ತನ್ನ ಮಾತೃ ಸಂಸ್ಥೆಗೆ ಒಂದು ಲಕ್ಷ ದತ್ತಿ ನೀಡಿದ ಅಕ್ಷರತಾಯಿ ಲೂಸಿ ಸಾಲ್ಡಾನ – ಮುಂದುವರಿದ ಮಾತೆಯ ಮಹಾನ್ ಕಾರ್ಯ…..

Suddi Sante Desk

ಧಾರವಾಡ –

ಧಾರವಾಡದ ಅಕ್ಷರತಾಯಿ ದತ್ತಿದಾನಿ ಶ್ರೀಮತಿ ಲೂಸಿ ಸಾಲ್ಡಾನರವರು ಇಂದು ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಗೆ ಒಂದು ಲಕ್ಷ ರೂಪಾಯಿ ದತ್ತಿ ನಿಧಿ ಸ್ಥಾಪಿಸಿದರು.ದತ್ತಿ ನಿಧಿ ಚೆಕ್ ನ್ನು ಸಂಘದ ಗೌರವಾದ್ಯಕ್ಷರಾದ ಭೀಮಪ್ಪ ಕಾಸಾಯಿ ಇವರಿಗೆ ಇಂದು ಧಾರವಾಡದ ತಾಲ್ಲೂಕು ಟೀಚರ್ಸ್ ಸೊಸೈಟಿಯಲ್ಲಿ ಸಂಸ್ಥಾಪಕರು ಲೂಸಿ ಸಾಲ್ಡಾನರ ವರು ಚೆಕ್ ವಿತರಿಸಿದರು‌.

ಈ ಹಣದಲ್ಲಿ ಬರುವ ಬಡ್ಡಿಯಲ್ಲಿ ಪ್ರತಿವರ್ಷ ಶಿಕ್ಷಕರತ್ನ,ಶ್ರಮಿಕರತ್ನ, ಹಾಗೂ ವಿವಿಧ ರಂಗದಲ್ಲಿ ಸಾಧನೆ ಮಾಡಿದ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಆಯೋ ಜಿಸಲು ಕರೆ ನೀಡಿದರು.ಸಂಸ್ಥೆಗೆ ಸದಸ್ಯತ್ವವನ್ನು ಯಾರಿಗೂ ಒತ್ತಾಯ ಮಾಡದೇ ಯಾರು ಅಭಿಮಾ ನದಿಂದ ಸಂಸ್ಥೆಯ ಗುರಿ ಉದ್ದೇಶಗಳನ್ನು ಒಪ್ಪಿ ಕೊಂಡು ಬರುವವರನ್ನು ಮಾತ್ರವೇ ಸದಸ್ಯತ್ವವನ್ನು ಕೊಡಬೇಕು ಎಂದರು.ಈ ವರ್ಷ ಶಿಕ್ಷಕ ಸಾಹಿತಿ ವಾಯ್ ಬಿ ಕಡಕೋಳ ಅವರ ಸಂಪಾದಕತ್ವದಲ್ಲಿ ನನ್ನ ಅಡುಗೆ ವೈವಿಧ್ಯ ಪುಸ್ತಕ ಬಿಡುಗಡೆ ಆಗಲಿದೆ ಎಂದರು

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿ ಎನ್ ಕೀರ್ತಿವತಿ ಮಾತನಾಡಿ ಈ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಲೂಸಿ ಅವರ ಬಾಬಾಜಾನ ಮುಲ್ಲಾ ಅವರ ನಿರ್ದೇಶನದಲ್ಲಿ ಬದುಕು ಬಂಡಿ ಸಿನೆಮಾ ಬಿಡುಗಡೆ ಆಗಲಿದ್ದು ಆ ಕಾರ್ಯಕ್ರಮದಲ್ಲಿ ಶಿಕ್ಷಕರತ್ನ ಶ್ರಮಿಕರತ್ನ ರಾಜ್ಯ ಪ್ರಶಸ್ತಿಯನ್ನು ನೀಡಲಾಗುವುದು ಎಂದರು ಅಧ್ಯಕ್ಷತೆಯನ್ನು ವಹಿಸಿದ್ದ ಗೌರವಾದ್ಯಕ್ಷರ ಭೀಮಪ್ಪ ಕಾಸಾಯಿ ಮಾತನಾಡಿ ಈ ಕಾರ್ಯಕ್ರಮಕ್ಕೆ ಈ ಸಲ ಉದ್ಘಾಟಕರನ್ನಾಗಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಮತ್ತು ಶಿಕ್ಷಣ ಸಚಿವರ ನಾಗೇಶ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರನ್ನು ಅವ್ಹಾನಿಸೋಣ ಎಂದರು

ಈ ಸಲದ ಪ್ರಶಸ್ತಿಗಳನ್ನು ಕರೋನ ಸಂಕಷ್ಟದ ಸಮಯದಲ್ಲಿ ಪರ್ಯಾಯ ಶಿಕ್ಷಣ ಮೂಲಕ ಮಕ್ಕಳ ಕಲಿಕೆಗೆ ವಿಶಿಷ್ಟವಾದ ರೀತಿಯಲ್ಲಿ ಶ್ರಮವಹಿಸಿದ ಶಿಕ್ಷಕರನ್ನು ಮತ್ತು ಶ್ರಮಿಕರತ್ನ ಪ್ರಶಸ್ತಿಯನ್ನು ಕುಲಕಸುಬುಗಳನ್ನು ಮುನ್ನಡೆಸಿ ಕೊಂಡು ಹೋಗುವ ಮಹನೀಯರನ್ನು ಗುರುತಿಸ ಲಾಗುತ್ತದೆ ಎಂದರು.ಲೂಸಿ ಸಾಲ್ಡಾನ ಅವರು ಸಂಸ್ಥೆಗೆ ಇಂದು ಇಟ್ಟ ದತ್ತಿನಿಧಿ ಇದು ಪಿಕ್ಸಡಿಪಾ ಜಿಟ್ ಆಗಲಿದ್ದು ಇದರ ಬಡ್ಡಿಯಲ್ಲಿ ಮಾತ್ರ ಕಾರ್ಯಕ್ರಮ ಹಾಗೂ ಇತರೆ ಒಳ್ಳೆಯ ಕಾರ್ಯಕ್ರಮ ಗಳಿಗೆ ಬಳಸಲಾಗುತ್ತದೆ ಎಂದರು

ಗಂಗವ್ವ ಕೋಟಿಗೌಡರ ಹಸೀನ ಸಮುದ್ರಿ ಚಂದ್ರಶೇಖರ ತಿಗಡಿ ವಾಯ್ ಬಿ ಕಡಕೋಳ ಅಜೀತಸಿಂಗ ರಜಪೂತ ಎಲ್ ಐ ಲಕ್ಕಮ್ಮನವರ, ಭೀಮಪ್ಪ ಕಾಸಾಯಿ ವಿ ಎನ್ ಕೀರ್ತಿವತಿ ಇದೇ ಸಂದರ್ಭದಲ್ಲಿ ಅಜೀವ ಸದಸ್ಯತ್ವವನ್ನು ಪಡೆದರು, ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಚಂದ್ರಶೇಖರ ತಿಗಡಿ ಸಭೆಯ ವಿಷಯಗಳನ್ನು ವಿವರಿಸಿ, ಸಂಸ್ಥೆಯ ಮುಂದಿನ ಕಾರ್ಯಯೋಜನೆಗಳನ್ನು ವಿವರಿಸಿ ಸಭೆಯ ಒಪ್ಪಿಗೆಯನ್ನು ಪಡೆದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.