ರಾಜ್ಯದಲ್ಲಿ 980 ಶಾಲೆಗಳಿಗೆ ಬೀಳಲಿದೆ ಬೀಗಮುದ್ರೆ – ಬಿಇಒ ಗಳಿಗೆ ಖಡಕ್ ಸೂಚನೆ ನೀಡಿದ ಇಲಾಖೆ…..

Suddi Sante Desk


ಬೆಂಗಳೂರು –

ರಾಜ್ಯದಲ್ಲಿ 980 ಶಾಲೆಗಳಿಗೆ ಬೀಗ ಹಾಕಲು ಶಿಕ್ಷಣ ಇಲಾಖೆ ಬಿಇಒ ಗಳಿಗೆ ಸೂಚನೆಯನ್ನು ನೀಡಿದೆ ಹೌದು ಅನುಮತಿ ಯಿಲ್ಲದೆ ದಾಖಲಾತಿ ಮಾಡಿಕೊಂಡಿರುವ 980 ಶಾಲೆಗಳಿಗೆ ಬೀಗಮುದ್ರೆ ಹಾಕಲು ಇಲಾಖೆ ಮುಂದಾಗಿದೆ.ಸರ್ಕಾರದ ಅನುಮತಿ ಪಡೆಯದೆ ದಾಖಲಾತಿ ಮಾಡಿಕೊಂಡಿರುವ ಸುಮಾರು 980 ಶಾಲೆಗಳಿಗೆ ಬೀಗಮುದ್ರೆ ಬೀಳುವ ಆತಂಕ ಎದುರಾಗಿದೆ. 2022-23ರ ಶೈಕ್ಷಣಿಕ ವರ್ಷದ ಮಾನ್ಯತೆ ಮುಕ್ತಾಯ ಅಥವಾ ಮಾನ್ಯತೆ ಇಲ್ಲದೆ ನಡೆಸುತ್ತಿರುವ ಶಾಲೆ ಗಳನ್ನು ಕಾನೂನು ಬಾಹಿರ ಎಂದು ಘೋಷಣೆ ಮಾಡು ವಂತೆ ಬಿಇಒಗಳಿಗೆ ಈಗಾಗಲೇ ಇಲಾಖೆಯ ಮೇಲಾಧಿಕಾ ರಿಗಳು ಸೂಚನೆಯನ್ನು ನೀಡಿದ್ದಾರೆ.

ಶಿಕ್ಷಣ ಸಂಸ್ಥೆಗಳು ಹೊಸದಾಗಿ ಶಾಲೆ ಪ್ರಾರಂಭ ಮಾಡಲು 2022-23ನೇ ಸಾಲಿಗೆ ಅರ್ಜಿ ಸಲ್ಲಿಕೆಮಾಡಿದ್ದವು ಆದರೆ ಶಿಕ್ಷಣ ಇಲಾಖೆ ಅನುಮತಿ ನೀಡುವ ಮೊದಲೇ ಅದೆಷ್ಟೋ ಶಾಲೆಗಳು ದಾಖಲಾತಿ ಪ್ರಕ್ರಿಯೆಯನ್ನೇ ಮುಗಿಸಿವೆ ಇನ್ನೂ ಹೊಸದಾಗಿ ಅರ್ಜಿಸಲ್ಲಿಸಿರುವ 980ಕ್ಕೂ ಹೆಚ್ಚು ಖಾಸಗಿ ಶಾಲೆಗಳು ಇದರಿಂದ ಅತಂತ್ರವಾಗಿವೆ.ಇದರಲ್ಲಿ ಕೆಲವು ಶಾಲೆಗಳಿಗೆ ಬರುವ ದಿನಗಳಲ್ಲಿ ಅನುಮತಿಯು ಸಿಗಬ ಹುದು.ಇನ್ನೂ ಕೆಲವು ಶಾಲೆಗಳಿಗೆ ನಿಯಮ ಉಲ್ಲಂಘನೆ ಯಡಿ ಅನುಮತಿಯನ್ನು ನಿರಾಕರಿಸಲುಬಹುದು ಅನು ಮತಿ ನಿರಾಕರಿಸದರೆ ಅಂತಹ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನವು ಅತಂತ್ರವಾಗಲಿದೆ.

