2 ವರ್ಷದಲ್ಲಿ 15 ಮದುವೆ ಹನಿಮೂನ್ ಹೆಸರಲ್ಲಿ ವಂಚಿಸುತ್ತಿದ್ದ ಚಾಲಾಕಿ ಮಹಿಳೆ ಸಿಕ್ಕಿಬಿದ್ದದ್ದೇ ರೋಚಕ – ಯಶಸ್ವಿಯಾಗಿ ಬಂಧಿಸಿದ ಕ್ರೈಮ್ ಪೊಲೀಸರು…..

Suddi Sante Desk

ಭೋಪಾಲ್

ಕಳೆದ ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ವಂಚಕಿಯೊಬ್ಬಳನ್ನು ಬಂಧನ ಮಾಡುವಲ್ಲಿ ಭೋಪಾಲ್ ಕ್ರೈಂ ಬ್ರಾಂಚ್ ಪೊಲೀಸರು ಯಶಸ್ವಿಯಾಗಿದ್ದಾರೆ.ಹೌದು ಮಹಿಳೆ ಈಗಾಗಲೇ ಇಬ್ಬರು ಮಕ್ಕಳ ತಾಯಿಯಾಗಿದ್ದು ಬೇರೆ ಬೇರೆ ಹೆಸರಿಟ್ಟುಕೊಂಡು ಮದುವೆ ಮಾಡಿಕೊಳ್ಳುವ ಮೂಲಕ ಬರೋಬ್ಬರಿ 15 ಮಂದಿಗೆ ವಂಚನೆ ಮಾಡಿದ್ದಾಳೆ.ಮದುವೆ ಮಾಡಿಕೊಂಡು ಹನಿಮೂನ್ ಹೆಸರಿನಲ್ಲಿ ಅವರಿಗೆಲ್ಲ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.ಮಹಿಳೆ ಪೂಜಾ,ರಿಯಾ,ರೀನಾ,ಸುಲ್ತಾನಾ ಎಂಬ ಹೆಸರಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಬರೋಬ್ಬರಿ 15 ಮದುವೆ ಮಾಡಿಕೊಂಡಿದ್ದು ಬೇರೆ ಬೇರೆ ಸ್ಥಳಗಳಲ್ಲಿ ವಾಸ ಮಾಡುವ ಮೂಲಕ ಪೊಲೀಸರ ದಾರಿ ತಪ್ಪಿಸುವ ಕೆಲಸ ಸಹ ಮಾಡಿದ್ದಾಳೆ.ಉಜ್ಜೈನಿ,ಜಬಲ್ಪುರ್,ನರ್ಮದಾಪುರಂ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಯುವತಿ ವಿರುದ್ಧ ವಂಚನೆ ಯ ದೂರು ದಾಖಲಾಗಿವೆ.

ವಂಚನೆ ಮಾಡಿರುವ ಮಹಿಳೆಯನ್ನ ಬುಧ್ವಾರದ ಸೀಮಾ (32)ಎಂದು ಗುರುತಿಸಲಾಗಿದೆ.ಈ ಮಹಿಳೆಯನ್ನ ಬಂಧಿಸಿ ರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಇದೀಗ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.ಈ ವೇಳೆ ಮಹಿಳೆ ವಿಚಾರಣೆ ನಡೆಸಲಾಗಿದ್ದು ಕಳೆದ ಎರಡು ವರ್ಷ ಗಳಲ್ಲಿ ಬರೋಬ್ಬರಿ 15 ಯುವಕರೊಂದಿಗೆ ಮದುವೆ ಮಾಡಿಕೊಂಡು ಅವರಿಗೆ ಮೋಸ ಮಾಡಿರುವುದಾಗಿ ಹೇಳಿ ಕೊಂಡಿದ್ದಾಳೆ.ಕಳೆದ ಎರಡು ವರ್ಷಗಳ ಹಿಂದೆ ಸೀಮಾ ವಿರುದ್ಧ ಕಾಂತಪ್ರಸಾದ್ ಎಂಬುವವರು ದೂರು ದಾಖಲು ಮಾಡಿದ್ದರು.ಅಂದಿನಿಂದಲೂ ಯುವತಿಗೋಸ್ಕರ ಪೊಲೀ ಸರು ಹುಡುಕಾಟ ನಡೆಸಿದ್ದರು.ಇದೀಗ ಅದರಲ್ಲಿ ಸಫಲ ರಾಗಿದ್ದಾರೆ.ಮದುವೆ ಮಾಡಿಕೊಳ್ಳುವ ನೆಪದಲ್ಲಿ ಮೋಸ ಮಾಡಿರುವ ಮಹಿಳೆ ಲಕ್ಷಗಟ್ಟಲೆ ಹಣ ಲಪಟಾಯಿಸಿದ್ದಾಳೆ.

ಮದುವೆಯಾದ ಬಳಿಕ ಹನಿಮೂನ್ ಅಥವಾ ಮನೆಯಲ್ಲಿ ಯಾರಿಗಾದ್ರೂ ಅನಾರೋಗ್ಯ ಎಂದು ಹೇಳಿ ಹಣ ಪಡೆದು ಕೊಂಡು ಪರಾರಿಯಾಗುತ್ತಿದ್ದಳೆಂದು ಡಿಸಿಪಿ ಶೈಲೆಂದ್ರ ಚೌಹಾಣ್ ತಿಳಿಸಿದ್ದಾರೆ.ಪ್ರಮುಖವಾಗಿ ಕೋವಿಡ್ ಸಂದರ್ಭದಲ್ಲಿ ಅನೇಕ ಹಳ್ಳಿಗಳಲ್ಲಿ ಮದುವೆ ಹೆಸರಿನಲ್ಲಿ ಜನರನ್ನ ಬಲೆಗೆ ಬೀಳಿಸಿ ಮದುವೆಯ ನೆಪದಲ್ಲಿ ಮೋಸ ಮಾಡಿದ್ದಾಳೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.