ಅವರಿವರ ನಡುವೆ ರಾಕೇಶ್ ದೊಡಮನಿ ಅವರೇ ಈ ಬಾರಿ ನಮ್ಮ ವಾರ್ಡ್ ಗೆ ಬೆಸ್ಟ್ ಬಾಸ್ ಎನ್ನುತ್ತಿದ್ದಾರೆ 4 ನೇ ವಾರ್ಡ್ ಜನತೆ…..

Suddi Sante Desk

ಧಾರವಾಡ –

ಧಾರವಾಡದ 4 ನೇ ವಾರ್ಡ್ ನಲ್ಲಿ ಪಕ್ಷೇತರ ಅಭ್ಯರ್ಥಿ ರಾಕೇಶ್ ದೊಡಮನಿ ಪರ ಗೆಲುವಿನ ಅಲೆ ಕಂಡು ಬರತ್ತಿದೆ.ಹೌದು ಈ ಹಿಂದೆ ಪಕ್ಷದಲ್ಲಿದ್ದು ಕೊಂಡು ಅಧಿಕಾರದಲ್ಲಿ ಇರದಿದ್ದರೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಕಾರ್ಯಗಳನ್ನು ಮಾಡಿದ ಇವರಿಗೆ ವಾರ್ಡ್ ನಲ್ಲಿ ಮತದಾರರು ಉತ್ತಮವಾದ ಸ್ಪಂದನೆ ನೀಡಿದ್ದಾರೆ.

ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ ಕೂಡಾ ಕ್ಷೇತ್ರದ ಶಾಸಕರು ಮತ್ತು ಸಂಸದರು ಕೇಂದ್ರದ ಸಚಿವರಾಗಿರುವ ಪ್ರಹ್ಲಾದ್ ಜೋಶಿ ಅವರೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ಅನುದಾನವನ್ನು ತಗೆದು ಕೊಂಡು ಬಂದು ಅಭಿವೃದ್ದಿಯನ್ನು ಮಾಡಿರುವ ಇವರು ಈಗ ವಾರ್ಡ್ ನ ಜನತೆಯ ಸೇವೆಗೆ ಮುಂದಾಗಿದ್ದಾರೆ.

ಅದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ದ್ದಾರೆ ಹೀಗಾಗಿ ಸಧ್ಯ ಪಕ್ಷದ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಯನ್ನು ಮಾಡಿದ್ದಾರೆ. ಅಖಾಡಕ್ಕೆ ಇಳಿದಾಗಿನಿಂದ ಸಂತಸಗೊಂಡಿರುವ ವಾರ್ಡ್ ನ ಜನರು ಮತದಾರರು ಈಗ ರಾಕೇಶ್ ದೊಡಮನಿ ಪರ ಧ್ವನಿಯಾಗಿ ನಿಂತುಕೊಂಡಿದ್ದಾರೆ.

ನಾಮಪತ್ರ ಸಲ್ಲಿಸಿ ಪ್ರಚಾರ ಕೈಗೊಂಡ ಇವರಿಗೆ ಆರಂಭದಿಂದಲೂ ಗೆಲುವಿನ ಮಾತುಗಳನ್ನು ಹೇಳುತ್ತಿರುವ ಮತದಾರರು ಬದಲಾವಣೆ ಬಯಸಿ ದ್ದೇವೆ ಅದು ನಿಮ್ಮಿಂದಾಗಲಿ ಎನ್ನುತ್ತಿದ್ದಾರೆ.ಹೀಗಾಗಿ ವಾರ್ಡ್ ನಲ್ಲಿ ಸಧ್ಯ ಪಕ್ಷೇತರ ಅಭ್ಯರ್ಥಿ ಪರ ಅಲೆ ಜೋರಾಗಿ ಕೇಳಿ ಬರುತ್ತಿದ್ದು ಹೊಸ ಕನಸು ಹೊಸ ಅಭಿವೃದ್ದಿಯ ಯೋಜನೆಗಳೊಂದಿಗೆ ಸ್ಪರ್ಧೆ ಮಾಡಿರುವ ಇವರಿಗೆ ವಾರ್ಡ್ ನಲ್ಲಿ ಮತದಾರರು ಜೈ ಜೈ ಎನ್ನುತ್ತಿದ್ದು ಈ ಬಾರಿ ವಾರ್ಡ್ ನಲ್ಲಿ ನಿಮ್ಮದೇ ಗೆಲುವು ನಿವೇ ನಮಗೆ ಬಾಸ್ ಎನ್ನುತ್ತಾ ಗೆಲುವಿನ ಮಾತುಗಳನ್ನು ಹೇಳಿ ಆಶೀರ್ವಾದವನ್ನು ಮಾಡುತ್ತಿದ್ದಾರೆ.

ಹೀಗಾಗಿ ವಾರ್ಡ್ ನಲ್ಲಿ ರಾಕೇಶ್ ದೊಡಮನಿ ಯವರು ಅಬ್ಬರದ ಪ್ರಚಾರವನ್ನು ಮಾಡುತ್ತಿದ್ದಾರೆ. ಬಿಡುವಿಲ್ಲದೇ ಅಬ್ಬರದ ಪ್ರಚಾರವನ್ನು ಮಾಡುತ್ತಿ ದ್ದಾರೆ.ಕೇಂದ್ರದಲ್ಲಿ ನಮ್ಮದೇ ಸರ್ಕಾರ ರಾಜ್ಯದಲ್ಲಿ ನಮ್ಮ ಸರ್ಕಾರ ಹೀಗಾಗಿ ಪಾಲಿಕೆಯಲ್ಲಿ ಚುನಾವಣೆ ಯಲ್ಲಿ ಗೆಲುವು ಸಾಧಿಸಿದರೆ ಅನುಕೂಲವಾಗುತ್ತದೆ ಎಂದುಕೊಂಡಿರುವ ಇವರು ಮತದಾರರಲ್ಲಿ ಅಭಿವೃದ್ದಿಯ ಕೆಲಸ ಕಾರ್ಯಗಳೊಂದಿಗೆ ಬಿಡುವಿಲ್ಲದೇ ಮತಯಾಚನೆಯಲ್ಲಿ ತೊಡಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.