ಧಾರವಾಡ –
ಧಾರವಾಡ ಜಿಲ್ಲೆಯಲ್ಲಿ ನಡೆದಿದ್ದ ಮಹಿಳೆಯರಿಬ್ಬರ ಕೊಲೆ ಪ್ರಕರಣವನ್ನು ಕೊನೆಗೂ ಹುಬ್ಬಳ್ಳಿ ಧಾರವಾಡ ಪೊಲೀಸ ರೊಂದಿಗೆ ಜಿಲ್ಲಾ ಪೊಲೀಸರು ಭೇಧಿಸಿದ್ದಾರೆ.ಹೌದು ಈ ತಿಂಗಳು ನಡೆದಿದ್ದ ಇಬ್ಬರು ಮಹಿಳೆಯರಿಬ್ಬರ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು ಅವಳಿ ನಗರದ ಪೊಲೀಸರೊಂದಿಗೆ ಜಿಲ್ಲೆಯ ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿ ಆರೋಪಿಗಳಿಗೆ ಎಡೆ ಮೂರಿ ಕಟ್ಟಿದ್ದಾರೆ.
ಮೋಜು ಮಸ್ತಿಗಾಗಿ ಮರ್ಡರ್ ಮಾಡ್ತಿದ್ದ ಗ್ಯಾಂಗ್ ನ್ನು ಪೊಲೀಸರ ವಶಕ್ಕೆ ತಗೆದುಕೊಂಡಿದ್ದಾರೆ.ಡೆಡ್ಲಿ ಗ್ಯಾಂಗ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಧಾರವಾಡ ಜಿಲ್ಲೆಯ ಪೊಲೀಸರು.ಈ ಕುರಿತಂತೆ ಧಾರವಾಡ ಎಸ್ಪಿ ಲೋಕೇಶ್ ಜಗಲಾಸರ್ ಸುದ್ದಿಗೋಷ್ಠಿಯಲ್ಲಿ ಸಮಗ್ರವಾದ ಮಾಹಿತಿ ಯನ್ನು ನೀಡಿದ್ದಾರೆ.
ಹುಬ್ಬಳ್ಳಿ ಕಲಘಟಗಿ ರಸ್ತೆಯಲ್ಲಿ ಸಿಕ್ಕಿದ್ದ ಎರಡು ಮಹಿಳೆ ಯರ ದೇಹಗಳು 11-5-22 ರಂದು ಸಿಕ್ಕಿದ್ದ ಮೊದಲ ಮೃತ ದೇಹ 2-7-22 ಕಲಘಟಗಿ ಯಲ್ಲಾಪುರ ರಸ್ತೆಯಲ್ಲಿ ಸಿಕ್ಕಿದ್ದ ಎರಡನೇ ಮೃತ ದೇಹ.ಈ ಎರಡು ಪ್ರಕರಣಗಳು ಪೊಲೀಸ ರಿಗೆ ದೊಡ್ಡ ತಲೆನೋವಾಗಿದ್ದವು ಹೀಗಾಗಿ ಈ ಕುರಿತಂತೆ ಧಾರವಾಡ ಜಿಲ್ಲಾ ಎಸ್ಪಿ ಡಿಎಸ್ಪಿ ನೇತ್ರತ್ವದಲ್ಲಿ ಪತ್ತೆಗಾಗಿ ಅಧಿಕಾರಿಗಳ ತಂಡವನ್ನು ರಚನೆ ಮಾಡಿದ್ದರು.
