ಚಂಡಿಗಢ –
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಒಟ್ಟು 25,000 ಸರ್ಕಾರಿ ಉದ್ಯೋಗ ನೀಡುವ ಪ್ರಸ್ತಾವನೆಯನ್ನು ಅಂಗೀಕ ರಿಸಲಾಗಿದೆ.ಪಂಜಾಬ್ ಪೊಲೀಸ್ ಇಲಾಖೆಯಲ್ಲಿ 10,000 ಹುದ್ದೆಗಳು ಮತ್ತಿತರ ಸರ್ಕಾರಿ ಇಲಾಖೆಗಳಲ್ಲಿನ 15,000 ಹುದ್ದೆಗಳು ಸೇರಿದಂತೆ ಒಟ್ಟು 25 ಸಾವಿರ ಸರ್ಕಾರಿ ಉದ್ಯೋಗಗಳನ್ನು ಒದಗಿಸುವ ಪ್ರಸ್ತಾವನೆಗೆ ಕ್ಯಾಬಿನೆಟ್ ಸಮ್ಮತಿಸಿದೆ,ಈ ಒಂದು ತೀರ್ಮಾನವನ್ನು ಸಚಿವ ಸಂಪುಟ ದ ಮೊದಲ ಸಭೆಯಲ್ಲಿ ಐತಿಹಾಸಿಕ ತೀರ್ಮಾನವನ್ನು ತಗೆದುಕೊಳ್ಳಲಾಗಿದೆ.

ಪಂಜಾಬಿನಲ್ಲಿ ಸರ್ಕಾರಿ ರಚನೆ ಯಾದ ನಂತರ ನಿರುದ್ಯೋ ಗ ಯುವಜನಾಂಗಕ್ಕೆ ಉದ್ಯೋಗ ಒದಗಿಸುವುದಾಗಿಆಮ್ ಆದ್ಮಿ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು ಹೀಗಾಗಿ ನೀಡಿದ ಭರವಸೆಯಂತೆ ಮೊದಲ ಸಚಿವ ಸಂಪುಟದ ಸಭೆಯಲ್ಲಿ ಭರ್ಜರಿ ಸರ್ಕಾರಿ ನೌಕರಿ ಯ ಭರವಸೆಯನ್ನು ಘೋಷಣೆ ಮಾಡಲಾಗಿದೆ.