ಧಾರವಾಡ –
ಧಾರವಾಡದ ವಿದ್ಯಾಗಿರಿ ಪೊಲೀಸರು ಕುಖ್ಯಾತ ಮನೆಕಳ್ಳನನ್ನು ಬಂಧನ ಮಾಡಿದ್ದಾರೆ. ಠಾಣೆಯ ವ್ಯಾಪ್ತಿಯಲ್ಲಿನ ಸ್ವತ್ತಿನ ಪ್ರಕರಣಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಎಡೆ ಮೂರಿ ಕಟ್ಟಿದ್ದಾರೆ.ಧಾರವಾಡದ ಬಾರಾಕುಟ್ರಿ ರಸ್ತೆಯಲ್ಲಿರುವ ರಾಧಿಕಾ ಸ್ಟೆಲ್ಲಾ ಅಪಾರ್ಟಮೆಂಟನ ಮನೆಯ ಕೀಲಿ ಮುರಿದು ಕಳ್ಳತನ ಮಾಡಿದ್ದ ಒಟ್ಟು 50 ಗ್ರಾಂ ತೂಕದ ಬಂಗಾರದ ಒಡವೆಗಳ ಒಟ್ಟು ಅಂದಾಜು 2,50,000/- ರೂಪಾಯಿಗಳ ಕಿಮ್ಮತ್ತಿನವುಗಳನ್ನು ಕಳ್ಳತನ ಮಾಡಿದ್ದನು.

ಪೊಲೀಸ್ ಆಯುಕ್ತರಾದ ಲಾಬುರಾಮ್ ಮತ್ತು ಕೆ.ರಾಮರಾಜನ ಐ.ಪಿ.ಎಸ್ ಉಪ ಪೊಲೀಸ್ ಆಯುಕ್ತರು ಕಾನೂನು ವ ಸುವ್ಯವಸ್ಥೆ ಹುಬ್ಬಳ್ಳಿ-ಧಾರವಾಡ, ಶ್ರೀ ಆರ್.ಬಿ. ಬಸರಗಿ ಕೆ.ಎಸ್.ಪಿ.ಎಸ್ ಉಪ ಪೊಲೀಸ್ ಆಯುಕ್ತರು ಆಪರಾಧ ನ ಸಂಚಾರ ಹುಬ್ಬಳ್ಳಿ-ಧಾರವಾಡ ರವರ ನಿರ್ದೇಶನದಲ್ಲಿ ಮಾನ್ಯ ಶ್ರೀಮತಿ ಜಿ. ಅನುಷಾ ಸಹಾಯ ಪೊಲೀಸ್ ಆಯುಕ್ತರು ಧಾರವಾಡ ರವರ ಮಾರ್ಗದರ್ಶನದಲ್ಲಿ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಎಮ್.ಕೆ. ಬಸಾಪೂರ ರವರು ಆರೋಪಿತರೆ ಪತ್ತೆ ಕುರಿತು ವಿಶೇಷ ತಂಡ ರಚಿಸಿದ್ದರು.

ಸಚಿನಕುಮಾರ ದಾಸರಡ್ಡಿ ಪಿಎಸ್ಐ, ಎಸ್.ಆರ್ ತಗೂರ ,ಪಿಎಸ್‌ಐ ಹಾಗೂ ಬಿ.ಎಮ್.ಆಂಗಡಿ ಎಎಸ್ ಐ, ಎ.ಬಿ. ನರೇಂದ್ರ, ಎಮ್.ಎಫ್. ನದಾಫ, ಐ ಪಿ ಬಾರ್ಜಿ, ಆರ್.ಕೆ, ಅತ್ತಾರ, ಎಮ್.ಸಿ, ಮಂಕಣಿ, ಬಿ.ಎಮ್.ಪಾತ, ಎಮ್ ಜಿ. ಪಾಟೀಲ, 2.ಎಸ್, ಸಾಂಗ್ಲೀಕರ, ಎ.ಎಮ್ ಹುಯಿಲಗೋಳ, ಹೆಚ್ ಕೆ.ಗೂಡುನಾಯ್ಕರ, ಬಸವರಾಜ ಸವಣೂರ, ಇವರೆಲ್ಲ ಕೂಡಿ ಆರೋಪಿಯ ಬಂಧನದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಅಜಿತ ತಂದೆ ಭೀಮಪ್ಪ ಚಲವಾದಿ ಆರೋಪಿಯನ್ನು ಬಂಧಿಸಿದ್ದಾರೆ.ಕೂಲಿ ಕೆಲಸ ಮಾಡುತ್ತಿದ್ದು ವಿಜಯಪೂರದ ಬೆಳ್ಳುಬ್ಬಿ ಗ್ರಾಮದ ನಿವಾಸಿಯಾಗಿದ್ದಾರೆ.ಬಂಧಿತನಿಂದ ಕಳ್ಳತನ ಮಾಡಿದ್ದ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಈ ಬಗ್ಗೆ ಮಾನ್ಯ ಪೊಲೀಸ್ ಆಯುಕ್ತರರು ಹುಬ್ಬಳ್ಳಿ ಧಾರವಾಡರವರು ಆರೋಪಿಯನ್ನು ಬಂಧನ ಮಾಡಿರುವ ವಿದ್ಯಾಗಿರಿ ಪೊಲೀಸರ ಈ ಕಾರ್ಯವನ್ನು ಪ್ರಶಂಶಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.