ಹುಬ್ಬಳ್ಳಿ…
ಮೂರು ಸಾವಿರ ಮಠದ ಆಸ್ತಿ ಕೆಎಲ್ ಇ ಸಂಸ್ಥೆಗೆ ಪರಬಾರೆ ಮಾಡಿದ್ದು ಕಾನೂನು ಬಾಹಿರವಾಗಿದ್ದು. ಇದನ್ನು ಯಾರಿಗೂ ಪರಭಾರೆ ಮಾಡಲು ಬರೊದಿಲ್ಲ ಹಾಗೇ ಕೊಡಲು ಬರೊದಿಲ್ಲ . ಇದನ್ನು ಸರ್ವೋಚ್ಚ ನ್ಯಾಯಾಲಯ ಸೂಚನೆ ನೀಡಿದೆ.ಎಂದು ಮಠದ ಕಾನೂನು ಹೋರಾಟಗಾರರ ಪರ ನ್ಯಾಯವಾದಿ ಎಸ್ ಎನ್ ಪಾಟೀಲ ಮಾತನಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗಂಗಾಧರ ಸ್ವಾಮೀಜಿ ಹಾಗೂ ರುದ್ರಮುನಿ ಸ್ವಾಮಿಗಳ ನಡುವೆ ಜಮೀನು ವಿವಾದ ನಡೆದಿತ್ತು.
ಐವರು ಸ್ವಾಮೀಜಿಗಳು ಆಸ್ತಿಯ ವಿಚಾರವಾಗಿ ಆರ್ಬಿಟೇಷನ್ ಮಾಡಿದ್ರು.ರುದ್ರಮನಿ ಸ್ವಾಮೀಜಿಯವರ ವಾದವನ್ನು ರದ್ದು ಮಾಡಿದರು.ಅದಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯ, ಹೈಕೋರ್ಟ್ ನಲ್ಲಿ ವಾದ ನಡೆದಿತ್ತು.ಮಠದ ಭಕ್ತರೆಲ್ಲರೂ ಸೇರಿ ಒಂದು ಆರ್ಬಿಟೇಷನ್ ಮಾಡಿಕೊಂಡಿದ್ದರು.ಅದನ್ನು ಮೀರಿ ಮಠದ ಇಬ್ಬರು ಸ್ವಾಮೀಜಿಗಳು ಸೇರಿ ಪ್ರತ್ಯೇಕ ಆರ್ಬಿಟೇಷನ್ ಮಾಡಿಕೊಂಡರು.ರುದ್ರಮುನಿ ಹಾಗೂ ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿ 2009 ರಲ್ಲಿ ರಾಜಿ ಮಾಡಿಕೊಂಡಿದ್ದರು.ಅದರಂತೆ ತಿಪಟೂರು ಮಠದ ಆಸ್ತಿ ರುದ್ರಮುನಿಯವರಿಗೆ.
ಮೂರುಸಾವಿರ ಮಠದ ಆಸ್ತಿ ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿಗಳಿಗೆ ಎಂದು ಒಪ್ಪಂದ ಆಗಿತ್ತು.ಆದರೆ, 2012 ರಲ್ಲಿ ಇಬ್ಬರು ಸೇರಿ ಆಸ್ತಿಯನ್ನು ಮಾರಬಾರದೆಂಬುದನ್ನು ಮುರಿಯುವ ಆರ್ಡರ್ ಮಾಡಿಕೊಂಡರು. ಆಸ್ತಿಯನ್ನು ಪರಭಾರೆ ಮಾಡಬೇಕೆಂಬ ಉದ್ದೇಶದಿಂದ ಹೀಗೆ ಮಾಡಿದ್ದಾರೆ.ಗಂಗಾಧರ ಸ್ವಾಮೀಜಿಗಳು ಮಾತ್ರವಲ್ಲ. ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿಗಳು ಮಠದ ಆಸ್ತಿಯನ್ನು ದಾನ ಮಾಡಿದ್ದಾರೆ.2013 ಜುಲೈ 12 ರಂದು ಗುರುಸಿದ್ದರಾಜಯೋಗಿಂದ್ರ ಸ್ವಾಮಿಜೀಗಳು ಮಠದ ಆಸ್ತಿಯನ್ನು ದಾನ ಮಾಡಿದ್ದಾರೆ.
ಮಠದ ಆಸ್ತಿಯನ್ನು ಮಾರಾಟ ಕೂಡ ಮಾಡಲಾಗಿದೆ. ಇಬ್ಬರಿಗೆ ಮಠದ ಆಸ್ತಿಯನ್ನು ಮಾರಾಟ ಮಾಡಲಾಗಿದೆ.3 ಎಕರೆ 14 ಗುಂಟೆ ಸುರೇಶ ವೀರಯ್ಯ ಗದಗಿಮಠ ಎಂಬುವವರಿಗೆ 2012 ರ ಅಗಸ್ಟ್ ನಲ್ಲಿ 15 ಲಕ್ಷ ರೂಪಾಯಿ ಗೆ ಮಾರಾಟ. ಮಲ್ಲಿಕಾರ್ಜುನ ಎನ್ ಎಚ್ ಎಂಬುವವರಿಗೆ 8 ಎಕರೆ 21 ಗುಂಟೆ ಜಮೀನಿನಲ್ಲಿ 2 ಎಕರೆ ಜಮೀನು 10 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರಕಾನೂನು ಹೋರಾಟ ನಡೆಯುತ್ತಿರುವಾಗ ಹೀಗೆಲ್ಲ ಮಾಡಿದ್ದು ಸರಿಯಲ್ಲ ಎಂದು ನ್ಯಾಯವಾದಿಗಳು ಹೇಳಿದರು.