ಧಾರವಾಡ –
ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಮತಕ್ಷೇತ್ರ
ಜಿಲ್ಲೆಯಲ್ಲಿ ಶೇ.85.69 ಶಾಂತಿಯುತ ಮತದಾನ ಮತದಾ ರರ ಉತ್ತಮ ಪ್ರತಿಕ್ರಿಯೆ

ಹೌದು ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಜಿಲ್ಲೆಯ 21 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ಜರುಗಿತು.ಮತದಾರರಿಂದ ಉತ್ತಮ ಹಾಗೂ ಉತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶೇ.85.69 ರಷ್ಟು ಮತದಾನವಾಗಿದೆ.
ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ನಿಗದಿತ ಸಮಯ ಬೆಳಿಗ್ಗೆ 8 ಗಂಟೆಗೆ ಮತದಾನ ಆರಂಭವಾಯಿತು.ಬೆಳಿಗ್ಗೆ 10 ಗಂಟೆ ಯವರೆಗೆ ಶೇ.14 ರಷ್ಟು ಮತದಾನವಾಯಿತು.ಮಧ್ಯಾಹ್ನ 12 ಗಂಟೆಗೆ ಶೇ.34.93 ರಷ್ಟು ಮಧ್ಯಾಹ್ನ 2 ಗಂಟೆಗೆ ಶೇ.60.37 ರಷ್ಟು ಮತ್ತು ಸಂಜೆ 4 ಗಂಟೆ ಹೊತ್ತಿಗೆ ಶೇ.79 49 ರಷ್ಟು ಮತದಾನ ಪ್ರಮಾಣದಲ್ಲಿ ಏರಿಕೆ ದಾಖಲಾ ಯಿತು.ಅಂತಿಮವಾಗಿ ಮತದಾನದ ಮುಕ್ತಾಯದ ವೇಳೆಗೆ ಶೇ.85.69 ಮತದಾನವಾಯಿತು.
ಮತಕ್ಷೇತ್ರದ ಚುನಾವಣಾ ವೀಕ್ಷಕರಾಗಿರುವ ವಸತಿ ಇಲಾ ಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಅಬಕಾರಿ ಆಯುಕ್ತರಾದ ಡಾ.ಜೆ.ರವಿಶಂಕರ ಅವರು ಜಿಲ್ಲೆಯ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ,ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ,ಮಹಾನಗರ ಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ,ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ,ಉಪವಿಭಾಗಾಧಿಕಾರಿ ಅಶೋಕ ತೇಲಿ ಸೇರಿದಂತೆ ಹಿರಿಯ ಅಧಿಕಾರಿಗಳು ಜಿಲ್ಲೆಯ ಮತಗಟ್ಟೆಗ ಳಿಗೆ ಭೇಟಿ ನೀಡಿ ಮತದಾನದ ಪ್ರಕ್ರಿಯೆ ಪರಿಶೀಲಿಸಿದರು.
ವಿಶೇಷಚೇತನರಿಗೆ ಮತದಾನಕ್ಕೆ ಅನುಕೂಲವಾಗುವಂತೆ ಎಲ್ಲ ಮತಗಟ್ಟೆಗಳಲ್ಲಿ ವೀಲ್‍ಚೇರ್,ರ್ಯಾಂಪ್ ಮತ್ತಿತರ ಸೌಕರ್ಯಗಳ ಏರ್ಪಾಡು ಮಾಡಲಾಗಿತ್ತು.ಪ್ರತಿ ಮತದಾನ ಕೇಂದ್ರಗಳಲ್ಲಿ ಕೋವಿಡ್ ಸುರಕ್ಷತಾ ನಿಯಮಗಳ ಅನ್ವಯ ಥರ್ಮಲ್ ಸ್ಕ್ಯಾನಿಂಗ್,ಸ್ಯಾನಿಟೈಸರ್ ಮತ್ತಿತರ ಕ್ರಮಗಳ ನ್ನು ಕೈಗೊಳ್ಳಲಾಗಿತ್ತು.ಪ್ರತಿ ಮತಗಟ್ಟೆಗಳಲ್ಲಿ ಆರೋಗ್ಯ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ ಇದ್ದರು.
ಮತದಾನದ ನಂತರ ಮತಪೆಟ್ಟಿಗೆಗಳನ್ನು ಧಾರವಾಡ ತಹಶೀಲ್ದಾರ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ತಾತ್ಕಾಲಿಕ ಭದ್ರತಾಕೊಠಡಿಗಳಲ್ಲಿ ಕ್ರೋಢೀಕರಿಸಿ ನಂತರ ಬೆಳಗಾವಿ ಯ ಮತ ಎಣಿಕೆ ಕೇಂದ್ರಕ್ಕೆ ಬಿಗಿಭದ್ರತೆಯೊಂದಿಗೆ ಕಳುಹಿ ಸಲಾಯಿತು. ಜೂನ್ 15 ರಂದು ಬೆಳಗಾವಿಯಲ್ಲಿ ಮತಗ ಳ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.