ಬೆಂಗಳೂರು –
ಸರ್ಕಾರಕ್ಕೆ ಸಲ್ಲಿಕೆಯಾಯಿತು 7ನೇ ವೇತನ ಆಯೋಗದ ವರದಿ – ಮುಖ್ಯಮಂತ್ರಿಯವರಿಗೆ ವರದಿಯನ್ನು ನೀಡಿದ 7ನೇ ವೇತನ ಆಯೋಗದ ನಿಯೋಗ…..
ಕೊನೆಗೂ ರಾಜ್ಯ ಸರ್ಕಾರಕ್ಕೆ 7ನೇ ವೇತನ ಆಯೋಗದ ವರದಿ ಸಲ್ಲಿಕೆಯಾಗಿದೆ.2022 ರಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆ ಗಾಗಿ ರಚನೆ ಮಾಡಿದ್ದ ಈ ಒಂದು 7ನೇ ವೇತನ ಆಯೋಗವು ವರದಿಯನ್ನು ಸಂಪೂರ್ಣವಾಗಿ ಸಿದ್ದತೆಯನ್ನು ಮಾಡಿದ್ದು ಇಂದು ಬೆಂಗಳೂರಿನಲ್ಲಿ ಆಯೋಗದ ಅಧ್ಯಕ್ಷರ ನೇತ್ರತ್ವದಲ್ಲಿ ವರದಿ ಯನ್ನು ಹಸ್ತಾಂತರ ಮಾಡಲಾಯಿತು.
ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅಧ್ಯಕ್ಷತೆಯ ರಾಜ್ಯದ ಏಳನೇ ವೇತನ ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವರದಿಯನ್ನು ಸಲ್ಲಿಸಿತು ಆಯೋಗದ ಸದಸ್ಯರಾದ ಪಿ.ಬಿ.ರಾಮಮೂರ್ತಿ, ಶ್ರೀಕಾಂತ್ ವನಹಳ್ಳಿ , ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್,
ಕಾ ಡಾ.ಕೆ.ವಿ. ತ್ರಿಲೋಕಚಂದ್ರ, ಹಣಕಾಸು ಇಲಾಖೆ ಕಾರ್ಯದರ್ಶಿ ಡಾ. ಪಿ.ಸಿ. ಜಾಫರ್, ವೇತನ ಆಯೋಗದ ಸದಸ್ಯ ಕಾರ್ಯದರ್ಶಿ ಹೆಫ್ಸಿಬಾರಾಣಿ ಕೊರ್ಲಪಾಟಿ ಉಪಸ್ಥಿತರಿದ್ದರು. ಸಧ್ಯ ಈ ಒಂದು ವರದಿಯನ್ನು ರಾಜ್ಯ ಸರ್ಕಾರಕ್ಕೆ 7ನೇ ವೇತನ ಆಯೋಗವು ಹಸ್ತಾಂತರ ಮಾಡಿದ್ದುಏನೇನಾಗಲಿದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..