ಬೆಳಗಾವಿ –
ಬೆಳಗಾವಿ ಲೊಕಸಭಾ ಉಪಚುನಾವಣೆಯ ಹಿನ್ನೆಲೆ ಚೆಕ್ ಪೋಸ್ಟ್ ನಲ್ಲಿ ಭಾರಿ ಮೊತ್ತದ ನಗದು ಹಣವ ನ್ನು ವಶ ಪಡಿಸಿಕೊಳ್ಳಲಾಗಿದೆ.ಘಟಪ್ರಭಾ ಜೆಜಿಕೊ ಆಸ್ಪತ್ರೆ ಹತ್ತಿರ ಇರುವ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ವೇಳೆಯಲ್ಲಿ 50 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.

ವಾಹನ ಸಂಖ್ಯೆ MH10 DL9977 ಪೋರ್ಡ್ ಕಾರಿ ನಲ್ಲಿ ಈ ಒಂದು ಹಣ ಪತ್ತೆಯಾಗಿದೆ.ಘಟಪ್ರಭಾ ಪೊಲೀಸರ ನೇತೃತ್ವದಲ್ಲಿ ತಪಾಸಣೆ ವೇಳೆಯಲ್ಲಿ ಈ ಒಂದು ಹಣ ಪತ್ತೆಯಾಗಿದೆ.
ಸಾಂಗ್ಲಿ ಯಿಂದ ಮುನವಳ್ಳಿಗೆ ಹಣವನ್ನು ಸಾಗಿಸಲಾ ಗುತ್ತಿದ್ದು.ಜಮೀನು ಖರೀದಿಗೆ ಈ ಒಂದು ಹಣವನ್ನು ಒಯ್ಯಲಾಗುತ್ತಿದ್ದರು ಎನ್ನಲಾಗಿದೆ.

ಹಣದೊಂದಿಗೆ ಚೆಕ್ ಪೋಸ್ಟ್ ನಲ್ಲಿ ದಾಖಲೆಗಳನ್ನು ಪರಿಸಿಲಿಸುತ್ತಿದ್ದಾರೆ ಚುನಾವಣಾಧಿಕಾರಿಗಳು.