಪಾವತಿಸಿದ ಶಿಕ್ಷಕರನ್ನು ಮುಂದಿನ ವರ್ಷದಿಂದ ಮೌಲ್ಯಮಾಪನ ಕಾರ್ಯಕ್ಕೆ ಪರಿಗಣಿಸಲಾಗು ವುದು.ಪಾವತಿಸದವರು ದಂಡ ಮೊತ್ತ ಪಾವತಿಸುವರೆಗೂ ಕಪ್ಪುಪಟ್ಟಿಯಲ್ಲಿಯೇ ಮುಂದುವರಿಯಲಿದ್ದಾರೆ ಎಂದು ಪರೀಕ್ಷಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.