ಬೆಂಗಳೂರು –
CM ಜೊತೆ ನಡೆಯಿತು 7ನೇ ವೇತನ ಆಯೋಗದ ಸಭೆ – ಅರ್ಧ ಗಂಟೆಯ ಸಭೆಯಲ್ಲಿ 7ನೇ ವೇತನ ಆಯೋಗದ ನಿಯೋಗದೊಂದಿಗೆ CM ಚರ್ಚಿಸಿದ್ದೇನು ಕೊಟ್ಟ ಸೂಚನೆಗಳೇನು ಕಂಪ್ಲೀಟ್ ಮಾಹಿತಿ ಹೌದು
ರಾಜ್ಯದ ಸಮಸ್ತ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆಗಾಗಿ ಈಗಾಗಲೇ 7ನೇ ವೇತನ ಆಯೋಗವನ್ನು ರಚನೆ ಮಾಡಲಾಗಿದೆ. ಆಯೋಗವು ಈಗಾಗಲೇ ಸರ್ಕಾರಿ ನೌಕರರಿಗೆ ಎಷ್ಟು ವೇತನ ಪರಿಷ್ಕ್ರರಣೆ ಮಾಡಬೇಕು ಏನು ಎಂಬ ಕುರಿತಂತೆ ಕಂಪ್ಲೀಟ್ ಆದ ಮಾಹಿತಿ ಯನ್ನು ಕಲೆಹಾಕಿ ವರದಿಯನ್ನು ಕೂಡಾ ಸಿದ್ದತೆ ಮಾಡಿದ್ದು
ಈ ನಡುವೆ ಮಾರ್ಚ್ ಗೆ ಅವಧಿ ಮುಕ್ತಾಯ ಗೊಳ್ಳಲಿದ್ದು ಇದರ ನಡುವೆ ಫೆಬ್ರುವರಿ 27 ರಂದು ರಾಜ್ಯ ಮಟ್ಟದಲ್ಲಿ ಸರ್ಕಾರಿ ನೌಕರರ ಮಹಾ ಸಮ್ಮೇಳನ ಕೂಡಾ ನಡೆಯಲಿದ್ದು ಹೀಗಾಗಿ ಫೆಬ್ರುವರಿ 16 ರಂದು ಬಜೆಟ್ ಇರುವ ಹಿನ್ನಲೆ ಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಈ ಒಂದು ಬಜೆಟ್ ನಲ್ಲಿ ಗುಡ್ ನ್ಯೂಸ್ ನೀಡುವ ಉದ್ದೇಶ ದಿಂದ ಮುಖ್ಯಮಂತ್ರಿ ತುರ್ತಾಗಿ 7ನೇ ವೇತನ ಆಯೋಗದ ನಿಯೋಗದೊಂದಿಗೆ ಸಭೆ ಮಾಡಿದರು.
ವಿಧಾನಸೌಧದ ಮುಖ್ಯಮಂತ್ರಿಯವರ ಕೋಠಡಿ ಯಲ್ಲಿ ಈ ಒಂದು ಸಭೆಯನ್ನು ಮಾಡಲಾಯಿತು. ಪ್ರಮುಖವಾಗಿ ಮುಖ್ಯಮಂತ್ರಿಯವರು ಮೊದಲು 7ನೇ ವೇತನ ಆಯೋಗವು ಸಿದ್ದತೆ ಮಾಡಿರುವ ವರದಿ ಕುರಿತಂತೆ ರಾಜ್ಯ ಸರ್ಕಾರಕ್ಕೆ ಎಷ್ಟು ಹೊರೆಯಾಗಲಿದೆ ಏನು ಆರ್ಥಿಕ ವೆಚ್ಚ ಹೊರೆ ಹೀಗೆ ಎಲ್ಲವನ್ನೂ ಚರ್ಚೆಯನ್ನು ಮಾಡಿ ದರು.
ಇದರೊಂದಿಗೆ ಸಧ್ಯ ರಾಜ್ಯದ ಸರ್ಕಾರಿ ನೌಕರರಿಗೆ ಎಷ್ಟು ಪ್ರಮಾಣದಲ್ಲಿ ಬೆನ್ ಪಿಟ್ ಎಷ್ಟು ಪ್ರಮಾ ಣದಲ್ಲಿ ನೀಡಬೇಕು ಹೆಚ್ಚಳ ಮಾಡಬೇಕು ಕೊಡ ಬೇಕು ಸಧ್ಯ ಗ್ಯಾರಂಟಿ ಯೋಜನೆಯಲ್ಲಿ ರಾಜ್ಯ ಸರ್ಕಾರಕ್ಕೆ ಕೊಡಲು ಸಾಧ್ಯವಾಗುತ್ತದೆಯಾ ಹೀಗೆ ಎಲ್ಲಾ ಅಂಶಗಳನ್ನು ಕುಲಂಕುಶವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 7ನೇ ವೇತನ ಆಯೋಗದ ನಿಯೋಗದೊಂದಿಗೆ ಸುಧೀ ರ್ಘವಾಗಿ ಚರ್ಚೆಯನ್ನು ಮಾಡಿದರು.
ಅಲ್ಲದೇ ಬಜೆಟ್ ನಲ್ಲಿ ಈ ಒಂದು ಕುರಿತಂತೆ ಸೇರಿಸಿ ಘೋಷಣೆ ಮಾಡಬಹುದು ಎಂಬ ಅಂಶ ಗಳನ್ನು ಕೂಡಾ ನಿಯೋಗವು ಮುಖ್ಯಮಂತ್ರಿಯ ವರಿಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಒಟ್ಟಾರೆ ಮುುಖ್ಯಮಂತ್ರಿಯವರು ಕೊನೆಗೂ 7ನೇ ವೇತನ ಆಯೋಗವನ್ನು ಜಾರಿಗೆ ತರಲು ಒಪ್ಪಿಕೊಂಡಿದ್ದು ಈ ಒಂದು ಕುರಿತಂತೆ ಇಂದು ಆಯೋಗದೊಂದಿಗೆ ಕಂಪ್ಲೀಟ್ ಆಗಿರುವ ಮಾಹಿತಿಯನ್ನು ಪಡೆದುಕೊಂಡಿದ್ದು
ಬಜೆಟ್ ನಲ್ಲಿ ಘೋಷಣೆ ಮಾಡುತ್ತಾರೆ ಎಂಬ ಮಾತುಗಳನ್ನು ಕೂಡಾ ಹೇಳಿದ್ದಾರೆ.ಹೀಗಾಗಿ ಈ ಒಂದು ಬಜೆಟ್ ನಲ್ಲಿಯೇ ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಇದ್ದು ಎಷ್ಟೇಷ್ಟು ವೇತನ ಹೆಚ್ಚಳ ಮಾಡಲಿದ್ದಾರೆ ರಾಜ್ಯದ ಸರ್ಕಾರಿ ನೌಕರರಿಗೆ ಏನೇನು ನೀಡಲಿ ದ್ದಾರೆ ಎಂಬೊದನ್ನು ಕಾದು ನೋಡಬೇಕಿದೆ.
ಮುಖ್ಯಮಂತ್ರಿಯವರೊಂದಿಗೆ ಸಭೆಯಲ್ಲಿ 7ನೇ ವೇತನ ಆಯೋಗದ ಅಧ್ಯಕ್ಷರು ಸರ್ವ ಸದಸ್ಯರು ಆರ್ಥಿಕ ಇಲಾಖೆಯ ಅಧಿಕಾರಿಗಳು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..