ಬೆಂಗಳೂರು –
ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ವೇತನ ಪರಿಷ್ಕ್ರರಣೆ ವಿಚಾರ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರ 7ನೇ ವೇತನ ಸಮಿತಿಯನ್ನು ರಚನೆ ಮಾಡಿದೆ.ಈ ಒಂದು ಸಮಿತಿ ರಚನೆ ಮಾಡಿ ಆದೇಶದ ಬೆನ್ನಲ್ಲೇ ಸಮಿತಿಯ ಅಧ್ಯಕ್ಷ ನಿವೃತ್ತ ಐಎಎಸ್ ಅಧಿಕಾರಿ ಡಾ ಸುಧಾಕರ್ ರಾವ್ ನೇತ್ರತ್ವದಲ್ಲಿನ ಸಮಿತಿ ಒಂದೊಂದು ಕಾರ್ಯ ಚಟುವಟಿಕೆಗಳನ್ನು ಆರಂಭ ಮಾಡಿದೆ
ಹೌದು ಈಗಷ್ಟೇ ಸಮಿತಿಗೆ ಕಚೇರಿಯನ್ನು ನೀಡಿ ಸಿಬ್ಬಂದಿಗಳನ್ನು ನೀಡಿರುವ ಬೆನ್ನಲ್ಲೇ ಈಗಾಗಲೇ ವರದಿ ತಯಾರಿಕೆಗೆ ಬೇಕಾದ ಎಲ್ಲಾ ಪೂರಕವಾದ ಮಾಹಿತಿಯನ್ನು ಕಲೆಹಾಕಿರುವ ಸಮಿತಿಯ ಅಧ್ಯಕ್ಷರು ಸದಸ್ಯರು ವರದಿ ಸಿದ್ದತೆಯ ಕುರಿತಂತೆ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ.
ಇದು ಒಂದು ವಿಚಾರವಾದರೆ ಇನ್ನೂ ಪ್ರಮುಖ ವಾಗಿ ಸಧ್ಯ ಸಮಿತಿಗೆ 22 ಜನ ಅಧಿಕಾರಿಗಳನ್ನು ಸಿಬ್ಬಂದಿಗಳನ್ನು ನೇಮಕ ಮಾಡಿದ್ದು ಹೀಗಾಗಿ ಕಚೇರಿಯನ್ನು ಕೂಡಾ ನೀಡಲಾಗಿದೆ. ಇದರಿಂ ದಾಗಿ ಮುಂದೆ ಸಾಲು ಸಾಲಾಗಿ ಬರುವ ಚುನಾ ವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಮಿ ತಿಯು ತನ್ನ ಕಾರ್ಯ ಚಟುವಟಿಕೆಗಳನ್ನು ತೀವ್ರ ಗೊಳಿಸಲು ಮುಂದಾಗಿದ್ದು ಕೆಲಸ ಕಾರ್ಯಗ ಳನ್ನು ಆರಂಭ ಮಾಡಿದ್ದು ಚುರುಕುಗೊಂಡಿವೆ.
ಇದರೊಂದಿಗೆ ವರದಿ ಏನೋ ಸಿದ್ದವಾಗಲಿದ್ದು ಆಯೋಗದ ವರದಿಯತ್ತ ರಾಜ್ಯದ ಲಕ್ಷ ಲಕ್ಷ ನೌಕರರು ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿ ದ್ದಾರೆ.ಹೌದು 7ನೇ ವೇತನ ಆಯೋಗದ ಮೇಲೆ ರಾಜ್ಯದ ಸರ್ಕಾರಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವ ವಿದ್ಯಾಲಯಗಳು, ಕಾಲೇಜುಗಳ ಬೋಧಕೇತರ ಸಿಬ್ಬಂದಿಯ ವೇತನ ಕುರಿತು ಪರಿಶೀಲನೆ ನಡೆಸ ಲಿದ್ದು ಪರಿಷ್ಕ್ರರಣೆಯ ಮಾಹಿತಿಯನ್ನು ಸಮಿತಿ ಯ ಅಂತಿಮಗೊಳಿಸಲಿದ್ದು ಈಗಾಗಲೇ ಈ ಒಂದು ವಿಚಾರಗಳನ್ನು ಅಂಶಗಳನ್ನು ವರದಿ ಯಲ್ಲಿ ಉಲ್ಲೇಖ ಮಾಡಿ ಸೇರಸಿಲು ಸಿದ್ದತೆಯನ್ನು ಮಾಡಿಕೊಂಡಿದೆ.
ಇದರೊಂದಿಗೆ ರಾಜ್ಯದ 5.20 ಲಕ್ಷ ರಾಜ್ಯ ಸರ್ಕಾರಿ ನೌಕರರು, ವಿವಿಧ ನಿಗಮ, ಮಂಡಳಿ ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 3 ಲಕ್ಷ ಸರ್ಕಾರಿ ನೌಕರರು, 4 ಲಕ್ಷ ನಿವೃತ್ತ ನೌಕರರಿಗೆ ಈ ಒಂದು 7ನೇ ವೇತನ ಆಯೋಗದಿಂದ ಸಾಕಷ್ಟು ಅನುಕೂಲವಾಗಲಿದೆ ಅಲ್ಲದೇ 1200 ವಿವಿಧ ಕೇಡರ್ ನ ನೌಕರರಿಗೆ ಇದರಿಂದ ಅನುಕೂಲ ಆಗಲಿದ್ದು ಸರ್ಕಾರಕ್ಕೆ 12 ಸಾವಿರ ಕೋಟಿ ರೂಪಾಯಿ ಪ್ರತಿ ವರ್ಷ ಹೆಚ್ಚುವರಿಯಾಗಿ ಹೊರೆ ಬೀಳಲಿದ್ದು ಐದು ವರ್ಷಕ್ಕೊಮ್ಮೆ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಾಗಲಿದೆ ಎಂಬೊದನ್ನು ಈ ಒಂದು ಅಂಶಗಳಿಂದ ತಿಳಿದು ಕೊಳ್ಳಬಹುದಾಗಿದ್ದು ಏನೇ ಆಗಲಿ ಶೀಘ್ರದಲ್ಲೇ ಈ ಒಂದು 7ನೇ ವೇತನ ಆಯೋಗದಿಂದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ ಅದು ಬೇಗನೆ ಜಾರಿಗೆ ಬಂದು ಸಮಸ್ತ ರಾಜ್ಯದ ಸರ್ಕಾರಿ ನೌಕರರ ಬಂಧುಗಳಿಗೆ ನೆರವಾಗಲಿ ಎಂಬೊದು ಸುದ್ದಿ ಸಂತೆಯ ಆಶಯವಾಗಿದ್ದು ಇದರ ನೀರಿಕ್ಷೆಯಲ್ಲಿ ರಾಜ್ಯದ ಸಮಸ್ತ ಸರ್ಕಾರಿ ನೌಕರರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..