ವಿಜಯನಗರ –
ಸಾಮಾನ್ಯವಾಗಿ ಕೋವಿಡ್ ಮಹಾಮಾರಿಗೆ ಎಲ್ಲ ರೂ ಭಯಗೊಂಡಿದ್ದಾರೆ.ಅಷ್ಟೋಂದು ಭಯದ ವಾತಾವರಣವನ್ನು ಇದು ಮಾಡಿದ್ದು ಇದರ ನಡುವೆ ಇಲ್ಲೊಬ್ಬ 84 ವಯಸ್ಸಿನ ಅಜ್ಜಿಯೊಬ್ಬರು ಇದನ್ನು ಗೆದ್ದು ಬಂದು ಭಯದಲ್ಲಿರುವವರಿಗೆ ಸ್ಪೂರ್ತಿಯಾಗಿ ದ್ದಾರೆ.

ಹೌದು ಇಂಥಹದೊಂಡು ಚಿತ್ರಣವೊಂದು ಕಂಡು ಬಂದಿದ್ದು ವಿಜಯನಗರ ಜಿಲ್ಲೆಯಲ್ಲಿ.ಕಳೆದ ಹದಿನೈ ದು ದಿನಗಳ ಹಿಂದೆ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕು ಹಿರೇಕೊಳಚಿಯ ಗ್ರಾಮದ ಸಂಗೇನಹಳ್ಳಿ ಕಾಳಮ್ಮ ಎಂಬ 84 ರ ಅಜ್ಜಿಗೆ ಕೊರೊನ ಸೋಂಕು ಕಾಣಿಸಿಕೊಂಡಿತ್ತು ಪರೀಕ್ಷಾ ವರದಿ ಪಾಸಿಟಿವ್ ಎಂದು ಬಂದ ನಂತರ ಗಾಬರಿಗೊಂಡ ಸಂಭಂದಿಕರು ಅಜ್ಜಿಯನ್ನು ನಿರ್ಲಕ್ಷಿಸದೆ ಮನೆಯಲ್ಲಿ ಅಜ್ಜಿಗೆ ಉತ್ತಮ ಹಾರೈಕೆ ಮಾಡಿದರು.

ಮನೆಯವರ ಕಾಳಜಿ ಹಾರೈಕೆ ಪರಿಣಾಮವಾಗಿ ಇದೀಗ ಕುಟುಂಬದವರ ಹಾರೈಕೆಯ ಫಲವಾಗಿ ಕಾಳಮ್ಮ ಕೊರೊನ ಮಹಾಮಾರಿಗೆ ಶೆಡ್ಡು ಹೊಡೆ ದು ಮರಳಿದ್ದಾರೆ

ನಿನ್ನೆ ಮತ್ತೆ ಕೊರೊನ ಪರೀಕ್ಷೆ ನಡೆಸಿದಾಗ ಪರೀಕ್ಷಾ ವರದಿ ನೆಗೆಟಿವ್ ಎಂದು ಬಂದಿದ್ದು ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.ಇನ್ನೂ ಭಯ ದಲ್ಲಿರುವ ಎಲ್ಲರಿಗೂ ಈ ಅಜ್ಜಿ ಸಧ್ಯ ಮಾದರಿಯಾಗಿ ಸ್ಪೂರ್ತಿಯಾಗಿದ್ದಾರೆ.