ಅಂದಾಜಿನ ಪ್ರಕಾರ 980 ಶಾಲೆಯ 30000 ಸಾವಿರ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಲಿದೆ ಎನ್ನಲಾಗುತ್ತಿದೆ ಶಿಕ್ಷಣ ಇಲಾಖೆಯು ಅನುಮತಿ ನೀಡುವ ಮೊದಲೇ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ದಾಖಲಾತಿ ಮಾಡಿಕೊಂಡಿವೆ. ಮೇ ಮತ್ತು ಜೂನ್ ತಿಂಗಳಲ್ಲಿ ದಾಖಲಾತಿ ಮಾಡಿಕೊಂಡಿ ರುವ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡಲು ಹೊರಟಿವೆ.ಇದರಿಂದಾಗಿ ಎಚ್ಚೆತ್ತ ಶಿಕ್ಷಣ ಇಲಾಖೆ ಇಂತಹ ಶಾಲೆಗಳನ್ನು ಸಮೀಪದ ಪೊಲೀಸರಿಗೆ ದೂರು ನೀಡಿ ಮುಚ್ಚಿಸಲು ಮುಂದಾಗಿದೆ.ಜೂ 23 ಖಾಸಗಿ ಶಾಲೆಗಳಿಗೆ ಅನುಮತಿ ನೀಡಲು ಆನ್ ಲೈನ್ ನಲ್ಲಿ ಶಿಕ್ಷಣ ಇಲಾಖೆ ಅರ್ಜಿ ಆಹ್ವಾನಿಸಲಾಗಿತ್ತು.ಜುಲೈ 25 ರವರೆಗೂ ಅವಕಾಶ ಕಲ್ಪಿಸಲಾಗಿತ್ತು.ಈ ನಡುವೆ ಹೊಸದಾಗಿ ಅರ್ಜಿ ಸಲ್ಲಿಸಿರುವ 980ಕ್ಕೂ ಖಾಸಗಿ ಶಿಕ್ಷಣ ಸಂಸ್ಥೆಗಳು ಅತಂತ್ರ ವಾಗುವ ಹಂತ ತಲುಪಿವೆ.ಶಾಲೆಗಳು ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಶಾಲೆಗಳಿಗೆ ಅನುಮತಿ ನೀಡಬೇಕೆಂದಿಲ್ಲ. ಶಾಲೆ ಗಳು ಅರ್ಜಿ ಸಲ್ಲಿಸುವ ವೇಳೆಯೇ ವಿದ್ಯಾರ್ಥಿಗಳನ್ನು ದಾಖಲೆ ಮಾಡಿಕೊಳ್ಳಲು ಅನುಮತಿ ನೀಡಿರುವುದಿಲ್ಲ. ಶಿಕ್ಷಣ ಇಲಾಖೆಯಿಂದ ಮಾನ್ಯತೆ ದೊರೆಯಬೇಕಾದರೆ ಇಲಾಖೆಯ ಎಲ್ಲಾ ನಿಯಮವನ್ನು ಪರಿಪಾಲಿಸಿರಬೇಕಾಗು ತ್ತದೆ.ಆ ನಿಯಮ ಪರಿಪಾಲನೆಯ ಬಳಿಕವಷ್ಟೇ ಶಾಲೆಗೆ ಮಾನ್ಯತೆ ನೀಡಬೇಕೋ ಬೇಡವೋ ಎಂಬುದನ್ನು ನಿರ್ಧರಿ ಸಲಾಗುತ್ತದೆ.ಆದರೆ ಇಲಾಖೆಯಿಂದ ಅನುಮತಿ ಸಿಗುವ ಮೊದಲೇ ಶಾಲೆಗಳನ್ನು ತೆರೆಯಲಾಗಿದ್ದ ಅಂತಹ ಶಿಕ್ಷಣ ಸಂಸ್ಥೆ ಅತಂತ್ರವಾಗಲಿವೆ.