ಹುಬ್ಬಳ್ಳಿ –
ನಾಲ್ಕು ದಿನಗಳಿಂದ ಪದೇ ಪದೇ ಬಿಡಿಯಾಗು ತ್ತಿದೆ 3539 ಬೇಸತ್ತಿದ್ದಾರೆ ಚಾಲಕರು ಡೂಟಿ ಮಾಡಲು ಬಂದರೇ ಸಿಕ್ಕ ಸಿಕ್ಕಲ್ಲಿ ಕೈಕೊಡುತ್ತಿವೆ ಚಿಗರಿ ಬಸ್ ಗಳು…..ಡ್ರೈವರ್ ಕಾರ್ಯವೈಖರಿ ಪರೀಕ್ಷೆ ಮಾಡುವ ನಿಮಗೆ ಇದ್ಯಾವುದು ಕಾಣಿಸುತ್ತಿಲ್ವೆ ಡಿಸಿಯವರೇ…..
ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರ ಮಾಡುತ್ತಿ ರುವ ಚಿಗರಿ ಬಸ್ ಗಳ ಕಥೆ ಮುಗಿಯಲಾರದು. ಕಳೆದ ಐದಾರು ವರ್ಷಗಳಿಂದ ಸಂಚಾರ ಮಾಡುತ್ತಿರುವ ಬಸ್ ಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ,ವ್ಯವಸ್ಥೆಯಂತೂ ಇಲ್ಲವೇ ಇಲ್ಲ ಹೀಗಿರುವಾಗ ರಸ್ತೆಗಳಲ್ಲಿ ಸಿಕ್ಕ ಸಿಕ್ಕಲ್ಲಿ ಬಸ್ ಗಳು ಕೈಕೊಡುತ್ತಿರುವದು ಒಂದು ವಿಚಾರವಾದರೆ ಇನ್ನೂ ಬೇಗ ಎದ್ದು ಜನರಲ್ ಡೂಟಿ ಮಾಡಿದರಾಯಿತು ಎಂದುಕೊಂಡು ಡೂಟಿ ಮಾಡುವ ಜನರಲ್ ಡ್ರೈವರ್ ಗಳಿಗೆ ಬಸ್ ಗಳು ಮೇಲಿಂದ ಮೇಲೆ ಬಿಡಿ ಯಾಗುತ್ತಿರುವುದು ದೊಡ್ಡ ತಲೆನೋವಿನ ಕೆಲಸವಾಗಿದೆ.
ಬೆಳ್ಳಂ ಬೆಳಿಗ್ಗೆ ಬೇಗ ಎದ್ದು ದೂರದ ಊರಿನಿಂದ ಡಿಪೋ ಗೆ ಬಂದು ಒಂದು ಎರಡು ಟ್ರೀಪ್ ಮಾಡುವಾಗ ಬಸ್ ಗಳು ಪದೇ ಪದೇ ಕೈಕೊಡು ತ್ತಿರುವುದು ಸಧ್ಯ ಹುಬ್ಬಳ್ಳಿ ಧಾರವಾಡದಲ್ಲಿ ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತಿದೆ.ಇನ್ನೂ ಉದಾಹರಣೆಯಾಗಿ ಹೇಳಬೇಕೆಂದರೆ 3539 ನಂಬರ್ ಚಿಗರಿ ಬಸ್ ಕಳೆದ ಮೂರು ನಾಲ್ಕು ದಿನಗಳಿಂದ ನಿರಂತರವಾಗಿ ಬಿಡಿ ಯಾಗುತ್ತಿದೆ.
ಅದು ಹುಬ್ಬಳ್ಳಿಯಲ್ಲಿಯೇ ಬಿಡಿಯಾಗುತ್ತಿದ್ದು ಜನರಲ್ ಡೂಟಿಯ ಈ ಒಂದು ಬಸ್ ಪದೇ ಪದೇ ಕೈಕೊಡುತ್ತಿದ್ದು ಮುಖಕ್ಕೆ ಮಾಸ್ಕ್ ಹಾಕಿ ಕೊಂಡು ಗೊತ್ತಿಲ್ಲದಂತೆ ಬಸ್ ಗಳಲ್ಲಿ ಪ್ರಯಾಣ ಮಾಡುತ್ತಾ ಡ್ರೈವರ್ ಗಳ ಕಾರ್ವವೈಖರಿಯನ್ನು ಪರೀಕ್ಷೆ ಮಾಡುವ ಡಿಸಿಯವರೇ ನಿಮಗೆ ಬಸ್ ಗಳು ಬಿಡಿಯಾಗುತ್ತಿರುವುದು ಬಸ್ ಗಳ ಸಮಸ್ಯೆ ಇವ್ಯಾವುಗಳು ನಿಮ್ಮ ಗಮನಕ್ಕೆ ಬರುತ್ತಿಲ್ಲವೇ
ಗಮನಕ್ಕೆ ಬಂದರು ಕಾಣುತ್ತಿಲ್ಲವೇ ಇಷ್ಟೊಂದು ನಿರ್ಲಕ್ಷ್ಯ ಯಾಕೆ ದೂರದ ಬೆಂಗಳೂರಿನಿಂದ ಬಂದಿರುವು ನಿಮ್ಮ ಮೇಲೆ ಮೇಲಾಧಿಕಾರಿಗಳು ಬೆಟ್ಟದಷ್ಟು ನಿರೀಕ್ಷೆಯನ್ನ ಇಟ್ಟುಕೊಂಡಿದ್ದಾರೆ ಅದನ್ನು ಮಾಡೊದು ಬಿಟ್ಟು ಇಲಾಖೆಗೆ ದೊಡ್ಡ ಶಕ್ತಿಯಾಗಿರುವ ಡ್ರೈವರ್ ಗಳ ಮೇಲೆ ನಿಮ್ಮ ಗದಾಪ್ರಹಾರ ಸರಿನಾ ಮಾಡಲು ಸಾಕಷ್ಟು ಕೆಲಸಗಳಿಗೆ ಅವುಗಳನ್ನು ಮಾಡಿ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..