ಕೇಂದ್ರ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ 64,180 ಕೋಟಿ ರೂ……

Suddi Sante Desk

ನವದೆಹಲಿ –

ಮಹಾಮಾರಿ ಕರೊನಾ ವೈರಸ್ ಆರೋಗ್ಯ ಮಹತ್ವವನ್ನು ಇಡೀ ಜಗತ್ತಿಗೆ ಸಾರಿದ್ದು, ಈ ಹಿನ್ನೆಲೆಯಲ್ಲಿ ಪ್ರಸ್ತುತ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಗಮನಹರಿಸಲಾಗಿದ್ದು, ಮುಂದಿನ ಆರು ವರ್ಷಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ 64,180 ಕೋಟಿ ರೂ. ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಆರೋಗ್ಯ ಕ್ಷೇತ್ರಕ್ಕೆ ಶೇಕಡಾ 137ರಷ್ಟು ಹೆಚ್ಚು ಅನುದಾನ ನೀಡಲಾಗುವುದು. ಹೀಗಾಗಿ ಮುಂದಿನ ಆರು ವರ್ಷಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ 64,180 ಕೋಟಿ ವ್ಯಯಿಸಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಹೊಸ ಹೆಲ್ತ್ ಇನ್ಫ್ರಾ ಯೋಜನೆ ಘೋಷಿಸಿದ ಹಣಕಾಸು ಸಚಿವೆ, ಯೋಜನೆಗೆ 61 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿದರು.

ಸಾರ್ವಜನಿಕ ಆರೋಗ್ಯ ಲ್ಯಾಬ್ಗಳ ನಿರ್ಮಾಣ ಘೋಷಣೆ ಮಾಡಿದ ವಿತ್ತ ಸಚಿವೆ, 11 ರಾಜ್ಯಗಳ 3,382 ಕೇಂದ್ರಗಳಲ್ಲಿ ಲ್ಯಾಬ್ ಗಳ ನಿರ್ಮಾಣ, 20 ಮಹಾನಗರಗಳಲ್ಲಿ

ರೋಗ ನಿಯಂತ್ರಣ ಕೇಂದ್ರ ಸ್ಥಾಪನೆ, 32 ವಿಮಾನ ನಿಲ್ದಾಣಗಳಲ್ಲಿ, 11 ಸೀ ಸಿ ಪೋರ್ಟ್ ಗಳಲ್ಲಿ ಆರೋಗ್ಯ ಕೇಂದ್ರ ಮತ್ತು 50 ತುರ್ತು ಆಪರೇಷನ್ ಕೇಂದ್ರ ಹಾಗೂ 2 ಮೊಬೈಲ್ ಆಸ್ಪತ್ರೆ ಸ್ಥಾಪನೆ ಮಾಡುವುದಾಗಿ ಘೋಷಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.