ಶಿಕ್ಷಣ ಇಲಾಖೆ ಅಥವಾ ಕೇಂದ್ರ ಇಲಾಖೆಗಳಿಂದ ಅನುಮತಿಯನ್ನು ಪಡೆಯದೆ ಶಾಲೆ ಯನ್ನು ನಡೆಸುವಂತಿಲ್ಲ. ಅಂತಹ ಶಾಲೆಗಳು ಗಮನಕ್ಕೆ ಬಂದರೇ ಪೋಷಕರಿಗೆ ಅನಕೃತ ಶಾಲೆಯ ಬಗ್ಗೆ ಸ್ಥಳೀಯ ಪತ್ರಿಕೆಯಲ್ಲಿ ಸ್ಥಳೀಯವಾಗಿ ಅನಧಿಕೃತ ಶಾಲೆ ಎಂಬುದನ್ನು ಪ್ರಕಟಿಸಬೇಕು. ಅನಧಿಕೃತ ಶಾಲೆಯಲ್ಲಿ ವ್ಯಾಸಂಗಮಾಡಿದ ಮಕ್ಕಳಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಕೃತ ಮಾನ್ಯತೆನೀಡಲು ಬರುವುದಿಲ್ಲ.ಮಕ್ಕಳ ಶೈಕ್ಷಣಿಕ ಭವಿಷ್ಯ ಹಾಳಾಗುವ ಉದ್ದೇ ಶದಿಂದ ಸ್ಥಳೀಯ ಪೋಲೀಸ್ ಠಾಣೆಗೆ ಸಿಆರ್ಪಿ ಬಿ ಆರ್ ಪಿ, ಶಿಕ್ಷಣ ಸಂಯೋಜಕರೇ ದೂರನ್ನು ನೀಡುವ ಮೂಲಕ ಅನಕೃತ ಶಾಲೆಯನ್ನು ಮುಚ್ಚುವ ಕೆಲಸ ಮಾಡಬೇಕು ಎಂದು ಆದೇಶಿಸಲಾಗಿದೆ. ಆ ಮೂಲಕ ಶಿಕ್ಷಣ ಇಲಾಖೆ ಅನಕೃತ ಸಂಸ್ಥೆಯನ್ನು ಮುಚ್ಚಿಸುವ ಕೆಲಸಕ್ಕೂ ಮುಂದಾ ಗಿದೆ.ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲು ಜನವರಿಯಲ್ಲೇ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ. 2022-23ನೇ ಸಾಲಿಗೆ ಎಂದೇ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ. ಅರ್ಜಿಯನ್ನು ಸಲ್ಲಿಸುವ ವೇಳೆ ಕಟ್ಟಡ ಹೊಂದಿರಬೇಕು, ಅಗ್ನಿಸುರಕ್ಷತೆ, ಲೋಕೋಪಯೋಗಿ ಇಲಾಖೆಯ ಬಿಲ್ಡಿಂಗ್ ಸೆಫ್ಟಿ ಪತ್ರ,ಶಾಲೆಗೆ ಬೇಕಾಗಿರುವ ಡೆಸ್ಕ್,ಮೇಜು ಸೇರಿದಂತೆ ಪೀಠೋಪಕರಣ,ಆಟೋಪಕರಣ,ವಾಹನ,ಶೌಚಾಲಯ, ನೀರಿನ ವ್ಯವಸ್ಥೆ ಹೀಗೆ ಎಲ್ಲ ಸೌಲಭ್ಯವನ್ನು ಸರಿಮಾಡಿ ಕೊಂಡು ಅರ್ಜಿಯನ್ನು ಹಾಕಬೇಕಾಗಿರುತ್ತದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.