ಬೆಂಗಳೂರು –
ಹೊಸ ಪಿಂಚಣಿ ವ್ಯವಸ್ಥೆ ಸರ್ಕಾರಿ ನೌಕರರಿಗೆ ಮರಣ ಶಾಸನವಾಗಿದೆ ಎಂಬ ಮಾತಿಗೆ ರಾಜ್ಯ ದಲ್ಲಿ ನಿವೃತ್ತಿಯ ನಂತರ ಹೊಸ ಪಿಂಚಣಿಯನ್ನು ಪಡೆಯುತ್ತಿರುವ ನೌಕರರೇ ಸಾಕ್ಷಿಯಾಗಿದ್ದಾರೆ. ಹೌದು 2006 ರಲ್ಲಿ ಜಾರಿಗೆ ಬಂದಿರುವ ಈ ಒಂದು ಯೋಜನೆಯಿಂದಾಗಿ ನಿವೃತ್ತಿಯ ನಂತರ ಸರ್ಕಾರಿ ನೌಕರರು ನರಕಯಾತನೆ ಬದುಕು ಆಗುತ್ತದೆ ಕೂಲಿ ಕಾರ್ಮಿಕರಿಗಿಂತ ಯಾವುದಕ್ಕೂ ಸಾಲದ ಪಿಂಚಣಿಯನ್ನು ಪಡೆಯುತ್ತಾರೆ ಎಂಬೊ ದಕ್ಕೆ ಈ ಮಹಿಳೆಯೇ ನಮ್ಮ ಮುಂದೆ ಜೀವಂತ ಉದಾಹರಣೆಯಾಗಿದ್ದಾರೆ.
ಹೆಸರು ಕೃಷ್ಣವೇಣಿ ಆರೋಗ್ಯ ಇಲಾಖೆಯಲ್ಲಿ 22 ವರ್ಷಕ್ಕಿಂತಲೂ ಹೆಚ್ಚು ಕಾಲ ಸೇವೆಯನ್ನು ಸಲ್ಲಿಸಿ ಸಧ್ಯ ನಿವೃತ್ತಿಯಾಗಿದ್ದು ಪ್ರತಿ ತಿಂಗಳು ಈಗ 2200 ಪಿಂಚಣಿಯನ್ನು ಪಡೆಯುತ್ತಿದ್ದಾರೆ.
ಸಧ್ಯ ಪ್ರತಿ ತಿಂಗಳು ಬರುತ್ತಿರುವ ಪಿಂಚಣಿ ಹಣ ದುಬಾರಿಯಾದ ದುನಿಯಾದ ಇಂದಿನ ದಿನದಲ್ಲಿ ಯಾವುದಕ್ಕೂ ಸಾಲೋದಿಲ್ಲ ಇಂತಹ ಪರಸ್ಥಿತಿ ಯಲ್ಲಿ ಹೊಸ ಪಿಂಚಣಿ ಯೋಜನೆಯನ್ನು ರಾಜ್ಯ ಸರ್ಕಾರಿ ನೌಕರರಿಗೆ ಒಳ್ಳೇಯದನ್ನು ಅನ್ನಬೇಕೊ ಅಥವಾ ಮರಣ ಶಾಸನ ಎನ್ನಬೇಕೊ ಹೀಗಿರು ವಾಗ ಸಧ್ಯ ಈ ಒಂದು ವಿಚಾರದಲ್ಲಿ ಎನ್ ಪಿಎಸ್ ನೌಕರರು ಕಳೆದ 15 ದಿನಗಳಿಂದ ಬೆಂಗಳೂರಿ ನಲ್ಲಿ ಮಾಡು ಇಲ್ಲವೇ ಮಡಿ ಹೋರಾಟವನ್ನು ಮಾಡುತ್ತಿದ್ದಾರೆ.
ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ನೌಕರರು ಬೀದಿಗಿಳಿದು ಹೋರಾಟವನ್ನು ಮಾಡು ತ್ತಿದ್ದಾರೆ.ಹಗಲು ರಾತ್ರಿ ಎನ್ನದೇ ಪ್ರೀಡಂ ಪಾರ್ಕ್ ನಲ್ಲಿಯೇ ಕುಳಿತುಕೊಂಡು ಪ್ರತಿಭಟನೆ ಮಾಡು ತ್ತಿದ್ದು ಈವರೆಗೆ ಎಲ್ಲಾ ಪಕ್ಷದವರು ಭೇಟಿ ಮಾಡಿ ಸಮಸ್ಯೆ ಆಲಿಸಿದ್ದಾರೆ ಹೊರತು ಯಾರೂ ಕೂಡಾ ನಂಬುವಂತಹ ಭರವಸೆಯನ್ನು ನೀಡಿಲ್ಲ ಹೀಗಾಗಿ ದಿನದಿಂದ ದಿನಕ್ಕೆ ಈ ಒಂದು ಹೋರಾಟದ ಕಿಚ್ಚು ತೀವ್ರಗೊಳ್ಳುತ್ತಿದ್ದು ಇತ್ತ ಮರಣ ಶಾಸನವಾಗಿ ರುವ ಹೊಸ ಪಿಂಚಣಿ ಯೋಜನೆಯ ಕುರಿತಾದ ನಿವೃತ್ತಿ ಹೊಂದಿರುವ ಈ ಮಹಿಳಾ ನೌಕರೊಬ್ಬರ ವಿಡಿಯೋ ವೈರಲ್ ಆಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..