ಬೆಂಗಳೂರು –
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್‍ಸ್ಟೇಬಲ್ ಆಗಿ ಮೂರು ವರ್ಷ ಸೇವಾವಧಿ ಪೂರ್ಣಗೊಳಿಸಿದ 72 ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್‍ಗಳಿಗೆ ಹೆಡ್ ಕಾನ್‍ಸ್ಟೇಬಲ್ ಆಗಿ ಮುಂಭಡ್ತಿ ನೀಡಲಾಗಿದೆ.

ಈ ಸಂಬಂಧ KSRP ಎಡಿಜಿಪಿ ಅಲೋಕ್ ಕುಮಾರ್ ಅವರು ಆದೇಶ ಹೊರಡಿಸಿದ್ದು, ರಾಜ್ಯ ಪೊಲೀಸ್ ಮೀಸಲು ಪಡೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 72 ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್‍ಗಳು ಭಡ್ತಿ ಪಡೆದಿದ್ದಾರೆ.

ಕಾನ್‍ಸ್ಟೇಬಲ್ ಹುದ್ದೆಯಲ್ಲಿ ಕೇವಲ 3 ವರ್ಷ ಸೇವಾವಧಿ ಪೂರೈಸಿದ ಮಂಜುಳಾ ಬಿ.ಹುನಗುಂಡಿ ಅವರಿಗೆ ಹೆಡ್ ಕಾನ್‍ಸ್ಟೇಬಲ್ ಆಗಿ ಪದೋನ್ನತಿ ನೀಡಲಾಗಿದೆ. ಪೊಲೀಸ್ ಇಲಾಖೆಯಲ್ಲೇ ಪ್ರಥಮ ಬಾರಿಗೆ ಕಡಿಮೆ ವರ್ಷಗಳ ಸೇವಾವಧಿಯಲ್ಲಿ ಭಡ್ತಿ ಪಡೆದ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.

ಅದೇ ರೀತಿ, KSRP ಯ 4 ನೇ ಪಡೆಯ ಘಟಕದ ಮಹಿಳಾ ಸಿಬ್ಬಂದಿ ರಂಜಿತಾ ಮತ್ತು H R ಅನಿತಾ ಎಂಬುವರು 24ನೆ ವರ್ಷಕ್ಕೆ ಹೆಡ್‍ಕಾನ್‍ಸ್ಟೇಬಲ್ ಆಗಿ ಪದೋನ್ನತಿ ಪಡೆದಿದ್ದಾರೆ. ಇನ್ನು, 3 ವರ್ಷ ಸೇವೆ ಪೂರೈಸಿದ ಒಬ್ಬ ಮಹಿಳಾ ಪೊಲೀಸ್ ಹಾಗೂ 4 ವರ್ಷ ಸೇವೆ ಪೂರೈಸಿದ 27 ಮಂದಿ ಮತ್ತು 5 ವರ್ಷ ಸೇವೆ ಪೂರೈಸಿದ 34 ಮಹಿಳಾ ಪೊಲೀಸರು ಸೇರಿ ಒಟ್ಟು 72 ಮಹಿಳಾ ಕಾನ್‍ಸ್ಟೇಬಲ್‍ಗಳಿಗೆ ಮುಂಭಡ್ತಿ ನೀಡಲಾಗಿದೆ.