ಧಾರವಾಡ –
ಜಮೀನಿಗೆ ಬೆಂಕಿ ಹಚ್ಚಿದ ಪರಿಣಾಮವಾಗಿ 640 ಕ್ಕೂ ಹೆಚ್ಚು ಮಾವಿನ ಗಿಡಗಳು ಬೆಂಕಿಗೆ ಆಹುತಿಯಾದ ಘಟನೆ ಧಾರವಾಡದ ವೆಂಕಟಾಪೂರ ಗ್ರಾಮದಲ್ಲಿ ನಡೆದಿದೆ.

ಧಾರವಾಡ ತಾಲ್ಲೂಕಿನ ವೆಂಕಟಾಪೂರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಜಮೀನಿನಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಹತ್ತಿಕೊಂಡ ಬೆಂಕಿಯಿಂದ ಒಣಗಿದ ಕಸಕ್ಕೆ ಬೆಂಕಿ ಹತ್ತಿಕೊಂಡಿದೆ

ಹಟೇಲಸಾಬ ಹಸನಸಾಬ ಮಮ್ಮಲೆದಿ ಎಂಬುವರ ಜಮೀನಿನಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಇವರ 15 ಎಕರೆ ಜಮೀನಿನಲ್ಲಿರುವ ಕಸಕ್ಕೆ ಹತ್ತಿಕೊಂಡು ನಂತರ ಜಮೀನಿಗೆ ಆವರಿಸಿಕೊಂಡಿದೆ

ಬೆಂಕಿಯ ಕೆನ್ನಾಲಿಗೆ ಜಮೀನಿಗೆ ಹತ್ತಿಕೊಂಡಿದೆ ಜಮೀನಿನಲ್ಲಿ ಬೆಳೆದ 640 ಮಾವಿನ ಗಿಡಗಳು ಬೆಂಕಿಗೆ ಆಹುತಿಯಾಗಿವೆ.

ಇನ್ನೂ ವಿಷಯ ತಿಳಿದ ಧಾರವಾಡದ ತೋಟಗಾರಿಕೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮಾಹಿತಿ ತೆಗೆದುಕೊಂಡರು. ಇನ್ನೂ ಬೆಂಕಿಗೆ ಪ್ರಮುಖ ಕಾರಣ ಏನು ಶಾರ್ಟ್ ಸರ್ಕ್ಯೂಟ್ ಅಥವಾ ಯಾರಾದರೂ ಬೆಂಕಿ ಹಚ್ಚಿದ್ದಾರೆ ಎಂಬ ಕುರಿತು ಪೊಲೀಸರು ತನಿಖೆ ಮಾಡತಾ ಇದ್ದಾರೆ.