22 ದಿನಗಳ ಕಾಲ ಹಗಲು ರಾತ್ರಿ ಎನ್ನದೇ ಜಂಟಿ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಪೊಲೀಸ್ ಅಧಿಕಾರಿಗಳು ಇಂಚಿಂಚೂ ಹುಡುಕಾಡಿ ಹುಡುಕಾಡಿ ಸಿಬ್ಬಂದಿಗಳನ್ನು ಬೆನ್ನಿಗೆ ಕಟ್ಟಿಕೊಂಡು ಯಶಶ್ವಿ ಕಾರ್ಯಾ ಚರಣೆ ಮಾಡಿ ಆರೋಪಿಗಳನ್ನು ಬಂಧನ ಮಾಡಿದ್ದಾರೆ ಕುಡಿತ ಮೋಜು ಮಸ್ತಿಗಾಗಿ ಇಬ್ಬರನ್ನು ಕೊಂದಿದ್ದ 6 ಜನರ ಗ್ಯಾಂಗ್ ನ್ನು ಪೊಲೀಸರು ಎಡೆ ಮೂರಿ ಕಟ್ಟಿದ್ದಾರೆ.ಪ್ಲಾನ್ ಮೂಲಕ ಮರ್ಡರ್ ಮಾಡ್ತಿದ್ದ ಹಂತಕರು ಇಂದಿರಾ ಬಾಯಿ ಪವಾರ್ (60) ಮಹಾದೇವಿ ನೀಲಣ್ಣವರ (50) ಹತ್ಯೆಯಾ ಗಿದ್ದ ಮಹಿಳೆಯರು ಬಂಧಿತರಲ್ಲಿ ಐವರು ಅದರಗುಂಚಿಯ ನಿವಾಸಿಗಳಾಗಿದ್ದು 5 ಜನರ ಗುಂಪನ್ನು ಬಂಧನ ಮಾಡಿ ದ್ದಾರೆ.
ಓರ್ವ ಈಶ್ವರ ನಗರ ನಿವಾಸಿಯಾಗಿದ್ದು ಸಣ್ಣ ಪುಟ್ಟ ಕೆಲ್ಸ ಮಾಡುತ್ತಿದ್ದ ಆರೋಪಿತರು ಸಣ್ಣ ಪುಟ್ಟ ಕೆಲ್ಸ ಮಾಡಿದ್ರೆ ಹಣ ಸಂಪಾದನೆ ಮಾಡೋಕಾಗಲ್ಲ ಎನ್ನುವ ಭಾವನೆಯಲ್ಲಿ ಹತ್ಯೆ ಮಾಡಿದ್ದು ನೀರು ಕೇಳುವ ನೆಪದಲ್ಲಿ ಮರ್ಡರ್ ಮಾಡಿದ್ದರು ಗ್ಯಾಂಗ್ ಟೀಮ್. ಮೊದಲ ಹತ್ಯೆ ಮಹಿಳೆ ಇರುವ ಮನೆ ಗುರುತಿಸಿ ಕೃತ್ಯ ಮಾಡುತ್ತಿದ್ದು ಎರಡನೇ ಯದ್ದು ಮಹಿಳೆ ದನ ಕಾಯುವ ವೇಳೆ ಕೊಲೆ ಮಾಡಿ ಹೆದ್ದಾರಿಯಲ್ಲಿ ತಂದು ಸುಟ್ಟಿರುತ್ತಾರೆ ಬಂಗಾರ ಮತ್ತು ದುಡ್ಡಿನ ಆಸೆಗೆ ಕೊಲೆ ಮಾಡುತ್ತಿದ್ದರಂತೆ ಕಿರಾತಕರು ಹತ್ಯೆಯ ಬಳಿಕ ಬಂಗಾರ ಖರ್ಚು ಮಾಡಿ ಈಗಾಗಲೇ ಮಜಾ ಮಾಡಿದ್ದಾರೆ ವಯಸ್ಸಾದ ವ್ಯಕ್ತಿಯಿಂದ ಬಾಡಿಗೆ ಕಾರ್ ಬಳಸಿ ಈ ರೀತಿ ಕೃತ್ಯವನ್ನು ಮಾಡಿದ್ದಾರೆ.
