ಹೆಬ್ಬಳ್ಳಿ –
ಸಧ್ಯ ರಾಜ್ಯದಲ್ಲಿ ಒಂದು ಯೂನಿಟ್ ವಿದ್ಯುತ್ ಗೆ ಒಂಬತ್ತು ರೂಪಾಯಿ ಇದೆ.ನಾವು ಬಳಸುವ ಯೂನಿಟ್ ಆಧಾರದ ಮೇಲೆ ವಿದ್ಯುತ್ ಇಲಾಖೆಯವರು ವಿದ್ಯುತ್ ಬಿಲ್ ನ್ನು ನಮಗೆ ನೀಡುತ್ತದೆ ಹೌದು ಆದರೆ ಧಾರವಾಡದ ಹೆಬ್ಬಳ್ಳಿ ಗ್ರಾಮದಲ್ಲಿ 11 ಯೂನಿಟ್ ಗೆ 12 ಸಾವಿರ ರೂಪಾಯಿ ವಿದ್ಯುತ್ ಬಿಲ್ ಬಂದಿದೆ.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಈ ಒಂದು ಅವಾಂತರದಿಂದ ಗ್ರಾಮದ ಕೆಲ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ವಿದ್ಯುತ್ ಸರಬರಾಜು ಸಿಬ್ಬಂದಿಯ ಅವಾಂತರದಿಂದಾಗಿ ಗ್ರಾಮದ ಹಲವರಿಗೆ ಮೀಟರ್ ರೀಡಿಂಗ್ ಬಳಕೆ ಕೇವಲ 12 ಯೂನಿಟ್ 11 ಸಾವಿರ ಬಿಲ್ ಬಂದಿದ್ದು ಇದನ್ನು ನೋಡಿ ಶಾಕ್ ಆಗಿದ್ದಾರೆ
ಮೀಟರ್ ರೀಡಿಂಗ್ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಿ ಅವರು ಎಷ್ಟು ಬರೆಯುತ್ತಾರೆ ಬಳಕೆ ಆಗಿರುವುದು ಎಷ್ಟು ಅಂತ ಸ್ವಲ್ಪ ವಿಚಾರ ಮಾಡಿ ಎಂಬ ಸಂದೇಶವೊಂದನ್ನು ಸಾರ್ವಜನಿಕರು ಸಾಮಾಜಿಕ ಜಾಲ ತಾಣಗಳಲ್ಲಿ ಉಲ್ಲೇಖ ಮಾಡಿ ಹಾಕಿದ್ದಾರೆ.
ಪರಶುರಾಮ ಗೌಡರ ಜೊತೆ ಮಂಜುನಾಥ ಸರ್ವಿ ಸುದ್ದಿ ಸಂತೆ ನ್ಯೂಸ್ ಧಾರವಾಡ ಬ್ಯೂರೊ.