SSLC ಯಲ್ಲಿ ಇಂಗ್ಲಿಷ್ ಗೆ 35 ಗಣಿತಕ್ಕೆ 36 ಸಧ್ಯ IAS ಅಧಿಕಾರಿ ಮನಸ್ಸು ಮಾಡಿದರೆ ಸಾಧನೆ ಮಾಡಬಹುದು ಎಂಬುದಕ್ಕೆ ಸಾಕ್ಷಿ

Suddi Sante Desk

ಅಹಮದಾಬಾದ್ –

ತಮ್ಮ ಪರೀಕ್ಷಾ ಫಲಿತಾಂಶಗಳಿಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು IAS ಅಧಿಕಾರಿ ಯೊಬ್ಬರು ತಮ್ಮ 10 ನೇ ತರಗತಿಯ ಅಂಕಪಟ್ಟಿಯನ್ನು ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ.ಹೌದು ಗುಜರಾತ್‌ನ ಭರೂಚ್‌ನ ಜಿಲ್ಲಾಧಿಕಾರಿ ತುಷಾರ್ ಡಿ ಸುಮೇರಾ ಅವರು ತಮ್ಮ 10ನೇ ತರಗತಿಯ ಅಂಕಪಟ್ಟಿಯನ್ನು ಹಂಚಿಕೊಂ ಡಿದ್ದಾರೆ ಇಂಗ್ಲಿಷ್‌ನಲ್ಲಿ 35 ಮತ್ತು ಗಣಿತದಲ್ಲಿ 36 ಅಂಕಗ ಳನ್ನು ಪಡೆದಿದ್ದರು ಎಂದು ವರದಿಯಾಗಿದೆ.

ಛತ್ತೀಸ್‌ಗಢ ಕೇಡರ್‌ನ 2009 ರ ಬ್ಯಾಚ್ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಅಂಕಪಟ್ಟಿಯೊಂ ದಿಗೆ ತುಷಾರ್‌ ಅವರ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂ ಡಿದ್ದು ತಮ್ಮ ಅಂಕಪಟ್ಟಿ ಹಂಚಿಕೊಂಡ ಭರೂಚ್ ಕಲೆಕ್ಟರ್ ತುಷಾರ್ ಸುಮೇರಾ ಅವರು 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಕೇವಲ ಪಾಸ್‌ ಮಾರ್ಕ್‌ ಗಳಿಸಿ ಉತ್ತೀರ್ಣರಾಗಿದ್ದಾರೆ ಎಂದು ಹೇಳಿದ್ದಾರೆ.ಅವರುಇಂಗ್ಲಿಷ್ ನಲ್ಲಿ 35 ಮತ್ತು ಗಣಿತದಲ್ಲಿ 36 ಅಂಕ ಮಾತ್ರ ಪಡೆದಿದ್ದಾರೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

2012 ರಲ್ಲಿ ಐಎಎಸ್ ಅಧಿಕಾರಿಯಾದ ತುಷಾರ್ ಸುಮೇರಾ ಅವರು ಆರ್ಟ್ಸ್ ಸ್ಟ್ರೀಮ್‌ನಲ್ಲಿ ಪದವಿ ಪೂರ್ಣ ಗೊಳಿಸಿದ್ದಾರೆ.ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾ ಗುವ ಮೊದಲು ಶಾಲಾ ಶಿಕ್ಷಕರಾಗಿಯೂ ಅವರು ಕೆಲಸ ಮಾಡಿದ್ದಾರೆ.

ಕಡಿಮೆ ಅಂಕ ಗಳಿಸಿದ ಮಕ್ಕಳು ಖಿನ್ನರಾಗಬೇಕಿಲ್ಲ ಅವಕಾ ಶಗಳು ಇನ್ನೂ ಮುಗಿದಿಲ್ಲ ಎಂಬ ಸಂದೇಶ ನೀಡಲು ಐಎಎಸ್‌ ಅಧಿಕಾರಿ ತಮ್ಮ ಅಂಕಪಟ್ಟಿಯನ್ನು ಹಂಚಿಕೊಂ ಡಿದ್ದಾರೆ ಎಂದು ಹೇಳಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.