ಕೊಲೆಗೂ ಮೊದಲೇ ಕುಡಿದು ಪ್ಲಾನ್ ಮಾಡಿ ಸಂಚು ರೂಪಿಸುತ್ತಿದ್ದರು ಖತರ್ನಾಕ್ ಗುಂಪು ಎಲ್ಲಾರೂ ಒಂದೇ ಕಡೆಯಲ್ಲಿ ನಲ್ಲಿ ಕೆಲಸ ಮಾಡುತ್ತಿದ್ದವರು ಸತತ ಒಂದು ತಿಂಗಳ ಬಳಿಕ ಪ್ರಕರಣವನ್ನು ಭೇದಿಸಿದ್ದಾರೆ ಪೊಲೀಸರು ದೇವರಾಜ ಮೊಗಲೆ, ಈಶ್ವರ ನಗರ, ಕಾಳಪ್ಪ ರೋಗಣ್ಣ ವಾರ ಅದರಗುಂಚಿ ನಿವಾಸಿ,ಬಸವರಾಜ ವಾಳದ ಮೋಹಮ್ಮದ್ ರಫೀಕ್ ಬಡಿಗೇರ ಶಿವಾನಂದ ಕೆಂಚನ್ನವರ ಬೆಳಗಲಿ ನಿವಾಸಿ,ಗಂಗಪ್ಪ ಮರ್ತಾಂಗಿ, ರೊಟ್ಟಿಗವಾಡ ನಿವಾಸಿ ಎಲ್ಲರನ್ನೂ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ ಖಾಕಿ ಪಡೆ.ಡಿವೈಎಸ್ಪಿ ಸಂಕದ ನೇತ್ರತ್ವದಲ್ಲಿ ಹುಬ್ಬಳ್ಳಿ ಗ್ರಾಮೀಣ ಇನ್ಸ್ಪೆಕ್ಟರ್ ರಮೇಶ ಗೋಕಾಕ್,ನವನಗರ ಇನ್ಸ್ಪೆಕ್ಟರ್ ಬಾಳನಗೌಡ ಮಂಟೂರ,ಕಲಘಟಗಿ ಇನ್ಸ್ಪೆಕ್ಟರ್ ಶ್ರೀಶೈಲ ಕೌಜಲಗಿ,ವಿಶೇಷ ಅಪರಾಧ ದಳದ ಇನ್ಸ್ಪೆಕ್ಟರ್ ಪ್ರಮೋದ ಯಲಿಗಾರ,ಪೊಲೀಸ್ ಅಧಿಕಾರಿಗ ಳಾದ ಜಯಪಾಲ ಪಾಟೀಲ್,ಪಿ ಎಸ್ ಸಾತನ್ನವರ ಸೇರಿ ದಂತೆ ನವನಗರ ಕಲಘಟಗಿ ಹುಬ್ಬಳ್ಳಿ ಗ್ರಾಮೀಣ ಮತ್ತು ಸೆನ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಗಲು ರಾತ್ರಿ ಎನ್ನದೇ ಕಾರ್ಯಾಚರಣೆಯನ್ನು ಮಾಡಿ ಆರೋಪಿಗಳನ್ನು ಬಂಧನ ಮಾಡಿದ್ದಾರೆ.ಇದೇಲ್ಲಾ ಒಬ್ಬರಿಂದ ನಡೆದ ಕಾರ್ಯಾಚರಣೆಯಲ್ಲ ಟೀಮ್ ನಿಂದಾಗಿ ನಡೆದ ಜಂಟಿ ಕಾರ್ಯಾಚರಣೆಯಾಗಿದ್ದು ಇನ್ನೂ ಒಳ್ಳೇಯ ಕಾರ್ಯಾ ಚರಣೆ ಮಾಡಿದ ಪೊಲೀಸ್ ಟೀಮ್ ನವರಿಗೆ ಎಸ್ಪಿ ಅಭಿನಂದನೆಗಳನ್ನು ಸಲ್ಲಿಸಿ ಬೆನ್ನು ತಟ್ಟಿದ್ದಾರೆ.