ಪುತ್ತೂರು –
38ವರ್ಷಗಳ ಹಿಂದಿನ ಹಳೆಯ ಸರ್ಕಾರಿ ಶಾಲೆ ಮುಚ್ಚುವ ಸ್ಥಿತಿಗೆ ತಲುಪಿದೆ.ಪುತ್ತೂರು ಬ್ಲಾಕ್ ಶಿಕ್ಷಣ ಕಛೇರಿ ವ್ಯಾಪ್ತಿಯ 38 ವರ್ಷಗಳ ಹಿಂದೆ ಆರಂಭವಾದ ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಕೊರಮೇರುವಿನಲ್ಲಿ ರುವ ಸರ್ಕಾರಿ ಪ್ರಾಥಮಿಕ ಶಾಲೆಯೊಂದು ಈ ಶೈಕ್ಷಣಿಕ ವರ್ಷದಲ್ಲಿ ಶೂನ್ಯ ದಾಖಲಾತಿಯಿಂದಾಗಿ ತನ್ನ ಕಾರ್ಯಾ ಚರಣೆಯನ್ನು ಸ್ಥಗಿತಗೊಳಿಸಿದೆ.
ಪುತ್ತೂರು ಬಿಇಒ ವ್ಯಾಪ್ತಿಯಲ್ಲಿ ಈ ವರ್ಷ ಮುಚ್ಚಿರುವ ಮೊದಲ ಶಾಲೆ ಇದಾಗಿದೆ.ಪುತ್ತೂರು ಬ್ಲಾಕ್ ಶಿಕ್ಷಣಾಧಿಕಾರಿ ಲೋಕೇಶ್ ಸಿ ಈ ಬಗ್ಗೆ ಮಾಹಿತಿ ನೀಡಿದ್ದು ಈ ಶಾಲೆಯಲ್ಲಿ 1 ರಿಂದ 5 ನೇ ತರಗತಿವರೆಗೂ ಬೋಧನೆ ಮಾಡಲಾಗು ತ್ತಿತ್ತು.ಗಲ್ಲಿಗೊಂದರಂತೆ ತಲೆ ಎತ್ತುತ್ತಿರುವ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳತ್ತ ಪೋಷಕರು ಮುಖ ಮಾಡುತ್ತಿ ದ್ದಾರೆ.ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಕ್ಕೆ ಕಳುಹಿಸಲು ಇಷ್ಟಪಡದ ಕಾರಣ, ಶಾಲೆಯು ಕಳೆದ ಎಂಟು ವರ್ಷಗ ಳಿಂದ ದಾಖಲಾತಿಗಳಲ್ಲಿ ಕುಸಿತ ಕಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.ಅದರೆ ಇದುವರೆಗೂ ಶಾಲೆ ಮುಚ್ಚುವಂತೆ ಯಾವುದೇ ಮನವಿ ಪತ್ರ ನಮಗೆ ಬಂದಿಲ್ಲ ಎಂದು ದಕ್ಷಿಣ ಕನ್ನಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಸುಧಾಕರ್ ತಿಳಿಸಿದ್ದಾರೆ.