ಶಿಕಾರಿಪುರ –
ರಾಜ್ಯದ ಸರ್ಕಾರಿ ನೌಕರರಿಗೆ ಸಧ್ಯ 7ನೇ ವೇತನ ಆಯೋಗ ನೀಡುವ ಕುರಿತಂತೆ ಈಗಾಗಲೇ ಸಮಿತಿಯನ್ನು ರಚನೆ ಮಾಡಲಾಗಿದ್ದು ಶೀಘ್ರ ದಲ್ಲೇ ಈ ಒಂದು ವರದಿ ಜಾರಿಯಾಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಹೇಳಿದರು.
ಶಿಕಾರಿಪುರದಲ್ಲಿ ಮಾತನಾಡಿದ 7ನೇ ವೇತನ ಆಯೋಗ ಜಾರಿಯಾದ ನಂತರ ಶೀಘ್ರದಲ್ಲೇ ಎನ್‌ಪಿಎಸ್ ಕುರಿತಂತೆ ಹೋರಾಟ ಆರಂಭ ಮಾಡಲಾಗುತ್ತದೆ ಹೀಗಾಗಿ ನೌಕರರು ಆತಂಕ ಪಡುವ ಅಗತ್ಯ ಇಲ್ಲ ಎಂದರು.ಇನ್ನೂ 7ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ ಕೆಲವೇ ತಿಂಗಳಲ್ಲಿ 7ನೇ ವೇತನ ಆಯೋಗ ಜಾರಿಯಾಗಲಿದೆ.
ನಂತರ ಹಳೇ ಪಿಂಚಣಿ ಜಾರಿಗೆ ನೌಕರರ ಸಂಘ ಹೋರಾಟ ನಡೆಸಲಿದೆ.ಎನ್‌ಪಿಎಸ್ ನೌಕರರ ಹೋರಾಟದ ವಿರುದ್ಧ ನಾನು ಇಲ್ಲ ಪರವಾಗಿ ಇದ್ದೇನೆ ಆದರೆ ಈ ಸಂದರ್ಭದಲ್ಲಿ ಹೋರಾಟ ಬೇಡ ನನ್ನ ವಿರುದ್ಧ ಕೆಲವರು ಮಾಡುತ್ತಿರುವ ಟೀಕೆ ಟಿಪ್ಪಣಿಗಳಿಗೆ ನಾನು ಹೆದರುವುದಿಲ್ಲ ಎಂದರು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಡಿ. ಮಧುಕೇ ಶ್ವರ್ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಸಿದ್ದಬಸಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ವಿಶ್ವನಾಥ್,ತಾಲ್ಲೂಕು ಸಂಘದ ಗೌರವಾಧ್ಯಕ್ಷ ರೇಣುಕಪ್ಪ,ಹಿರಿಯ ಉಪಾಧ್ಯಕ್ಷ ಪುರುಷೋತ್ತಮ, ಖಜಾಂಚಿ ರಾಮಚಂದ್ರಪ್ಪ, ಕಾರ್ಯದರ್ಶಿ ಬಸವನಗೌಡ ಕೋಣ್ತೆ ಸೇರಿದಂತೆ ಹಲವರು ಈ ಒಂದು ಸಂದರ್ಭದಲ್ಲಿ ಉಪಸ್ಥಿತರಿ ದ್ದರು
ಸುದ್ದಿ ಸಂತೆ ನ್ಯೂಸ್ ಶಿಕಾರಿಪುರ…..