ಬುಕಾರೆಸ್ಟ್ –
ಯುದ್ಧ ದಿಂದ ನಲುಗಿ ಹೋಗಿರುವ ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣಾ ಕಾರ್ಯ ಆರಂಭ ಗೊಂಡಿದ್ದು ಅಲ್ಲಿದವರನ್ನು ಸರಕಾರ ಕರೆ ತರಲು ಮುಂದಾಗಿದ್ದು ಕಾರ್ಯಾಚರಣೆ ಆರಂಭವಾಗಿದ್ದು ಮೊದಲ ಹಂತದಲ್ಲಿ ಇಂದು 219 ಮಂದಿ ಭಾರತೀಯ ರನ್ನು ಉಕ್ರೇನ್ ನ ನೆರೆಯ ರಾಷ್ಟ್ರ ರೊಮೇನಿಯಾ ಮೂಲಕ ಏರ್ ಇಂಡಿಯಾ ವಿಶೇಷ ವಿಮಾನದ ಮೂಲಕ ಮುಂಬಯಿ ಗೆ ಕರೆ ತರಲಾಯಿತು
ಈಗಷ್ಟೇ 8 ಗಂಟೆಯ ವೇಳೆಗೆ ವಿಮಾನ ಮುಂಬಯಿಗೆ ಬಂದಿಳಿಯಿತು.ವಿಮಾನ ನಿಲ್ದಾಣದಲ್ಲಿ ಭವಿಷ್ಯದ ಕನಸು ಕಟ್ಟಿ ಹೋಗಿದ್ದ ವೈದ್ಯಕೀಯ ವಿದ್ಯಾರ್ಥಿಗಳು ಕಣ್ಣೀರಿನಲ್ಲೇ ಭವಿಷ್ಯದ ಚಿಂತನೆಯಲ್ಲಿ ವಿಮಾನವನ್ನೇರಿದ್ದು ಮನಕಲಕು ವಂತಿತ್ತು.ಇನ್ನೂ ಇದಕ್ಕೂ ಮುನ್ನ ರೊಮೇನಿಯಾದ ಭಾರ ತೀಯ ರಾಯಭಾರಿ ರಾಹುಲ್ ಶ್ರೀವಾತ್ಸವ ವಿಮಾನದಲ್ಲಿದ್ದ ವರನ್ನುದ್ದೇಶಿಸಿ ಮಾತನಾಡಿ ಭಾರತ ಸರಕಾರ ಪ್ರಜೆಗಳನ್ನು ರಕ್ಷಿಸಲು ಹಗಲಿರುಳು ಕೆಲಸ ಮಾಡುತ್ತಿದೆ.ಕೊನೆಯ ವ್ಯಕ್ತಿ ಯನ್ನು ರಕ್ಷಿಸುವ ವರೆಗೂ ಸರಕಾರ ಕೆಲಸ ನಿಲ್ಲಿಸುವುದಿಲ್ಲ ಎಂದರು.ನನ್ನ ಸಹೋದರ, ಸಹೋದರಿಯರೇ ಜೀವನ ದಲ್ಲಿ ವಿಷಯಗಳು ಕಷ್ಟಕರವಾದಾಗ ಫೆಬ್ರವರಿ 26 ಈ ದಿನವನ್ನು ನೆನಪಿಡಿ ಎಂಬ ಮನಕಲಕುವ ಈ ಮಾತನ್ನು ಹೇಳಿದರು.ಇನ್ನೂ ನಾಳೆ ಮತ್ತೊಂದು ವಿಮಾನ ಮತ್ತಷ್ಟು ಭಾರತೀಯರನ್ನು ಹೊತ್ತುಕೊಂಡು ದೇಶಕ್ಕೆ ಬರಲಿದೆ