ಧಾರವಾಡ –
ರಕ್ತದಾನ, ಜೀವದಾನ, ಜನಜಾಗೃತಿ, ವಸತಿ, ಔದ್ಯೋಗಿಕ, ಶಿಕ್ಷಣ ಇತ್ಯಾದಿಗಳ ಭಂಡಾರವೆ ಈ ಪೌರ ರಕ್ಷಕ ಹಾಗೂ ಗೃಹ ರಕ್ಷಣಾದಳಗಳು
58 ನೇ ಪೌರ ರಕ್ಷಣಾದಳ ಹಾಗೂ ಗೃಹ ರಕ್ಷಣಾದಳದ ದಿನಾಚರಣೆ ಹಾಗೂ ರೈಸಿಂಗ್ ಡೇ ಅಂಗವಾಗಿ ಕೊರೋನಾ ಜನ ಜಾಥಾ ಹಾಗೂ ರಕ್ತದಾನ ಶಿಬಿರ ಧಾರವಾಡದಲ್ಲಿ ನಡೆಯಿತು.
58 ನೇ ಸಿವಿಲ್ ಡಿಫೇನ್ಸ್ ಹಾಗೂ ಹೋಮ್‍ಗಾರ್ಡ ವತಿಯಿಂದ 58ನೇಯ ರೈಸಿಂಗ್ ಡೇ ಅಂಗವಾಗಿ ಕೊರೋನಾ ಜನ ಜಾಗೃತಾ ಜಾಥಾ, ರಕ್ತದಾನ ಶಿಬಿರ ಹಾಗೂ ಕೊರೋನಾ ವಾರಿಯರ್ಸ್‍ಗೆ ಸನ್ಮಾನವನ್ನು ಸಿವಿಲ್ ಡಿಫೇನ್ಸ್ ಹಾಗೂ ಹೋಮ್‍ಗಾರ್ಡ ಡಿಪಾರ್ಟಮೆಂಟ, ಧಾರವಾಡ ಜಿಲ್ಲಾ ಘಟಕದ ವತಿಯಿಂದ ನೆರವೆರಿಸಲಾಯಿತು.
ಜಿಲ್ಲಾಧಿಕಾರಿ ನಿತೇಶ ಕೆ ಪಾಟೀಲ ಹಾಗೂ ಕ್ರೈಂ.ಡಿಸಿಪಿ ಆರ್.ಬಿ.ಬಸರಗಿ ಅವರು ರಕ್ತದಾನ ಶಿಬಿರ ಮತ್ತು ಕೋವಿಡ್ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.
ಮಾನ್ಯ ಜಿಲ್ಲಾಧಿಕಾರಿಗಳು 58ನೇ ರೈಸಿಂಗ್ ಡೇ ಅನುಗುಣವಾಗಿ ಸಿವಿಲ್ ಡಿಫೇನ್ಸ್ ಚೀಫ್ ವಾರ್ಡನ್‍ರಾದ ಡಾ ಸತೀಶ್ ಇರಕಲ್ ಹಾಗೂ ಹೋಮ್‍ಗಾರ್ಡ ಕಮಾಂಡೆಂಟ ಆದ ಸತೀಶ್ ಎನ್ ಪಾಟೀಲ ಮತ್ತು ಎಲ್ಲ ಪೌರ ರಕ್ಷಕದಳ ಹಾಗೂ ಗೃಹ ರಕ್ಷಣಾದಳ, ಸಿಬ್ಬಂದಿ ವರ್ಗದವರಿಗೆ ಅಭಿನಂದನೆಗಳನ್ನು ಹೇಳಿದರು.
ಇಂತಹದೊಂದು ರಕ್ತದಾನ ಶಿಬಿರವನ್ನು ನೆರೆವೆರಿಸಿದ್ದಕ್ಕೆ ಶ್ಲಾಘಿಸಿದರು.ಅಲ್ಲದೇ
ಕೊರೋನಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಹುಬ್ಬಳ್ಳಿ-ಧಾರವಾಡದ ಜನ ಸಾಮಾನ್ಯರು ಕೈಜೋಡಿಸಿ ಜಿಲ್ಲಾ ಆಡಳಿತ ಮತ್ತು ಆರೋಗ್ಯ ಇಲಾಖೆ ಸಹಾಯ ನೀಡಬೇಕೆಂದು ಕೋರಿದರು.
