ಶಿಕ್ಷಣ ಸಚಿವರ ಅಸಮಾಧಾನ ದೇಶವನ್ನು ಕೊಳ್ಳೆ ಹೊಡೆದ ಲೂಟಿಕೋರರ ಇತಿಹಾಸಗಳೇ ಹೆಚ್ಚಾಗಿವೆ…..

Suddi Sante Desk

ಬೆಳಗಾವಿ –

ಪ್ರಾಥಮಿಕ‌ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಪಠ್ಯಕ್ರಮದ ವಿಚಾರ ಕುರಿತು ಅಸಮಾ ಧಾನ ವ್ಯಕ್ತಪಡಿಸಿದ್ದಾರೆ.ಬೆಳಗಾವಿ ಯಲ್ಲಿ ಮಾತನಾ ಡಿದ ಅವರು ಈಗಿನ ಪಠ್ಯದಲ್ಲಿ ತ್ಯಾಗ ಬಲಿದಾನಗ ಳನ್ನು ಮಾಡಿದ ಅನೇಕ ಮಹನೀಯರ ಹೆಸರುಗಳು ಮಾಯವಾಗಿ ದೇಶವನ್ನು ಕೊಳ್ಳೆ ಹೊಡೆದ ಲೂಟಿ ಕೋರರ ಇತಿಹಾಸಗಳೇ ಹೆಚ್ಚಾಗಿವೆ.ಇದರಿಂದ ವಿದ್ಯಾರ್ಥಿಗಳು ಇಂತಹ ಇತಿಹಾಸಗಳಿಂದ ಏನು ನೀತಿ ಪಾಠ ಕಲಿಯಲು ಸಾಧ್ಯ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ರಾಣಿ ಕಿತ್ತೂರು ಚನ್ನಮ್ಮ,ಸಂಗೊಳ್ಳಿ ರಾಯಣ್ಣ, ಭಗತಸಿಂಗ್‌,ಝಾನ್ಸಿರಾಣಿ ಲಕ್ಷ್ಮೀಬಾಯಿ,ಉಲ್ಲಾಳ ರಾಣಿ ಅಬ್ಬಕ್ಕ ದೇವಿ ಅಂತಹ ಮಹಾನ್‌ ನಾಯಕರ ತ್ಯಾಗ ಬಲಿದಾನಗಳ ಬಗ್ಗೆ ಅರಿಯುವುದು ಮಹತ್ವ ದ್ದಾಗಿದೆ.ನೂತನ ಶಿಕ್ಷಣ ನೀತಿಯು ಪರಿಣಾಮಕಾರಿ ಯಾಗಿ ಉಪಯೋಗಕ್ಕೆ ಬರಲಿದ್ದು ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೇ ಇದನ್ನು ಜಾರಿ ಮಾಡಲಾಗಿದೆ ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.