ಬೆಂಗಳೂರು –
ಕೊನೆಗೂ ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ನೀಡುವ ವಿಚಾರ ಕುರಿತು ಸಮಿತಿ ಗೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ ಹೀಗಾಗಿ 7ನೇ ವೇತನ ಆಯೋಗ ಯಾರು ಯಾರಿಗೆ ಅನುಕೂಲ ಆಗುತ್ತೆ ಏನೇನು ಶಿಫಾರಸ್ಸು ಮಾಡಲಿದೆ ಕಂಪ್ಲೀಟ್ ಮಾಹಿತಿ ಈ ಕೆಳಗಿನಂತೆ ಇದೆ.
ಅಕ್ಟೋಬರ್ ತಿಂಗಳಲ್ಲಿ 7ನೇ ವೇತನ ಆಯೋಗ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರು ಸೆಪ್ಟೆಂಬರ್ ತಿಂಗಳಲ್ಲಿ ಭರವಸೆ ನೀಡಿದ್ದರೂ ಅಧಿಕೃತವಾಗಿ ಘೋಷಿಸಿರಲಿಲ್ಲ.ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವೇತನ ಆಯೋಗ ರಚನೆಗೆ ಮನವಿ ಮಾಡಿದ್ದರು.
ಇದರ ಬೆನ್ನಲ್ಲೇ ನವೆಂಬರ್ ರಂದು ಮುಖ್ಯಮಂತ್ರಿ ಗಳು ಅಧಿಕೃತವಾಗಿ ವೇತನ ಆಯೋಗ ರಚಿಸು ವುದಾಗಿ ಘೋಷಿಸಿದ್ದರು.ನವೆಂಬರ್ 19 ರಂದು ಈ ಆಯೋಗ ರಚನೆಯಾಗಿದೆ.7ನೇ ವೇತನ ಆಯೋಗವು ಸರ್ಕಾರಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು,ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿ (ಯುಜಿಸಿ/ ಎಐಸಿಟಿಇ/ ಐಸಿಎಆರ್ ವೇತನ ಶ್ರೇಣಿಯ ವೇತನ ಪಡೆಯುತ್ತಿರುವವರನ್ನು ಹೊರತು ಪಡಿಸಿ)ಹಲವು ಅಂಶಗಳನ್ನು ಪರಿಶೀ ಲನೆ ಮಾಡಿ ಶಿಫಾರಸು ಮಾಡಲಿದೆ.
ಸುದ್ದಿ ಸಂತೆ ನ್ಯೂಸ್…..