ಪ್ರತಿ ದಿನಕ್ಕೆ 3 ಸಾವಿರಕ್ಕಿಂತ ಹೆಚ್ಚು ಸ್ವ್ಯಾಬ್ ಟೆಸ್ಟ್ ಮಾಡಲಾಗುತ್ತದೆ. ರಕ್ತದ ಕೊರತೆ ಇರುವುದರಿಂದ ಜನರಿಗೆ ರಕ್ತದಾನ ಮಾಡಲು ಮುಂದಾಗಬೇಕೆಂದು ಕೇಳಿಕೊಂಡರು.ಡಿಸಿಪಿ ಕ್ರೈಂ ಆರ್.ಬಿ.ಬಸರಗಿ ಅವರು ಜನರು ಮನೆಯಿಂದ ಹೊರಗೆ ಹೊಗುವಾಗ ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಿಕೊಂಡು ಶಿಸ್ತು ಹಾಗು ಸಂಯಮದಿಂದ 2ನೇ ಹಂತದ ಕೊರೋನಾವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮತ್ತು ಪೋಲಿಸ್ ಕಮಿಷನರೇಟ್ ವತಿಯಿಂದ ತುರ್ತು ಸಹಾಯವಾಣಿ 112 ಇದರ ಬಗ್ಗೆ ಮಾಹಿತಿ ನೀಡಿ ಜನರಿಗೆ ಇದರ ಸದುಪಯೋಗ ಪಡೆಯಲು ಸಲಹೆ ನೀಡಿದರು.ನಗರದ ಪ್ರಮುಖ ಬೀದಿಗಳಲ್ಲಿ ಜನ ಜಾಗೃತಿ ಜಾತಾ ಸಂಚರಿಸುತ್ತಾ ಕೊರೋನಾ ವೈರಾಣು ವೇಷಧಾರಿಯು ಮಾಸ್ಕ್ ಧರಿಸದ ವ್ಯಕ್ತಿಗಳನ್ನು ಕರೆತಂದು ಸ್ವ್ಯಾಬ್ ಟೆಸ್ಟಗೆ ಒಳಪಡಿಸುವುದು
ಅದೇ ಸಮಯದಲ್ಲಿ ಶ್ರೀಯಾ ಕಾಲೇಜ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳು ಏಂಜಲ್ ವೇಷಧರಿಸಿ ಪೌರ ರಕ್ಷಣಾದಳ, ಗೃಹ ರಕ್ಷಕ ದಳಗಳೊಂದಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕನ್ನು ಉಚಿತವಾಗಿ ಜನರಿಗೆ ವಿತರಿಸಿದರು.
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ ಯಶವಂತ ಮದೀನಕರ, ಟ್ರಾಫಿಕ್ ಪೋಲಿಸ್ ಇನ್ಸ್ಪೆಕ್ಟರ್ ಎಮ್.ಎಸ್.ನಾಯ್ಕರ್ , ಸಿವಿಲ್ ಡಿಫೇನ್ಸ್ ಚೀಫ್ ವಾರ್ಡನ್‍ರಾದ ಡಾ ಸತೀಶ್ ಇರಕಲ್ ಹೋಮ್‍ಗಾರ್ಡ ಕಮಾಂಡರ್ ಆದ ಸತೀಶ್ ಎನ್ ಪಾಟೀಲ ಜನರಲ್ಲಿ ಜಾಗೃತಿ ಮೂಡಿಸಿದರು.
ಇದೇ ಸಂದರ್ಭದಲ್ಲಿ ಕೋವಿಡ್ ವಾರಿಯರ ಆಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಧಾರವಾಡ ಉಪನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪ್ರಮೋದ.ಸಿ.ಯಲಿಗಾರ, ಗವಿಸಿದ್ಧನಗೌಡ ಪಾಟೀಲ,ರುದ್ರಪ್ಪ ಕೋಟಗಿ, ದಾವಲಸಾ ನಾಗರಾಳ,ಶ್ರೀಮತಿ. ಪ್ರೇಮಕುಮಾರಿ ಇವರೆಲ್ಲರಿಗೂ ಸನ್ಮಾನ ಮಾಡಲಾಯಿತು.
ಈ ಕಾರ್ಯಕ್ರಮಕ್ಕೆ ಸಹಭಾಗಿಯಾಗಿ ಡಾ ಎಮ್.ವಿ.ಮೀರಾ ನಾಯಕ್ , ಮಂಜುನಾಥ ಡೊಳ್ಳಿನ , ಶ್ರೀಮತಿ. ತನುಜಾ ,ಡಾ ಎಮ್.ಎ.ಮುಮ್ಮಿಗಟ್ಟಿ , ಡಾ ಉಮೇಶ ಹಳ್ಳಿಕೇರಿ, ಕಿರಣ ಹಿರೇಮಠ, ಶ್ರೀಮತಿ. ಒಟ್ಟಿಲೆ ಅನಬನ್ ಕುಮಾರ, ಆನಂದ ನಾಯಕ,ಶಹರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀಧರ್ ಸತಾರೆ,
ಶ್ರೀಯಾ ಕಾಲೇಜಿನ ಉಪ ಪ್ರಾಚಾರ್ಯರಾದ ನಾಗರಾಜ ಕಿಲ್ಲೆಲ್ಲಿ, ಗೃಹ ರಕ್ಷಕದಳದ ಅಸಿಸ್ಟಂಟ್ ಇನ್ಸ್ಪೆಕ್ಟರ್ ರ್ ಬಾದಾಮಿ, ಅಧಿಕಾರಿಗಳಾದ ಪವಾಡ ಶೆಟ್ಟರ್, ರೋಟರಿ ಸಂಸ್ಥೆಯ ಶ್ರೀಮತಿ. ಗೌರಿ ತಾವರಗೆರಿ, ಕರಣ್ ದೊಡವಾಡ, ಶಿವಾಜಿ ಅಸ್ಲಂ, ಸಿವಿಲ್ ಡಿಫೆನ್ಸ್ ನ ಸದಸ್ಯರಾದ ಗದಗಯ್ಯ ಚಿಕ್ಕಮಠ ಹಾಗೂ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.